ವಿಜಯಪುರ: ನಗರದ ಗ್ಯಾನಿ ಕಾಲೊನಿಯ ಮನೆಯೊಂದರ ಮುಂದೆ ನಿಲ್ಲಿಸಿದ ಕಾರನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಗೋಳಗುಮ್ಮಟ ಠಾಣೆ ಪೊಲೀಸರು ಪತ್ತೆ ಹಚ್ಚಿ, ಕಾರಿನ ಸಹಿತ ಕಳ್ಳನನ್ನು ಬಂಧಿಸಿದ್ದಾರೆ.

ಗ್ಯಾನಿ ಕಾಲೊನಿಯ ಗುತ್ತಿಗೆದಾರ ಸುರೇಶ ಯರನಾಳ ಅವರು ತಮ್ಮ ಮನೆ ಮುಂದೆ ಆಗಸ್ಟ್ 28ರಂದು ನಿಲ್ಲಿಸಿದ್ದ ಅಂದಾಜು ₹11.81 ಲಕ್ಷ ಮೌಲ್ಯದ ಟೊಯೊಟಾ ಕಾರು ಕಳುವಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ರಾಜಮಂಡ್ರಿಯ ಹೌಸಿಂಗ್ ಬೋರ್ಡ್ ಕಾಲೊನಿಯ ಕಾರ್ ಡೆಕೋರೇಟರ್ ಚಕ್ರಧಾರ ಸಂಗೇಪೂ(46) ಎಂಬಾತನನ್ನು ಬಂಧಿಸಲಾಗಿದೆ. ಕದ್ದ ಕಾರಿನೊಂದಿಗೆ ಆರೋಪಿಯನ್ನು ಪೊಲೀಸರು ಹೈದರಾಬಾದ್ನಲ್ಲಿ ಪತ್ತೆ ಹಚ್ಚಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.