ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ಮತ್ತೆ 14 ಮಂದಿಗೆ ಸೋಂಕು

ಜಿಲ್ಲೆಯಲ್ಲಿ ಕೋವಿಡ್‌ ಪೀಡಿತರ ಸಂಖ್ಯೆ 140ಕ್ಕೆ ಏರಿಕೆ
Last Updated 26 ಮೇ 2020, 17:54 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಮಂಗಳವಾರ 6 ವರ್ಷದ ಬಾಲಕ ಸೇರಿದಂತೆ ಒಟ್ಟು 14 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇದರಿಂದ ಕೋವಿಡ್–19 ಸೋಂಕಿತರ ಸಂಖ್ಯೆ 140ಕ್ಕೆ ಏರಿಕೆಯಾಗಿದೆ.

ಜಿಲ್ಲೆಯ ಬೀರನಕಲ್ ತಾಂಡಾದ 20 ವರ್ಷದ ಮಹಿಳೆ (ಪ್ರಕರಣ ಸಂಖ್ಯೆ ಪಿ–2185), ಬೀರನಕಲ್ ತಾಂಡಾದ 25 ವರ್ಷದ ಪುರುಷ (ಪಿ–2186), ರಾಮುನಾಯ್ಕ ತಾಂಡಾದ 22 ವರ್ಷದ ಮಹಿಳೆ (ಪಿ–2187), ಸುರಪುರ ತಾಲ್ಲೂಕಿನ ತಿಮ್ಮಾಪುರದ 25 ವರ್ಷದ ಪುರುಷ (ಪಿ–2188), ಯಾದಗಿರಿ ತಾಲ್ಲೂಕಿನ ಬೀರನಾಳ ತಾಂಡಾದ 34 ವರ್ಷದ ಪುರುಷ (ಪಿ–2189), ಬೀರನಾಳ ತಾಂಡಾದ 15 ವರ್ಷದ ಬಾಲಕ (ಪಿ–2190), ಯಾದಗಿರಿ ತಾಲ್ಲೂಕಿನ ಅರಕೇರಾ ತಾಂಡಾದ 25 ವರ್ಷದ ಮಹಿಳೆ (ಪಿ–2191) ಸೋಂಕು ಪೀಡಿತರಾಗಿದ್ದಾರೆ.

ಅರಕೇರಾ ತಾಂಡಾದ 32 ವರ್ಷದ ಪುರುಷ (ಪಿ–2192), ಅರಕೇರಾ ತಾಂಡಾದ 16 ವರ್ಷದ ಬಾಲಕಿ (ಪಿ–2197), ಅರಕೇರಾ ತಾಂಡಾದ 6 ವರ್ಷದ ಬಾಲಕ (ಪಿ–2198), ಅರಕೇರಾ ತಾಂಡಾದ 25 ವರ್ಷದ ಮಹಿಳೆ (ಪಿ–2199), ಯಾದಗಿರಿ ತಾಲ್ಲೂಕಿನ ಮೋಟನಳ್ಳಿ ತಾಂಡಾದ 19 ವರ್ಷದ ಯುವಕ (ಪಿ–2200), ಅರಕೇರಾ ತಾಂಡಾದ 18 ವರ್ಷದ ಯುವಕ (ಪಿ–2201), ಅರಕೇರಾ ತಾಂಡಾದ 45 ವರ್ಷದ ಮಹಿಳೆ (ಪಿ–2202) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಇವರೆಲ್ಲರೂ ಅಂತರರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಮಹಾರಾಷ್ಟ್ರದಿಂದ ಜಿಲ್ಲೆಗೆ ಹಿಂದರುಗಿದವರು. ಪ್ರಕರಣ ಸಂಖ್ಯೆ ಪಿ–2192 ಮತ್ತು ಪಿ–2197ರ ವ್ಯಕ್ತಿಗಳು ಮೇ 11ರಂದು ಆಗಮಿಸಿದರೆ, ಉಳಿದ 12 ಜನ ಮೇ 12ರಂದು ಜಿಲ್ಲೆಗೆ ಆಗಮಿಸಿದ್ದಾರೆ.

‘ಪಿ–2185, ಪಿ–2186, ಪಿ–2187, ಪಿ–2189 ಮತ್ತು ಪಿ–2190 ಪ್ರಕರಣ ವ್ಯಕ್ತಿಗಳನ್ನು ಶಹಾಪುರದ ಬಾಲಕರ ಮೆಟ್ರಿಕ್ ನಂತರ ವಸತಿ ನಿಲಯ ಕ್ವಾರಂಟೈನ್ ಕೇಂದ್ರದಲ್ಲಿ ಪ್ರತ್ಯೇಕವಾಗಿ ಇರಿಸಲಾಗಿತ್ತು. ಪಿ–2188 ವ್ಯಕ್ತಿಯನ್ನು ಸುರಪುರದ ಬಾಲಕರ ಮೆಟ್ರಿಕ್ ನಂತರ ವಸತಿ ನಿಲಯ ಕ್ವಾರಂಟೈನ್ ಕೇಂದ್ರದಲ್ಲಿ ಪ್ರತ್ಯೇಕವಾಗಿ ಇರಿಸಲಾಗಿತ್ತು. ಉಳಿದ 8 ಪ್ರಕರಣಗಳ ವ್ಯಕ್ತಿಗಳನ್ನು ಬೇವಿನಹಳ್ಳಿ ಕಿತ್ತೂರು ರಾಣಿ ಚನ್ನಮ್ಮ ವಸತಿನಿಲಯ ಕ್ವಾರಂಟೈನ್ ಕೇಂದ್ರದಲ್ಲಿ ಪ್ರತ್ಯೇಕವಾಗಿ ಇರಿಸಲಾಗಿತ್ತು’ ಎಂದುಹೆಚ್ಚುವರಿಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT