ಭಾನುವಾರ, ಆಗಸ್ಟ್ 14, 2022
28 °C

ಗುಮ್ಮಟನಗರಿಯಲ್ಲಿ ₹100 ಗಡಿ ದಾಟಿದ ಪೆಟ್ರೋಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ‘ಗುಮ್ಮಟನಗರಿ’ ವಿಜಯಪುರದಲ್ಲಿ ಶುಕ್ರವಾರ ವಿವಿಧ ಕಂಪನಿಗಳ ಪೆಟ್ರೋಲ್‌ ಪಂಪ್‌ಗಳಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ ₹100ರ ಗಡಿ ದಾಟಿದೆ.

ರಿಲಯನ್ಸ್‌ ಪೆಟ್ರೋಲ್‌ ಪಂಪ್‌ನಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ ₹100.40 ಹಾಗೂ ಡೀಸೆಲ್‌ ₹ 93.10 ಆಗಿದೆ. ಬಿಪಿಸಿಎಲ್‌ನಲ್ಲಿ ಪೆಟ್ರೋಲ್‌ ದರ  ₹100.01 ಮತ್ತು ಡೀಸೆಲ್‌ ₹92.85 ಆಗಿದೆ. ಬಿಪಿಸಿಎಲ್‌ ಸ್ಪೀಡ್‌ ಪೆಟ್ರೋಲ್‌ ಲೀಟರ್‌ಗೆ ಈಗಾಗಲೇ ₹102.64 ಆಗಿದೆ.

ಐಒಸಿಎಲ್‌ನಲ್ಲಿ ಪಂಪ್‌ಗಳಲ್ಲಿ ಪೆಟ್ರೋಲ್‌ ₹99.93, ಡೀಸೆಲ್‌ ₹92.77 ಹಾಗೂ ಎಚ್‌ಪಿಸಿಎಲ್‌ ಪೆಟ್ರೋಲ್‌ ದರ ₹ 99.99, ಡೀಸೆಲ್‌ 92.83 ಆಗಿದೆ. 

ರಾಜ್ಯದ ಬೆಂಗಳೂರು, ಬಳ್ಳಾರಿ, ಶಿರಸಿ ಸೇರಿದಂತೆ ವಿವಿಧ ನಗರದಲ್ಲಿ ₹100ರ ಗಡಿ ದಾಟಿರುವ ಪೆಟ್ರೋಲ್‌ ದರವು ಇದೀಗ ವಿಜಯಪುರ ನಗರದಲ್ಲೂ ದಾಖಲೆ ಬರೆದಿದ್ದು, ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ.

‘ಈ ಮೊದಲು ₹200 ಪೆಟ್ರೋಲ್‌ ಹಾಕಿಸಿಕೊಳ್ಳುತ್ತಿದ್ದವರು. ಈಗ ₹ 100 ಪೆಟ್ರೋಲ್‌ ಹಾಕಿಸಿಕೊಳ್ಳುತ್ತಿದ್ದಾರೆ. ₹ 100 ಪೆಟ್ರೋಲ್‌ ಹಾಕಿಸಿಕೊಳ್ಳುತ್ತಿದ್ದವರು ಈಗ ₹ 50 ಪೆಟ್ರೋಲ್‌ ಹಾಕಿಸಿಕೊಳ್ಳುತ್ತಿದ್ದಾರೆ. ಪೆಟ್ರೋಲ್‌ ಪಂಪ್‌ಗೆ ಬರುವ ಬಹುತೇಕ ವಾಹನಗಳ ಮಾಲೀಕರು ಬೆಲೆ ಏರಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ’ ಎಂದು ನಗರದ ಹುಂಡೇಕಾರ್‌ ಪೆಟ್ರೋಲಿಯಮ್ಸ್‌ನ ಮಾಲೀಕ ಅರುಣ ಹುಂಡೇಕರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತೈಲ ದರ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಎಡ ಪಕ್ಷಗಳು ನಗರ ಸೇರಿದಂತೆ ಈಗಾಗಲೇ ಜಿಲ್ಲೆಯಾದ್ಯಂತ ಪ್ರತಿಭಟನೆ ದಾಖಲಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು