ಸುರಪುರ: ‘ಅಂಗನವಾಡಿ ಕೇಂದ್ರಗಳಲ್ಲಿನ ಮುಖ ಚಹರೆ ಗುರುತಿಸುವ ವ್ಯವಸ್ಥೆ (ಎಫ್ಆರ್ಎಸ್) ಹಿಂಪಡೆಯಬೇಕು. ಅಂಗನವಾಡಿ ನೌಕರರ ಮೇಲಾಗುತ್ತಿರುವ ದೌರ್ಜನ್ಯ ನಿಲ್ಲಿಸಬೇಕು. ನೌಕರರಿಗೆ ರಕ್ಷಣೆ ನೀಡಬೇಕು’ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಸದಸ್ಯರು ಒತ್ತಾಯಿಸಿದರು.

ಇಲ್ಲಿಯ ಸಿಡಿಪಿಒ ಕಚೇರಿ ಮುಂದೆ ಗುರುವಾರ ಅಖಿಲ ಭಾರತ ಕರಾಳ ದಿನ ಆಚರಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯ ಇಲಾಖೆಯ ಕೇಂದ್ರ ಸಚಿವರಿಗೆ ಬರೆದ ಮನವಿ ಪತ್ರವನ್ನು ಸಿಡಿಪಿಒ ಲಾಲಸಾಬ ಪೀರಾಪುರ ಮೂಲಕ ಸಲ್ಲಿಸಿ ಅವರು ಮಾತನಾಡಿದರು.

‘ಪಶ್ಚಿಮ ಬಂಗಾಳ ಮತ್ತು ಪಂಜಾಬ ಸೇರಿದಂತೆ ಹಲವಾರು ರಾಜ್ಯ ಸರ್ಕಾರಗಳು ಅಂಗನವಾಡಿ ನೌಕರರಿಗೆ ಮೊಬೈಲ್ ಒದಗಿಸಿಲ್ಲ. ಹಲವಾರು ರಾಜ್ಯ ಸರ್ಕಾರಗಳು 5 ವರ್ಷಗಳ ಹಿಂದೆ ಮೊಬೈಲ್ ಕೊಟ್ಟಿದ್ದು, ಅವು ಕಾರ್ಯನಿರ್ವಹಿಸುತ್ತಿಲ್ಲ. ಮೊಬೈಲ್ ನಿರ್ವಹಣೆಗಾಗಿ ವಾರ್ಷಿಕ ₹ 2000 ನಿರ್ವಹಣಾ ಅನುದಾನ ಕೊಡಲಾಗುತ್ತಿದ್ದು, ಅದು ಸಾಕಾಗುತ್ತಿಲ್ಲ’ ಎಂದರು.

‘ಅಂಗನವಾಡಿ ಕೇಂದ್ರಗಳಲ್ಲಿ ಸೌಲಭ್ಯ ಪಡೆಯಲು ಎಫ್ಆರ್ಎಸ್ ವ್ಯವಸ್ಥೆ ಕಡ್ಡಾಯವಾಗಿದ್ದು, ಒಂದು ವೇಳೆ ವ್ಯವಸ್ಥೆಗೆ ಒಳಪಡದೇ ಹೋದರೆ ಅವರ ಹೆಸರುಗಳನ್ನು ಅಂಗನವಾಡಿ ಪಟ್ಟಿಯಿಂದ ಕೈ ಬಿಡಲಾಗುತ್ತದೆ. ಇದು ಆಹಾರ ಭದ್ರತೆ ಕಾಯಿದೆಯ ಸ್ಪಷ್ಟ ಉಲ್ಲಂಘನೆ ಆಗುತ್ತದೆ. ಪಟ್ಟಿಯಿಂದ ಹೆಸರು ಕೈ ಬಿಟ್ಟಾಗ ಅಂಗನವಾಡಿ ಮೂಲಸೌಲಭ್ಯ ವಂಚಿತರಾದವರು ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಗೆ ಕಿರುಕುಳ ನೀಡುತ್ತಾರೆ. ಕೆಲವೊಮ್ಮ ಮೊಬೆಲ್ ರಿಚಾರ್ಜ ಮಾಡಿರುವುದಿಲ್ಲ. ಹಲವು ಬಾರಿ ಓಟಿಪಿ ಪಡೆಯುವುದು ಅಸಾಧ್ಯವಾಗುತ್ತಿದೆ. ಸಾರ್ವಜನಿಕರು, ಅಧಿಕಾರಿಗಳಿಂದ ಕಿರುಕುಳಕ್ಕೆ ಒಳಗಾಗಿ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಡಿಜಿಟಲೀಕರಣ ಕೆಲಸ ಹೊರೆ ಕಡಿಮೆ ಮಾಡುವ ಬದಲಾಗಿ ಅಂಗನವಾಡಿ ನೌಕರರಿಗೆ ಮುಳವಾಗಿದೆ. ಕೆವೈಸಿ, ಫಲಾನುಭವಿಗಳ ಮುಖ ಗುರುತಿಸುವಿಕೆ, ಡಿಜಿಟಲ್ ಸಾಕ್ಷರತೆ, ಈಗ ಎಫ್ಆರ್ಎಸ್ ಅವುಗಳಿಂದಾಗಿ ಅಂಗನವಾಡಿ ನೌಕರರು ನಿರಂತರವಾಗಿ ತೀವ್ರ ಒತ್ತಡಕ್ಕೆ ಸಿಲುಕುತ್ತಿದ್ದಾರೆ’ ಎಂದು ಹೇಳಿದರು.

ಸಂಘದ ಅಧ್ಯಕ್ಷೆ ಬಸಮ್ಮ ಆಲಾಳ, ಕಾರ್ಯದರ್ಶಿ ನಸೀಮಾ ಮುದ್ನೂರು, ಖಜಾಂಚಿ ರಾಧಾಬಾಯಿ ಲಕ್ಷ್ಮೀಪುರ ಸೇರಿ ಅನೇಕ ಸದಸ್ಯರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.