ಕೊಪ್ಪಳ ಜಿಲ್ಲೆ ತೋಟಗಾರಿಕಾ ಹಬ್ ಆಗಿ ಬೆಳೆಯುತ್ತಿದೆ. ಪ್ರತಿವರ್ಷ ಹಣ್ಣುಗಳ ಮೇಳ, ಸಸ್ಯಸಂತೆ ಕಾರ್ಯಕ್ರಮಗಳನ್ನು ಆಯೋಜಿಸಿದಾಗ ವಿದೇಶದ ತಳಿಗಳ ದುಬಾರಿ ಹಣ್ಣುಗಳನ್ನು ಜನರ ಗಮನ ಸೆಳೆಯುವ ಸಲುವಾಗಿ ಮೇಳದಲ್ಲಿ ಪ್ರದರ್ಶನಕ್ಕೆ ಇರಿಸಲಾಗುತ್ತದೆ. ಈಗ ಆ ಹಣ್ಣುಗಳನ್ನು ಜಿಲ್ಲೆಯಲ್ಲಿ ರೈತರೇ ಬೆಳೆಯುವಂತಾಗಿದೆ. ಇದರಿಂದಾಗಿ ರೈತರಿಗೂ ಉತ್ತಮ ಆದಾಯ ಸಿಗುತ್ತಿದ್ದು ಜಿಲ್ಲೆಗೂ ಕೀರ್ತಿ ಬರುತ್ತಿದೆ.