ಗುರುವಾರ , ಜನವರಿ 27, 2022
21 °C

ಯುವ ಭಾರತ ಸಮಿತಿ; ಕೊರೊನಾ ಜಾಗೃತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ನಗರದ ‘ಪದ್ಮಶ್ರೀ’ ಕಾಕಾ ಕಾರಖಾನೀಸ್ ಸ್ಮಾರಕ ಪ್ರೌಢಶಾಲೆಯಲ್ಲಿ ಯುವ ಭಾರತ ಸಮಿತಿಯಿಂದ ಕೊರೊನಾ ಮೂರನೇ ಅಲೆ ಕುರಿತು ಜಾಗೃತಿ ಮೂಡಿಸಿ ಮಾಸ್ಕ್‌ ಹಂಚಲಾಯಿತು.

ಯುವ ಭಾರತ ಸಮಿತಿ ಸಂಸ್ಥಾಪಕ ಅಧ್ಯಕ್ಷ ಉಮೇಶ ಕಾರಜೋಳ ಮಾತನಾಡಿ, ಜಗತ್ತನ್ನೆ ತಲ್ಲಣಗೊಳಿಸಿದ ಕೊರೊನಾ ವೈರಸ್‌ ಅನ್ನು ನಿಯಂತ್ರಣಕ್ಕೆ ತರಲು ಲಸಿಕೆ ನೀಡಲಾಗಿದೆ ಎಲ್ಲ ವಿದ್ಯಾರ್ಥಿಗಳು ಮೊದಲ ಹಾಗೂ ಎರಡನೇ ಹಂತದ ಲಸಿಕೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಯಾರು ಕೂಡಾ ನಿರ್ಲಕ್ಷ್ಯತನ ತೋರಬಾರದು ಆರೋಗ್ಯ ಇಲಾಖೆಯ ಸಲಹೆ ಸೂಚನೆಗಳನ್ನು ಎಲ್ಲರು ತಪ್ಪದೆ ಪಾಲಿಸಬೇಕು ಎಂದರು.

ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಕಾಕಾ ಕಾರಖಾನಿಸ ಭಾವಚಿತ್ರವಿರುವ ’ದಿನ ದರ್ಶಿಕೆ’ ವಿತರಣೆ ಮಾಡಲಾಯಿತು.

ಶಾಲೆಯ ಸಿಬ್ಬಂದಿ ಎಸ್.ಬಿ.ಕುಂಬಾರ, ಎಂ.ಟಿ.ಕೊಟ್ಟಲಗಿ, ವೀಣಾ ಅಕ್ಕಲಕೋಟ, ಸಿಂತ್ರೆ ಗುರುಮಾತೆ ಹಾಗೂ ವಿನೋದಕುಮಾರ ಮಣೂರ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು