ವಿಜಯಪುರ: ‘ಸುಲ್ತಾನರು ಜಾರಿಗೊಳಿಸಿದ ವಕ್ಫ್ನ್ನು ಕಾಂಗ್ರೆಸ್ ಸರ್ಕಾರ ಮರುಜೀವ ನೀಡುವ ಕುತಂತ್ರ ಮಾಡಿದೆ. ವಕ್ಫ್ ಕಾಯ್ದೆ ಒಂದರ್ಥದಲ್ಲಿ ಲ್ಯಾಂಡ್ ಜಿಹಾದ್’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆರೋಪಿಸಿದರು.

ವಕ್ಫ್ ಕಾಯ್ದೆ ವಿರೋಧಿಸಿ ಮಂಗಳವಾರ ಸಿದ್ದೇಶ್ವರ ದೇವಾಲಯದ ಮುಂಭಾಗದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಸಂವಿಧಾನವನ್ನು ಪ್ರತಿನಿಧಿಸಲ್ಲ. ಕೇವಲ ಘಜ್ನಿ, ಘೋರಿ, ಸುಲ್ತಾನನನ್ನು ಪ್ರತಿನಿಧಿಸುತ್ತದೆ. ನಮ್ಮ ದೇಶದಲ್ಲಿ ಸಂವಿಧಾನದ ಪ್ರಕಾರ ಆಳ್ವಿಕೆ ನಡೆಯಬೇಕೆ ಹೊರತು ಸುಲ್ತಾನರ ಪರ ಅಲ್ಲ. ಕಾಂಗ್ರೆಸ್ ಸುಲ್ತಾನರ ಕಾಲದ ಕಾನೂನಿಗೆ ಮರುಜೀವ ನೀಡುವ ಪ್ರಯತ್ನ ಮಾಡುತ್ತಿದೆ’ ಎಂದು ದೂರಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ‘ವಕ್ಫ್ ಅನ್ಯಾಯದ ಬಗ್ಗೆ ಈ ಭಾಗದ ಒಬ್ಬನೇ ಒಬ್ಬ ಕಾಂಗ್ರೆಸ್ ಶಾಸಕ ಮಾತನಾಡುತ್ತಿಲ್ಲ. ವಕ್ಫ್ ಆಸ್ತಿ ಹೊಡೆದು ಕೊಂಡವರಲ್ಲಿ ಮಲ್ಲಿಕಾರ್ಜುನ ಖರ್ಗೆ, ರೆಹಮಾನ್ ಖಾನ್, ಎನ್.ಎ. ಹ್ಯಾರಿಸ್ ಸೇರಿ ಅನೇಕ ಮುಸ್ಲಿಂ ನಾಯಕರು ಶಾಮೀಲಾಗಿದ್ದಾರೆ’ ಎಂದು ಆರೋಪಿಸಿದರು. ನಮೋ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.