ಸೋಲಾಪುರ: ಡಿ. 8, 9 ರಂದು ಕಂಬರ ತಲಾವ ರಸ್ತೆ ಓವರ್ ಬ್ರಿಜ್ (ROB) ದುರಸ್ತಿ ಹಿನ್ನೆಲೆಯಲ್ಲಿ –ಸೋಲಾಪುರದಲ್ಲಿನ ರೈಲು ಮತ್ತು ರಸ್ತೆ ಸಂಚಾರದ ಮೇಲೆ ಪರಿಣಾಮ ಬೀರಲಿದೆ.

ಮಧ್ಯ ರೈಲ್ವೆಯ ಸೋಲಾಪುರ ವಿಭಾಗವು ಸೋಲಾಪುರ– ವಾಡಿ ಮಾರ್ಗದ ಮೇಲಿರುವ ವಿಜಯಪುರ ರಸ್ತೆ ರಾಷ್ಟ್ರೀಯ ಹೆದ್ದಾರಿ (ರಾ.ಹೆ –52) ಕಂಬರ ತಲಾವ (ಕೆರೆ) ಬಳಿ ಇರುವ ಸೋಲಾಪುರ ಪಿಎಸ್ಸಿ ರಸ್ತೆ ಓವರ್ ಬ್ರಿಡ್ಜ್ (ROB) ಸೇತುವೆ ಸಂಖ್ಯೆ 456/4ರ ಮೇಲಿನ ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ:

ಡಿ. 6 ರಂದು ಸಂಜೆ 4:10 ರಿಂದ 7:10ರ ವರೆಗೆ 3 ಗಂಟೆ ಕಾಲ ಸಂಚಾರ ನಿಷೇಧಿಸಲಾಗಿದೆ. ರೈಲು ಸಂಖ್ಯೆ 11311 ಸೋಲಾಪುರ–ಹಾಸನ್ ಎಕ್ಸ್ಪ್ರೆಸ್ — ನಿರ್ದಿಷ್ಟ ಸಮಯಕ್ಕಿಂತ 20 ನಿಮಿಷ ತಡವಾಗಿ ಚಾಲನೆ. ರೈಲು ಸಂಖ್ಯೆ 57662 ಮತ್ತು 57661 ವಿಜಯಪುರ–ರಾಯಚೂರು ಎಕ್ಸ್ಪ್ರೆಸ್ — ನಿರ್ದಿಷ್ಟ ಸಮಯಕ್ಕಿಂತ 1 ಗಂಟೆ 45 ನಿಮಿಷ ತಡವಾಗಿ ಸಂಚರಿಸಲಿದೆ. ಡಿ. 8, 9ರ ಸಂಜೆ 4:10 ರಿಂದ ಸಂಜೆ 7:10 ವರೆಗೆ ಸಂಚಾರ ನಿಷೇಧ ಇರಲಿದೆ.

ರೈಲುಗಳ ಸಮಯ:

16382 ಕನ್ನ್ಯಾಕುಮಾರಿ–ಪೂಣೆ ಎಕ್ಸ್ಪ್ರೆಸ್ — 2 ಗಂಟೆ ವಿಳಂಬ.

11020 ಭುವನೇಶ್ವರ–ಸಿಎಸ್ಎಂಟಿ ಮುಂಬೈ ಕೋಣಾರ್ಕ್ ಎಕ್ಸ್ಪ್ರೆಸ್ — 1 ಗಂಟೆ 30 ನಿಮಿಷ ವಿಳಂಬ.

01422 ಕಲಬುರಗಿ–ದೌಂಡ್ ವಿಶೇಷ ರೈಲು — 45 ನಿಮಿಷ ವಿಳಂಬ.

11311 ಸೋಲಾಪುರ–ಹಾಸನ್ ಎಕ್ಸ್ಪ್ರೆಸ್ — 20 ನಿಮಿಷ ವಿಳಂಬ.

17308 ಬಾಗಲಕೋಟೆ–ಮೈಸೂರು ಬಸವ ಎಕ್ಸ್ಪ್ರೆಸ್ — 30 ನಿಮಿಷ ವಿಳಂಬ.

ಸೋಲಾಪುರ ನಗರ ಆಡಳಿತದ ಆದೇಶದ ಪ್ರಕಾರ ಡಿ. 8 ಮತ್ತು 9ರಂದು ಮಧ್ಯಾಹ್ನ 3 ರಿಂದ ರಾತ್ರಿ 8ರವರೆಗೆ ಪತ್ರಕರ್ತ ಭವನ ಚೌಕ್ದಿಂದ ಜುನಾ ವಿಜಯಪುರ ನಾಕಾ ಮಾರ್ಗದ ನಡುವಿನ ಎಲ್ಲಾ ವಾಹನ ಸಂಚಾರ ಸಂಪೂರ್ಣ ನಿಷೇಧವಾಗಲಿದೆ. ಪರ್ಯಾಯ ಮಾರ್ಗಗಳ ವಿವರಗಳಿಗೆ ಸೋಲಾಪುರ ನಗರ ಸಂಚಾರ ಪೊಲೀಸ್ ಇಲಾಖೆಯ ಸೂಚನೆಗಳನ್ನು ಅನುಸರಿಸಬೇಕು ಎಂದು ಮಧ್ಯ ರೈಲ್ವೆಯ ಸೋಲಾಪುರ ವಿಭಾಗದ ಜನಸಂಪರ್ಕ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.