ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರದಲ್ಲಿ ಅಬ್ಬರಿಸಿದ ವರುಣ

Last Updated 9 ಜುಲೈ 2020, 13:56 IST
ಅಕ್ಷರ ಗಾತ್ರ

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯ ತಾಳಿಕೋಟೆ,ಇಂಡಿ, ತಾಂಬಾದಲ್ಲಿ ಗುರುವಾರ ಮಳೆಯಾಗಿದೆ.

ವಿಜಯಪುರ ನಗರದಲ್ಲಿ ಮಧ್ಯಾಹ್ನದ ಬಳಿಕ ಆರಂಭವಾದ ಮಳೆ ಬಿಟ್ಟು, ಬಿಟ್ಟು ಸುರಿಯಿತು. ಪರಿಣಾಮ ಚರಂಡಿ ನೀರು ಉಕ್ಕಿ ರಸ್ತೆ ಮೇಲೆ ಹರಿಯಿತು. ನಗರದ ಕೆಲ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದ ದೃಶ್ಯ ಕಂಡುಬಂದಿತು. ಮಳೆ ಪರಿಣಾಮ ಕೆಲ ಹೊತ್ತು ಜನ ಸಂಚಾರ, ವ್ಯಾಪಾರ, ವಹಿವಾಟಿಗೆ ಅಡಚಣೆಯಾಯಿತು.

ಬಸವನ ಬಾಗೇವಾಡಿ 8 ಮಿ.ಮೀ.,ಮನಗೂಳಿ 7, ಆಲಮಟ್ಟಿ 6.2, ಹೂವಿನ ಹಿಪ್ಪರಗಿ 16.4, ಅರೇಶಂಕರ 4.4, ಮಟ್ಟಿಹಾಳ 44, ವಿಜಯಪುರ 14.2, ನಾಗಠಾಣ 2, ಭೂತನಾಳ 4.2, ಹಿಟ್ನಳ್ಳಿ 19, ಮಮದಾಪೂರ 14.8, ಬಬಲೇಶ್ವರ 17.2, ನಾದ ಬಿ.ಕೆ 2, ಹಲಸಂಗಿ 5, ಚಡಚಣ 0.5, ಮುದ್ದೇಬಿಹಾಳ 1, ನಾಲತವಾಡ 7.4, ತಾಳಿಕೋಟಿ 4.2, ಢವಳಗಿ 6, ಕಡ್ಲೇವಾಡ 3 ಮಿ.ಮೀ. ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT