‘ಜಾಗ ಇದ್ದರೂ ನಿರ್ಮಾಣಕ್ಕೆ ಹಿಂದೇಟು’
‘ಸರ್ಕಾರಿ ವೈದ್ಯಕೀಯ ಕಾಲೇಜು ಸರ್ಕಾರದ ಸ್ವಾಧೀನದಲ್ಲೇ ಆಗಬೇಕು. ವಿಜಯಪುರದಲ್ಲಿ ಇಷ್ಟು ವರ್ಷಗಳಾದರೂ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸದಿದ್ದಕ್ಕೆ ಸರ್ಕಾರ ನಾಚಿಕೆಯಾಗಬೇಕು’ ಎಂದು ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿ ಸೋಮಶೇಖರ್ ಯಾದಗಿರಿ ಹೇಳಿದರು. ‘150 ಎಕರೆ ಜಾಗ ಇದ್ದರೂ ಸರ್ಕಾರ ಸುಸಜ್ಜಿತ ವೈದ್ಯಕೀಯ ಕಾಲೇಜು ನಿರ್ಮಾಣ ಮಾಡುವಲ್ಲಿ ಹಿಂದೇಟು ಹಾಕುತ್ತಿದೆ. ಪಿಪಿಪಿ ಅಡಿ ಕಾಲೇಜು ತರುತ್ತಿರುವುದನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ’ ಎಂದರು.