ಬಸವನಬಾಗೇವಾಡಿ: ‘ಬೇರೆ ಮಹತ್ಮರು, ಶರಣರ ಜಯಂತಿ ಆಚರಣೆಗೆ ಹಾಗೂ ಪ್ರಾಧಿಕಾರಗಳಿಗೆ ಸರ್ಕಾರ ಕೋಟ್ಯಂತರ ಹಣ ನೀಡುವಂತೆ ಜಾತ್ಯತೀತ ಸಮಾಜದ ಪರಿಕಲ್ಪನೆ ಪರಿಚಯಿಸಿದ ಬಸವಣ್ಣನವರ ಬಗ್ಗೆಯೂ ಚಿಂತನೆ ಮಾಡಬೇಕು. ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಇತರೆ ಬಸವ ಕ್ಷೇತ್ರಗಳ ಅಭಿವೃದ್ಧಿಗೂ ಸರ್ಕಾರ ಹೆಚ್ಚಿನ ಅನುದಾನ ಒದಗಿಸಬೇಕು’ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

ಸೆ.1ರಂದು ಬಸವ ಜನ್ಮಸ್ಥಳ ಬಸವನ ಬಾಗೇವಾಡಿಯಿಂದಲೇ ರಾಜ್ಯದಾದ್ಯಂತ ಬಸವ ಸಂಸ್ಕೃತಿ ಅಭಿಯಾನಕ್ಕೆ ಚಾಲನೆ ನೀಡುತ್ತಿರುವ ಹಿನ್ನೆಲೆ ಪಟ್ಟಣದ ನಂದೀಶ್ವರ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

‘ಬಸವಣ್ಣನವರು ಸಮಸಮಾಜದ ಸಾವಿರಾರು ವರ್ಷಗಳ ಭವಿಷ್ಯ ಅರಿತು 12ನೇ ಶತಮಾನದಲ್ಲೇ ಜಾತಿರಹಿತ, ಕಾಯಕ–ದಾಸೋಹ ಸಮಾಜ ನಿರ್ಮಿಸಲು ಶ್ರಮಿಸಿ ಇಂದಿಗೂ ಪ್ರಸ್ತುತವಾಗಿದ್ದಾರೆ. ಮಾನವ ಕುಲಕ್ಕೆ ಜಯವಾಗಲಿ ಎನ್ನುವ ನಾವು ಜಾತಿ, ಉಪಜಾತಿ ಹೆಸರಲ್ಲಿ ಸಂಘರ್ಷಕ್ಕೆ ಇಳಿಯುವ ದೃಷ್ಠಿಕೋನದಲ್ಲಿ ಬದುಕಿದರೆ ಅದು ಬಸವಣ್ಣನವರ ಹೆಸರಿಗೆ ಅಪಚಾರ ಮಾಡಿದಂತೆ. ಸರ್ಕಾರ ಮಾಡಲಾಗದಂತಹ ತ್ರಿವಿಧ ದಾಸೋಹ ಕೈಂಕರ್ಯವನ್ನು ನಾಡಿನ ಅನೇಕ ಮಠಮಾನ್ಯಗಳು ಮಾಡುತ್ತಿವೆ. ಹಲವಾರು ಶರಣರು, ಸಂತರು ಬಸವ ಪರಂಪರೆಯಲ್ಲಿ ಸಾಗಿ ಸಮಾಜದಲ್ಲಿ ಸಾಮರಸ್ಯ ಸೃಷ್ಠಿಸಲು ತಮ್ಮದೇಯಾದ ಸೇವೆ ಸಮರ್ಪಿಸಿದ್ದಾರೆ’ ಎಂದು ಸ್ಮರಿಸಿದರು.

ಸ್ಥಳೀಯ ವಿರಕ್ತಮಠದ ಸಿದ್ದಲಿಂಗ ಮಹಾಸ್ವಾಮೀಜಿ ಮಾತನಾಡಿ, ‘ಬಸವ ಸಂಸ್ಕೃತಿ ಅಭಿಯಾನದ ಚಾಲನೆಗೆ ಈ ಭಾಗದ ಬಸವಪರ ಸಂಘಟನೆಗಳು, ಸಾಹಿತ್ಯ, ರೈತಪರ ಎಲ್ಲಾ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಸರ್ವ ಬಸವಭಕ್ತರು ಕೈಜೋಡಿಸಿ ಯಶಸ್ವಿಗೊಳಿಸಬೇಕು. ಈ ಕಾರ್ಯಕ್ಕಾಗಿ ಎಲ್ಲಾ ಸಮಿತಿಗಳನ್ನು ರಚಿಸಿಕೊಂಡು ಕಾರ್ಯ ಪ್ರವೃತ್ತರಾಗುವಂತೆ ಸಚಿವರು ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ನಿರಂತರ ಸಭೆಗಳನ್ನು ಮಾಡಿ, ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳೋಣ. ಆಗಸ್ಟ್ 17ರಂದು ಮತ್ತೊಂದು ಪ್ರಮುಖ ಪೂರ್ವಭಾವಿ ಸಭೆ ಕರೆಯಲಾಗಿದೆ’ ಎಂದು ತಿಳಿಸಿದರು.

ನಾಗನೂರು ರುದ್ರಾಕ್ಷಿಮಠದ ಅಲ್ಲಮಪ್ರಭು ಸ್ವಾಮೀಜಿ, ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಬಸನಗೌಡ ಹರನಾಳ, ರೈತ ಮುಖಂಡ ಅರವಿಂದ ಕುಲಕರ್ಣಿ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿದರು. ಹಲವು ಹಿರಿಯರು, ಪ್ರಮುಖರು ಸಲಹೆ– ಸೂಚನೆಗಳನ್ನು ನೀಡಿದರು.

ಇಂಗಳೇಶ್ವರದ ಚನ್ನಬಸವ ಸ್ವಾಮೀಜಿ, ಮಸಬಿನಾಳ ವಿರಕ್ತಮಠದ ಸಿದ್ದರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಾಲ್ಲೂಕು ಲಿಂಗಾಯತ ಮಹಾಸಭಾದ ಅಧ್ಯಕ್ಷ ಎಫ್.ಡಿ. ಮೇಟಿ, ಹಿರಿಯರಾದ ಶಿವನಗೌಡ ಬಿರಾದಾರ, ಶೇಖರಗೌಡ ಪಾಟೀಲ, ಡಾ. ಜೆ.ಎಸ್. ಪಾಟೀಲ, ಅಪ್ಪಾಸಾಹೇಬ ಯರನಾಳ, ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಸಿ.ಎಸ್.ಪಾಟೀಲ, ಬಸವರಾಜ ಗೊಳಸಂಗಿ, ಡಾ. ರವಿಕುಮಾರ ಬಿರಾದಾರ, ಎಂ.ಜಿ. ಆದಿಗೊಂಡ, ಮುಖಂಡರಾದ ಸಂಗಮೇಶ ಓಲೇಕಾರ, ಶಂಕರಗೌಡ ಬಿರಾದಾರ, ರವಿ ರಾಠೋಡ, ಸುರೇಶ ಹಾರಿವಾಳ, ಶೇಖರ ಗೊಳಸಂಗಿ ಇದ್ದರು.

ಅಭಿಯಾನದ ಯಶಸ್ಸಿಗೆ ಕೈಜೋಡಿಸಲು ಕರೆ:

‘ಬಸವಣ್ಣನವರು ಜಗತ್ತಿಗೆ ಸಾಂಸ್ಕೃತಿಕ ನಾಯಕರಾದರೂ ಅದು ಕೇವಲ ಪತ್ರಿಕೆ ಪುಸ್ತಕಗಳಿಗೆ ಸೀಮಿತವಾಗಬಾರದು. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮೂರು ಬಾರಿ ಪತ್ರಗಳನ್ನು ಬರೆದಿದ್ದೇನೆ. ಬಸವ ತತ್ವ ಪ್ರಸಾರ ಅನುಷ್ಠಾನಕ್ಕಾಗಿ ರಾಜ್ಯದಾದ್ಯಂತ ಹಮ್ಮಿಕೊಂಡಿರುವ ಬಸವ ಸಂಸ್ಕೃತಿ ಅಭಿಯಾನಕ್ಕೆ ಆರಂಭಿಕ ಶಕ್ತಿ ತುಂಬಲು ಬಸವನಾಡಿನ ಎಲ್ಲಾ ಬಸವ ಅನುಯಾಯಿಗಳು ಭಕ್ತರು ಸಂಘ– ಸಂಸ್ಥೆಗಳೆಲ್ಲಾ ಒಗ್ಗೂಡೋಣ. ಜಿಲ್ಲಾಮಟ್ಟದ ಸಮಿತಿ ಉಪ ಸಮಿತಿಗಳನ್ನು ರಚಿಸಿಕೊಂಡು ಎಲ್ಲಾ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿ ಇಡೀ ರಾಜ್ಯದ ಚಿತ್ತ ಬಸವನ ಬಾಗೇವಾಡಿಯತ್ತ ಹರಿಯುವಂತೆ ಮಾಡೋಣ’ ಎಂದು ಸಚಿವರು ಕರೆ ಕೊಟ್ಟರು.

ಸೆ.1ರಂದು ಅಭಿಯಾನಕ್ಕೆ ಚಾಲನೆ:

‘ಸೆ.1ರಂದು ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಅಂದು ಬೆಳಿಗ್ಗೆ ವಿದ್ಯಾರ್ಥಿಗಳೊಂದಿಗೆ ವಚನ ಸಂವಾದ ಸಂಜೆ 4ಕ್ಕೆ ಬಸವ ಸ್ಮಾರಕದಿಂದ ಬಸವ ರಥಕ್ಕೆ ಚಾಲನೆ 1100 ತಾಯಂದಿರಿಂದ ವಚನ ಕಟ್ಟುಗಳನ್ನು ಹೊತ್ತು 770 ಶರಣಗಣಂಗಳ ಸಂಸ್ಮರಣೆ ಹಿನ್ನೆಲೆ 770 ಶರಣರಿಂದ ಧ್ವಜಗಳನ್ನು ಹಿಡಿದು ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ಸಾಗುವುದು ಸಂಜೆ 6ಕ್ಕೆ ನಂದೀಶ್ವರ ರಂಗಮಂದಿರದಲ್ಲಿ ವಚನ ಸಂಗೀತ ಉಪನ್ಯಾಸ ರಾತ್ರಿ 8ಕ್ಕೆ ‘ಜಂಗಮದೆಡೆಗೆ’ ನಾಟಕ ಪ್ರದರ್ಶನ ಜರುಗಲಿದೆ’ ಎಂದು ಅಥಣಿ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.