ಸೋಮವಾರ, ಮೇ 23, 2022
30 °C

ಟೆಕ್‌ಬೈಟ್ಸ್: ಐಮನ್ ಪಾಟೀಲ್‌ ಪ್ರಥಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಮತ್ತು ಐಟಿ ಶಿಕ್ಷಣ ಗುಣಮಟ್ಟಗಳ ಮಂಡಳಿ (ಬೈಟ್ಸ್) ಆಯೋಜಿಸಿದ್ದ ಟಿಸಿಎಸ್ ಟೆಕ್‌ಬೈಟ್ಸ್‌ನ 13ನೇ ಆವೃತ್ತಿಯಲ್ಲಿ ವಿಜಯಪುರ ನಗದ ಬಿಎಲ್‌ಡಿಇಎ  ಎಂಜಿನಿಯರಿಂಗ್‌ ಕಾಲೇಜಿನ ಐಮನ್ ಪಾಟೀಲ್ ವಿಜೇತರಾಗಿದ್ದು, ₹ 85 ಸಾವಿರ ವಿದ್ಯಾರ್ಥಿ ವೇತನ ಪಡೆದುಕೊಂಡಿದ್ದಾರೆ.

ಬೆಳಗಾವಿಯ ಕೆಎಲ್‌ಇ ಡಾ. ಎಂ.ಎಸ್. ಶೇಷಗಿರಿ ಎಂಜಿನಿಯರಿಂಗ್‌ ಕಾಲೇಜಿನ ಧೀರಜ್ ದಾನೇಶ ಅಂಗಡಿ ರನ್ನರ್ ಅಪ್ ಆಗಿದ್ದಾರೆ. ₹50 ಸಾವಿರ ವಿದ್ಯಾರ್ಥಿ ವೇತನ ನೀಡಲಾಯಿತು.

ಟಿಸಿಎಸ್ ಬೆಂಗಳೂರು ವಿಭಾಗದ ಮುಖ್ಯಸ್ಥ ಸುನೀಲ್ ದೇಶಪಾಂಡೆ ಪ್ರಶಸ್ತಿ ಪ್ರದಾನ ಮಾಡಿದರು. ಪ್ರೊ.ಜಿ.ಜಗದೀಶ್ ಮತ್ತು ಬೈಟ್ಸ್ ಅಧ್ಯಕ್ಷ ಡಾ.ಕೆ.ಎನ್.ಬಾಲಸುಬ್ರಮಣ್ಯ ಮೂರ್ತಿ ಉಪಸ್ಥಿತರಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು