ಮುದ್ದೇಬಿಹಾಳ: ಹೆಚ್ಚುತ್ತಿರುವ ರಸ್ತೆ ಅಪಘಾತಗಳ ತಡೆಗೆ ತಾಳಿಕೋಟಿ ಹಾಗೂ ಮುದ್ದೇಬಿಹಾಳ ಪೊಲೀಸ್ ಠಾಣೆಗಳಿಂದ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಮುಖ ನಗರಗಳನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಗಳ ಬಳಿ ಅಪಘಾತ ವಲಯದಲ್ಲಿ ಪೊಲೀಸ್ ಕಾನ್ಸ್ಟೆಬಲ್ ಕಟೌಟ್ ಅನ್ನೇ ಸೂಚನಾ ಫಲಕದಂತೆ ನಿಲ್ಲಿಸಲಾಗಿದೆ.

ವಿನೂತನ ಪ್ರಯತ್ನದ ಮೂಲಕ ವಾಹನ ಚಾಲಕರ ಗಮನ ಸೆಳೆದು, ಅಪಘಾತ ವಲಯದಲ್ಲಿ ನಿಧಾನವಾಗಿ ಚಲಿಸುವಂತೆ ಎಚ್ಚರಿಸುವ ಪ್ರಯತ್ನ ಮಾಡಲಾಗುತ್ತಿದೆ.

ಮುದ್ದೇಬಿಹಾಳ ನಗರದಿಂದ ಆಲಮಟ್ಟಿ ರಸ್ತೆಯಲ್ಲಿ, ತಂಗಡಗಿ ರಸ್ತೆಯಲ್ಲಿ, ತಾಳಿಕೋಟಿ ರಸ್ತೆಯಲ್ಲಿ ಹಾಗೂ ವಿಜಯಪುರ ರಸ್ತೆಯಲ್ಲಿ ಕಟೌಟ್ಗಳನ್ನು ನಿಲುಗಡೆ ಮಾಡಲಾಗಿದೆ. ಮುದ್ದೇಬಿಹಾಳದ ಹುಡ್ಕೊ ಮುಂಭಾಗದಲ್ಲಿರುವ ಡಿವೈಡರ್ನಲ್ಲೂ ಕಟೌಟ್ ನಿಲ್ಲಿಸಿ ಸೂಚನೆ ನೀಡಲಾಗಿದೆ.

ಇದಲ್ಲದೇ, ಮುದ್ದೇಬಿಹಾಳ ತಾಲ್ಲೂಕಿನ ಅಬ್ಬಿಹಾಳ ಕ್ರಾಸ್ ಬಳಿ ಸ್ವತಃ ಪಿಎಸ್ಐ ಸಂಜಯ ತಿಪರೆಡ್ಡಿ ಅವರೇ ಸ್ಪೀಡ್ ರೇಡಾರ್ ಗನ್ನಿಂದ ವಾಹನಗಳ ವೇಗವನ್ನು ಅಳೆದು, ತಪ್ಪಿತಸ್ಥರಿಗೆ ದಂಡ ವಿಧಿಸುವ ಕಾರ್ಯ ಮಾಡಿದ್ದಾರೆ.

ಸೆಪ್ಟೆಂಬರ್–ಅಕ್ಟೋಬರ್ ತಿಂಗಳಲ್ಲಿ ವಿವಿಧ ಕಡೆಗಳಲ್ಲಿ ನಡೆದ ರಸ್ತೆ ಅಪಘಾತಗಳಲ್ಲಿ ತಾಲ್ಲೂಕಿನ ಬಾಲಕಿಯೂ ಸೇರಿದಂತೆ 10ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡರು. ಇದರಿಂದ ಪೊಲೀಸ್ ಇಲಾಖೆ ಅಪಘಾತಗಳ ತಡೆಗೆ ತೀವ್ರ ಕಟ್ಟೆಚ್ಚರ ವಹಿಸಿದೆ.

ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು, ರಸ್ತೆ ಅಪಘಾತಗಳನ್ನು ತಡೆಯಲು ಪೊಲೀಸರು ಕೈಗೊಂಡಿರುವ ಕ್ರಮ ಸ್ವಾಗತಾರ್ಹ. ಆದರೆ, ಸಾರ್ವಜನಿಕರಾದ ನಮ್ಮ ಜವಾಬ್ದಾರಿಯೂ ಹೆಚ್ಚಿದೆ. ಕಿಡಿಗೇಡಿಗಳು ಕಟೌಟ್ನ ಕತ್ತನ್ನೇ ಕತ್ತರಿಸಿದ್ದು ವಿಷಾದನೀಯ ಹಾಗೂ ಅವಮಾನಕರ. ನಾವು ಇಲಾಖೆಗೆ ಸಹಕಾರ ನೀಡಬೇಕೇ ಹೊರತು ಇಂತಹ ಘಟನೆಗಳು ಮರುಕಳಿಸಬಾರದು’ ಎಂದು ವಿಜಯಪುರ ಜಿಲ್ಲಾ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎಂ.ಸಿ. ಕಬಾಡೆ ಹೇಳಿದರು.

ಮುದ್ದೇಬಿಹಾಳ ತಾಳಿಕೋಟೆ ವ್ಯಾಪ್ತಿಯ ಪ್ರಮುಖ ರಸ್ತೆಗಳ ಅಪಘಾತ ವಲಯಗಳಲ್ಲಿ ಪೊಲೀಸ್ ಕಾನ್ಸ್ಟೆಬಲ್ ಕಟೌಟ್ ನಿಲ್ಲಿಸಿದ್ದು ವಾಹನ ಸವಾರರು ಅಪಘಾತ ವಲಯಗಳಲ್ಲಿ ಎಚ್ಚರದಿಂದ ಸಾಗಬೇಕು

-ಮಲ್ಲಿಕಾರ್ಜುನ ತುಳಸಿಗೇರಿ ಸಿಪಿಐ

ಅಪಘಾತಗಳ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಮುಖ್ಯ. ಕುಡಿದು ವೇಗವಾಗಿ ವಾಹನ ಚಲಾಯಿಸುವುದು ಸಂಚಾರ ನಿಯಮ ನಿರ್ಲಕ್ಷಿಸುವುದನ್ನು ತ್ಯಜಿಸಿದರೆ ಅಪಘಾತಗಳಿಗೆ ಕಡಿವಾಣ ಸಾಧ್ಯ

-ಸಂಜಯ ತಿಪರೆಡ್ಡಿ ಪಿಎಸ್ಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.