ಶುಕ್ರವಾರ, ಜನವರಿ 24, 2020
17 °C

‘ಶಾಲಾ ಪೂರ್ವ ಶಿಕ್ಷಣ ಬಲವರ್ಧನೆಗೊಳಿಸಿ’: ಎಸಿಡಿಪಿಒ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಕ್ಕೇರಾ: ಅಂಗನವಾಡಿ ಕೇಂದ್ರಗಳ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆಗೊಳಿಸಲು ಅಂಗನವಾಡಿ ಕಾರ್ಯಕರ್ತೆಯರ ಶ್ರಮ ಮುಖ್ಯವಾಗಿದೆ ಎಂದು ಎಸಿಡಿಪಿಒ ಮೀನಾಕ್ಷಿ ಪಾಟೀಲ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜುದಲ್ಲಿ ಕೆಕೆಆರ್‌ಡಿಬಿ, ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಲಿಕೆ ಟಾಟಾ ಟ್ರಸ್ಟ್ ಇವರ ಆಶ್ರಯದಲ್ಲಿ ಈಚೆಗೆ ಜರುಗಿದ ಅಂಗನವಾಡಿ ಕಾರ್ಯಕರ್ತೆ ಯರಿಗೆ 3 ದಿನಗಳ ತರಬೇತಿಯಲ್ಲಿ ಅವರು ಮಾತನಾಡಿದರು.

ಅಂಗನವಾಡಿ ಕೇಂದ್ರಗಳು ಮೂರು ವರ್ಷದ ಮಗುವಿನಿಂದ ಆರು ವರ್ಷಗಳವರೆಗೆ ಶಾಲಾ ಪೂರ್ವ ಶಿಕ್ಷಣ ಪಡೆಯಲು ಅರ್ಹವಾಗಿರುವ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಆ ಮಗುವಿಗೆ ಶಿಕ್ಷಣ ನೀಡುವ ಮೂಲಕ ಮಾನಸಿಕ, ದೈಹಿಕ, ಸಾಮಾಜಿಕ ಬೆಳವಣಿಗೆ ಶ್ರಮಿಸಬೇಕು ಎಂದು ಹೇಳಿದರು.

‘ಓದುವ-ಬರೆಯುವ ಮರಳಿ ಹೇಳಿದ ಪದದ ಚಟುವಟಿಕೆ, ಅಂಕಿ-ಸಂಖ್ಯೆಗಳ ಕಲಿಸುವ, ಒಂದು ಮಗು ಅಂಕಿಗಳ ಹೆಸರುಗಳನ್ನು ಹೇಳುವ, ಶಬ್ದದಲ್ಲಿ ಎಷ್ಟು ವ್ಯತ್ಯಾಸ, ಮೂರು ವಿಧಗಳು, ಆಟ, ಸಂಗೀತ, ನಾಟ್ಯ, ಮೆದುಳಿನ ಚಿತ್ತ, ಬೆಳವಣಿಗೆ, ಜೋಡಣೆ ಹಾಗೂ ಭಾಷೆಯ ಜೊತೆಗೆ ವಿವಿಧ ರೀತಿಯ ಅನುಭವಗಳನ್ನು ಮಕ್ಕಳಿಗೆ ಹೇಳಬೇಕು ಎಂದರು.

ಭಾಷಾ ಕೌಶಲ್ಯ ಬೆಳೆಸುವ ಚಟುವಟಿಕೆ, ಕೃಷಿಗೆ ಸಂಬಂಧಿಸಿದ ವಸ್ತುಗಳ ಪರಿಚಯಗಳನ್ನು ಮಕ್ಕಳಿಗೆ ತಿಳುವಳಿಕೆ ನೀಡುವುದು ಈ ತರಬೇತಿಯ ಉದ್ದೇಶಗಳಾಗಿವೆ ಎಂದು ತಿಳಿಸಿದರು.

3 ದಿನಗಳವರೆಗೆ ವಲಯದ 41 ಅಂಗನವಾಡಿ ಕಾರ್ಯಕರ್ತೆಯರು ತರಬೇತಿಯ ಮಾಹಿತಿಗಳನ್ನು ಪಡೆದುಕೊಂಡು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದರು.

ಜಿಲ್ಲಾ ಬಾಲ ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕ ರಘುವೀರಸಿಂಗ್ ಠಾಕೂರ್, ಅಂಗನವಾಡಿ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸವಿತಾ, ಉಪತಹಶೀಲ್ದಾರ್ ರೇವಪ್ಪ ತೆಗ್ಗಿನಮನಿ, ಅಂಗನವಾಡಿ ಮೇಲ್ವಿಚಾರಕರಾದ ಶೋಭಾ ಸಜ್ಜನ್, ಲಕ್ಷ್ಮೀಬಾಯಿ ಚವ್ಹಾಣ, ಕಂದಾಯ ಸಿಬ್ಬಂದಿಗಳಾದ ಸಂಗಮೇಶ, ವಿಠಲ್ ಬಂದಾಳ್, ಸಂತೋಷರಡ್ಡಿ ಸೇರಿದಂತೆ ಇತರರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು