ವಿಜಯಪುರ: ನಗರದ ಆಶ್ರಮ ರಸ್ತೆಯ ಕಿತ್ತೂರು ರಾಣಿ ಚೆನ್ನಮ್ಮ ಭವನದಲ್ಲಿ ಶುಕ್ರವಾರದಿಂದ ಆರಂಭವಾಗಿರುವ ವಾಸ್ತು ವಿನ್ಯಾಸದ ವಿಶೇಷ ವಸ್ತು ಪ್ರದರ್ಶನ (ಬಿಲ್ಡ್ ಆರ್ಕ್ ಎಕ್ಸ್ಪೋ)ವನ್ನು ಮೇಯರ್ ಎಂ.ಎಸ್.ಕರಡಿ, ಕಾಖಂಡಕಿ ಶ್ರೀ ಗುರುದೇವ ಆಶ್ರಮದ ಶಿವಯೋಗೇಶ್ವರ ಸ್ವಾಮೀಜಿ ಉದ್ಘಾಟಿಸಿದರು.

ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ ಕರ್ನಾಟಕ ಚಾಫ್ಟರ್ ವಿಜಯಪುರ ಸೆಂಟರ್ಮತ್ತು ಬೆಂಗಳೂರಿನ ಕೇದಾರ್ ಇವೆಂಟ್ಸ್ ಸಹಯೋಗದಲ್ಲಿ ಆಯೋಜನೆಯಾಗಿರುವ ‘ಬಿಲ್ಡ್ ಆರ್ಕ್ ಎಕ್ಸ್ಪೋ’ ಡಿ.14ರ ವರೆಗೆ ಪ್ರತಿದಿನ ಬೆಳಿಗ್ಗೆ 10.30 ರಿಂದ ರಾತ್ರಿ 8.30 ಗೆ ಪ್ರದರ್ಶನ ಇರಲಿದೆ.

ವಾಸ್ತು ವಿನ್ಯಾಸದ ವಿಶೇಷ ವಸ್ತು ಪ್ರದರ್ಶನದಲ್ಲಿ ಹೊಸ ಮಾದರಿಯ ಕಟ್ಟಡ ಸಾಮಗ್ರಿಗಳು, ಪರಿಸರ ಸ್ನೇಹಿ ವಸ್ತುಗಳು, ವಿಶೇಷ ತಂತ್ರಜ್ಞಾನ ಹೊಂದಿರುವ ಉತ್ಪನ್ನಗಳು ಒಂದೇ ಸೂರಿನಡಿಯಲ್ಲಿ ನೋಡಬಹುದಾಗಿದೆ. 60ಕ್ಕೂ ಅಧಿಕ ಕಂಪನಿಗಳು ಪ್ರದರ್ಶನಲ್ಲಿ ಪಾಲ್ಗೊಂಡಿವೆ.

ಕಟ್ಟಡ ಕಟ್ಟುವ ಉದ್ದೇಶ ಹೊಂದಿರುವ ಸಾರ್ವಜನಿಕರಿಗೆ ಮತ್ತು ಈಗಾಗಲೇ ಮನೆ ಕಟ್ಟುತ್ತಿರುವವರಿಗೆ ಕಟ್ಟಡ ಸಾಮಗ್ರಿಗಳ ಬಗ್ಗೆ ಸಾವಿರ ಮಾಹಿತಿ ಒದಗಿಸುವ ಉದ್ದೇಶದಿಂದ ಒಂದೇ ಸೂರಿನಡಿಯಲ್ಲಿ ಸಮಗ್ರ ಕಟ್ಟಡ ಕಟ್ಟುವ ಸಾಮಗ್ರಿಗಳ ಪ್ರದರ್ಶನ ಮತ್ತು ಮಾಹಿತಿ ಲಭ್ಯವಿದೆ.

ಸಾಮಾನ್ಯ ಕಟ್ಟಡ ಸಾಮಗ್ರಿಗಳಾದ ಸಿಮೆಂಟ್, ಬ್ರಿಕ್ಸ್, ಅಗ್ರಿಗೇಟ್ ಎಂ ಸೆಂಡ್, ಸ್ಟೀಲ್, ಪ್ಲಂಬಿಂಗ್, ಟೈಲ್ಸ್, ಪ್ಲೈವುಡ್, ಇಂಟೀರಿಯರಿಗೆ ಸಂಬಂಧಪಟ್ಟ ಪರಿಕರಗಳು, ಎಕ್ಸ್ಪೀರಿಯರ್ ಉತ್ಪನ್ನಗಳು, ಸೋಲಾರ್ ಮತ್ತು ಎಲೆಕ್ಟ್ರಿಕಲ್ ಉತ್ಪನ್ನಗಳು ಅತ್ಯಾಧುನಿಕ ಗುಣಮಟ್ಟದ ಸೆಕ್ಯೂರಿಟಿ ಉತ್ಪನ್ನಗಳು, ಯುಪಿವಿಸಿ ಡೋರ್ಸ್ ಮತ್ತು ವಿಂಡೋಸ್, ಪೈಂಟ್ ಮತ್ತು ಅಡೆಸ್ಟೀವ್, ವಾಟರ್ ಪ್ರೂಫಿಂಗ್ ಹೀಗೆ ಹತ್ತು ಹಲವಾರು ಉತ್ಪನ್ನಗಳು ವಿವಿಧ ನವ ನವೀನ ಕಲಾ ವಿನ್ಯಾಸಗಳು ನೋಡಲು ಸಿಗುತ್ತವೆ.

ಸಾರ್ವಜನಿಕರು ಮುಕ್ತವಾಗಿ ಬಂದು ಕಟ್ಟಡ ಸಾಮಗ್ರಿಗಳನ್ನು ವೀಕ್ಷಿಸಿ ಕಂಪನಿ ಪದಾಧಿಕಾರಿಗಳಿಗೆ ಮತ್ತು ಸ್ಥಳೀಯ ಡೀಲರ್ಸ್ಗಳ ಜೊತೆ ಮುಕ್ತವಾಗಿ ಸಮಾಲೋಚಿಸಬಹುದು.

ಕಟ್ಟಡ ಕಟ್ಟುವವರಿಗೆ ಮತ್ತು ಇತರೆ ಎಲ್ಲ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದಲ್ಲಿ ಮುಕ್ತ ಪ್ರವೇಶವನ್ನು ನೀಡಲಾಗಿದೆ ಎಂದು ಕೇದಾರ ಇಂವೆಟ್ಸ್ ಸಂಸ್ಥೆ ಕಲ್ಮೇಶ್ ತೋಟದ ತಿಳಿಸಿದ್ದಾರೆ.

ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ ಕರ್ನಾಟಕ ಚಾಫ್ಟರ್ ವಿಜಯಪುರ ಸೆಂಟರ್ ಅಧ್ಯಕ್ಷ ರಾಜೇಶ್ ಕತ್ತಿ, ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಇದ್ದರು.