ಚಡಚಣ: ರೈತರು ಸಮಗ್ರ ವ್ಯವಸಾಯದೊಂದಿಗೆ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬಹುದು ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

ಸಮೀಪದ ಹಲಸಂಗಿ ಗ್ರಾಮದಲ್ಲಿ ಸೋಮವಾರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘದ ನೂತನ ಕಟ್ಟಡ ಲೋಕಾರ್ಪಣೆ ಮಾಡಿ ಮಾತನಾಡಿದರು.

ಸಂಘ ಕಟ್ಟುವುದಕ್ಕಿಂತ ನಿರ್ವಹಣೆ ಜವಾಬ್ದಾರಿ ಮಹತ್ವದ ಪಾತ್ರವಹಿಸುತ್ತದೆ. ಆ ನಿಟ್ಟಿನಲ್ಲಿ ಹಲಸಂಗಿ ಶಾಖೆ ತನ್ನ ಕೆಲಸ ಅಚ್ಚುಕಟ್ಟಾಗಿ ಮಾಡಿದೆ ಎಂದರು.

ಶಾಸಕ ವಿಠ್ಠಲ ಕಟಕಧೋಂಡ ಮಾತನಾಡಿ, ರೈತರು ಕೃಷಿ ಮಾಡಿ ನಮ್ಮ ಬ್ಯಾಂಕ್ಗಳಿಗೆ ಸಾಲು ಕೊಡುವ ಕಾಲ ಬರಬೇಕು. ಅದಕ್ಕಾಗಿ ರೈತರು ವೈಜ್ಞಾನಿಕ ಕೃಷಿಗೆ ಒತ್ತು ನೀಡಬೇಕು ಎಂದರು.

ಪ್ರಸ್ತಾವಿಕವಾಗಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ ಮತನಾಡಿ, ‘ಆರಂಭದಲ್ಲಿ ₹ 34 ಲಕ್ಷದಿಂದ ಈಗ ₹ 1 ಕೋಟಿ ಠೇವಣಿ ಹೊಂದುವುದರೊಂದಿಗೆ ಪ್ರಗತಿ ಪಥದಲ್ಲಿ ನಮ್ಮ ಶಾಖೆ ಸಾಧನೆ ಮಾಡಿದೆ’ ಎಂದರು.

ಮುಖಂಡ ಎಂ.ಆರ್.ಪಾಟೀಲ,ಜಿ.ಪಂ.ಮಾಜಿ ಸದಸ್ಯ ಪಂಚಪ್ಪ ಕಲಬುರಗಿ ಮಾತನಾಡಿದರು.

ಸಾನಿಧ್ಯ ವಹಿಸಿದ್ದ ಯರನಾಳ ಸಂಗನಬಸವ ಸ್ವಾಮೀಜಿ, ಬಸವರಾಜ ಪೂಜಾರಿ, ಮಹಾಂತೇಶ ಹಿರೇಮಠ ವಹಿಸಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಜಿ. ಪಾಟೀಲ, ಮಾಜಿ ಶಾಸಕ ದೇವಾನಂದ್ ಚವ್ಹಾಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ನಿತೀಶ ಮನಮಿ ಇದ್ದರು.

ವಿಡಿಸಿಸಿ ಬ್ಯಾಂಕ್ ಮಹಿಳೆಯರ ಸ್ವಸಹಾಯ ಸಂಘದಲ್ಲಿ ಶೂನ್ಯ ಬಡ್ಡಿದರದಲ್ಲಿ ಹೈನುಗಾರಿಕೆ ಸ್ವ ಉದ್ಯೋಗಕ್ಕೆ ಸಾಲ ನೀಡುವುದರೊಂದಿಗೆ ಚಿಕ್ಕ ಹಿಡುವಳಿಗಾರರಿಗೆ ಮನೆ ನಿರ್ಮಾಣಕ್ಕೆ ಶೇ 10ರ ಬಡ್ಡಿ ದರದಲ್ಲಿ ಸಾಲ ನೀಡುತ್ತದೆ. ಅದರ ಪ್ರಯೋಜನ ಪಡೆದುಕೊಳ್ಳಿ
ಶಿವಾನಂದ ಪಾಟೀಲ ಅಧ್ಯಕ್ಷ ವಿಡಿಸಿಸಿ ಬ್ಯಾಂಕ್ ವಿಜಯಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.