ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಸಲ್‌ ಭಿಮಾ ಯೋಜನೆ ನೋಂದಣಿ ಪ್ರಾರಂಭ

Last Updated 7 ಜುಲೈ 2020, 13:33 IST
ಅಕ್ಷರ ಗಾತ್ರ

ವಿಜಯಪುರ: ಮುಂಗಾರು ಹಂಗಾಮಿನ 2020-21ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ ಭಿಮಾ(ವಿಮಾ) ಯೋಜನೆಗೆ ನೋಂದಣಿ ಈಗಾಗಲೇ ಆರಂಭವಾಗಿದ್ದು, ಆಸಕ್ತ ರೈತರು ವಿವಿಧ ಬೆಳೆಗಳಿಗೆ ವಿಮಾ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ್‌ ತಿಳಿಸಿದ್ದಾರೆ.

ನೀರಾವರಿ ಮುಸುಕಿನ ಜೋಳ, ಮಳೆ ಆಶ್ರಿತ ಮುಸುಕಿನ ಜೋಳ, ನೀರಾವರಿ ಸಜ್ಜೆ, ಮಳೆ ಆಶ್ರಿತ ಸಜ್ಜೆ, ಮಳೆ ಆಶ್ರಿತ ಉದ್ದು, ಮಳೆ ಆಶ್ರಿತ ತೊಗರಿ, ನಿರಾವರಿ ತೊಗರಿ, ಮಳೆ ಆಶ್ರಿತ ಹುರುಳಿ, ನೀರಾವರಿ ಸೂರ್ಯಕಾತಿ, ಮಳೆ ಆಶ್ರಿತ ಸೂರ್ಯಕಾಂತಿ, ನೀರಾವರಿ ನೆಲಗಡಲೆ(ಶೇಂಗಾ), ಮಳೆ ಆಶ್ರಿತ ನೆಲಗಡಲೆ(ಶೇಂಗಾ), ನೀರಾವರಿ ಹತ್ತಿ, ಟೊಮೆಟೊ ಬೆಳೆಗಳ ನೋಂದಣಿಗೆ ಜುಲೈ 31 ಕೊನೆಯ ದಿನವಾಗಿದೆ.

ಮಳೆ ಆಶ್ರಿತ ಹೆಸರು, ಮಳೆ ಆಶ್ರಿತ ಎಳ್ಳು ಬೆಳೆಗಳ ನೋಂದಣಿಗೆ ಜುಲೈ 15 ಕೊನೆಯ ದಿನವಾಗಿದ್ದು, ಇನ್ನುಳಿದ ಮಳೆ ಆಶ್ರಿತ ಹತ್ತಿ, ನೀರಾವರಿ ಈರುಳ್ಳಿ, ನೀರಾವರಿ ಕೆಂಪು ಮೆಣಸಿನಕಾಯಿ ಬೆಳೆಗಳಿಗೆ ಆಗಸ್ಟ್‌ 14 ಕೊನೆಯ ದಿನವಾಗಿದೆ. ಆಸಕ್ತರು ಈ ದಿನಾಂಕದೊಳಾಗಿ ನೋಂದಣಿ ಮಾಡಿಕೊಳ್ಳಲು ತಿಳಿಸಿದ್ದಾರೆ.

ರೈತರು ಕಡ್ಡಾಯವಾಗಿ ತಮ್ಮ ಬ್ಯಾಂಕ್ ಖಾತೆಗಳನ್ನು ಎನ್.ಪಿ.ಸಿ.ಐ ಆಧಾರ್ ಜೋಡಣೆ ಮಾಡಿಸಿರಬೇಕು. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಅಥವಾ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT