ವಿಜಯಪುರ: ‘ವಂದೇ ಮಾತರಂ’ ಗೀತೆಯ 150 ವಸಂತಗಳ ಸಂಭ್ರಮದ ಬಿಜೆಪಿ ನಗರ ಘಟಕದಿಂದ ಶಿವಾಜಿ ವೃತ್ತದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ‘ವಂದೇ ಮಾತರಂ’ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಶೆಟ್ಟಿ ಮಾತನಾಡಿ, ವಂದೇ ಮಾತರಂ ಗೀತೆ ಹಾಡಿದಾಗ ದೇಶಭಕ್ತಿ ಭಾವ ಜಾಗೃತಗೊಳ್ಳುತ್ತದೆ. ಅಷ್ಟೊಂದು ದೇಶಾಭಿಮಾನ ಆ ಗೀತೆಯಲ್ಲಿ ಪ್ರತಿಬಿಂಬಿಸುತ್ತದೆ. ವಂದೇ ಮಾತರಂ ಗೀತೆ ಹಾಡುವಾಗ ಪ್ರತಿ ಪದದಲ್ಲೂ ದೇಶಭಕ್ತಿ ವೃದ್ಧಿಸುತ್ತದೆ. ದೇಶಭಕ್ತಿಯನ್ನೇ ಉಸಿರಾಗಿಸಿಕೊಂಡಿದ್ದ ಬಂಕೀಮಚಂದ್ರ ಚಟರ್ಜಿ ಅವರು ರಚಿಸಿದ ವಂದೇ ಮಾತರಂ ಗೀತೆ ನಮ್ಮ ಭಾರತ ಭೂಮಿಗೆ ಗೌರವ ಸಲ್ಲಿಸುವ ಒಂದು ಮಹೋನ್ನತ ಗೀತೆ ಎಂದರು.

ಬಿಜೆಪಿ ಮುಖಂಡ ಚಂದ್ರಶೇಖರ ಕವಟಗಿ ಮಾತನಾಡಿ, ನಮ್ಮೆಲ್ಲರನ್ನು ಸಲಹುತ್ತಿರುವ ಭಾರತ ಮಾತೆಯ ಭವ್ಯತೆಯನ್ನು ಸಾರುವ ವಂದೇ ಮಾತರಂ ದೇಶಭಕ್ತಿಯ ಪ್ರತೀಕ. ಸ್ವಾತಂತ್ರ್ಯ ಹೋರಾಟದ ವೇಳೆ ದೇಶಾಭಿಮಾನದ ಭಾವವನ್ನು ಬೆಳೆಸಿದ ವಂದೇ ಮಾತರಂ ಗೀತೆಯನ್ನು ನಾವು ನಿತ್ಯ ಪಠಿಸಬೇಕು. ನಮ್ಮ ದೇಶದ ಭವ್ಯ ಸಂಸ್ಕೃತಿ, ಭೌಗೋಳಿಕ ಸೌಂದರ್ಯ ಎಲ್ಲವನ್ನೂ ವಂದೇ ಮಾತರಂ ಅರ್ಥಪೂರ್ಣವಾಗಿ ವಿವರಿಸುತ್ತದೆ ಎಂದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಸಂದೀಪ ಪಾಟೀಲ ಮಾತನಾಡಿ, ವಂದೇ ಮಾತರಂ ಗೀತೆ ರಚಿಸಿ 150 ವಸಂತಗಳು ಪೂರ್ಣಗೊಂಡಿವೆ. ಇದೊಂದು ಸಮಸ್ತ ಭಾರತೀಯರು ಹೆಮ್ಮೆ ಪಡುವ ಅಭಿಮಾನದ ಸಂಗತಿ, ವಂದೇ ಮಾತರಂ ಗೀತೆಯ ಆಶಯಗಳನ್ನು ಅಳವಡಿಸಿಕೊಂಡು ದೇಶಾಭಿಮಾನವನ್ನು ಉಸಿರಾಗಿಸಿಕೊಂಡು ದೇಶ ಕಟ್ಟುವ ಕಾರ್ಯದಲ್ಲಿ ನಾವೆಲ್ಲರೂ ಮುನ್ನಡೆಯೋಣ ಎಂದರು.

ಸಂಸದ ರಮೇಶ ಜಿಗಜಿಣಗಿ, ಶಂಕರಗೌಡ ಪಾಟೀಲ, ಸುರೇಶ ಬಿರಾದಾರ, ಎಸ್.ಸಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ಉಮೇಶ ಕಾರಜೋಳ, ವಿಜಯಕುಮಾರ ಕುಡಿಗನೂರ, ಮಳುಗೌಡ ಪಾಟೀಲ್, ಸಾಬು ಮಾಶ್ಯಾಳ, ಈರಣ್ಣ ರಾವೂರ್, ರಾಜೇಶ ತಾವಸೆ, ಕೃಷ್ಣ ಗುನ್ನಾಳಕರ, ಶಂಕರಗೌಡ ಪಾಟೀಲ್, ಎಸ್.ಎ. ಪಾಟೀಲ, ಪಾಪುಸಿಂಗ್ ರಜಪೂತ್, ಚಿನ್ನು ಚಿನಗುಂಡಿ, ಬಸವರಾಜ ಹಳ್ಳಿ, ಅಪ್ಪು ಕುಂಬಾರ, ಗೇಸುದರಾಜ್ ಇನಾಮದಾರ, ಭಾರತಿ ಭುಯ್ಯಾರ, ರಾಘವೇಂದ್ರ ಕಾಪಸೆ, ಆನಂದ ಮುಚ್ಚಂಡಿ, ಮಂಥನ ಗಾಯಕವಾಡ, ವಿವೇಕ್ ತಾವರಗೇರಿ, ಜಗದೀಶ್ ಮುಚ್ಚಂಡಿ, ಗಣೇಶ್ ರಣದೇವಿ, ಲಖನ್ ದೇವಕಳೆ, ಸತೀಶ್ ಗಾಯಕವಾಡ, ರಾಹುಲ್ ಜಾಧವ, ರಾಮಚಂದ್ರ ಚವ್ಹಾಣ, ರವಿ ಬಿರಾದಾರ, ಮಂಜುನಾಥ ಕಲಾಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.