ತಾಳಿಕೋಟೆ: ವಿಜಯಪುರ ಲೋಕಾಯುಕ್ತ ಎಸ್ಪಿ ಟಿ.ಮಲ್ಲೇಶ ಅವರು ಸಾರ್ವಜನಿಕರ ಕೆಲವು ದೂರುಗಳ ಹಿನ್ನೆಲೆಯಲ್ಲಿ ಪಟ್ಟಣಕ್ಕೆ ಭೇಟಿ ನೀಡಿ ಮಂಗಳವಾರ ಪರಿಶೀಲಿಸಿದರು.

ಪಟ್ಟಣದ ಗಡಿ ಸೋಮನಾಳ ರಸ್ತೆಯಲ್ಲಿರುವ ಹುಡ್ಕೋ ಕಾಲೊನಿಯ ನಿವಾಸಿಗಳು ಅಲ್ಲಿ ವಿದ್ಯುತ್ ತೊಂದರೆ ಹಾಗೂ ರಸ್ತೆಯ ಎರಡೂ ಬದಿಯಲ್ಲಿ ಬೆಳೆದ ಮುಳ್ಳುಕಂಟಿಗಳಿಂದ ನಡೆದಾಡಲು ತೊಂದರೆಯಿದ್ದು ಇದನ್ನು ನಿವಾರಿಸುವಂತೆ ದೂರು ನೀಡಿದ್ದರು. ಇದರ ಕುರಿತು ಸ್ಥಳದಲ್ಲಿದ್ದ ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ ಅವರಿಗೆ ಕ್ರಮವಹಿಸಲು ಸೂಚನೆ ನೀಡಿದರು. ಮುಖ್ಯಾಧಿಕಾರಿಗಳು ಒಂದು ತಿಂಗಳ ಕಾಲಾವಕಾಶ ತೆಗೆದುಕೊಂಡು ಸಮಸ್ಯೆ ಪರಿಹಾರ ಮಾಡುವುದಾಗಿ ತಿಳಿಸಿದರು.

ಅಲ್ಲಿಂದ ಲೋಕಾಯುಕ್ತರು ಅಂಬೇಡ್ಕರ್ ಸರ್ಕಲ್ ಹತ್ತಿರ ಇರುವ ಎಸ್ ಲಾಂಜ್ ಹೋಟೆಲ್ ಪಕ್ಕದ ರಸ್ತೆಯನ್ನು ವ್ಯಕ್ತಿಯೊಬ್ಬರು ಬಂದ್ ಮಾಡಿದ ಸಮಸ್ಯೆ ಕುರಿತು ಅಧಿಕಾರಿಗಳೊಂದಿಗೆ ಮಾತನಾಡಿ, ಆದಷ್ಟು ಬೇಗ ಸಾರ್ವಜನಿಕರಿಗೆ ರಸ್ತೆಯ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿದರು.

ನಂತರ ಅವರು ದೇವರಹಿಪ್ಪರಗಿ ಮಾರ್ಗದಲ್ಲಿರುವ ಜಾನಕಿ ಹಳ್ಳದ ಒತ್ತುವರಿ ದೂರಿನ ಕುರಿತು ಸ್ಥಳಕ್ಕೆ ಭೇಟಿ ನೀಡಿ ದೂರುದಾರ ಹಾಗೂ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡು, ಈ ಕುರಿತು ಶೀಘ್ರ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಲೋಕಾಯುಕ್ತ ಡಿಎಸ್ಪಿ ಆನಂದ ಆಸ್ನೋಟಿಕರ, ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ, ಸಿದ್ದನಗೌಡ ಪಾಟೀಲ ನಾವದಗಿ, ಪುರಸಭೆ ಸದಸ್ಯ ಮಲ್ಲಿಕಾರ್ಜುನ್ ಪಟ್ಟಣಶೆಟ್ಟಿ, ದೂರುದಾರ ಸಿರಸಕುಮಾರ ಹಜೇರಿ ಹಾಗೂ ಪುರಸಭೆ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.