ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಕೋಟಿ ದಾಟಿದ ಬಿಜೆಪಿ ಸದಸ್ಯತ್ವ: ಶಾಸಕ ವೆಂಕಟರಡ್ಡಿಗೌಡ ಮುದ್ನಾಳ ಮಾಹಿತಿ

Last Updated 7 ಏಪ್ರಿಲ್ 2021, 1:20 IST
ಅಕ್ಷರ ಗಾತ್ರ

ಯಾದಗಿರಿ: ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಬಿಜೆಪಿ ಸಂಸ್ಥಾಪನಾ ದಿನ ಆಚರಿಸಲಾಯಿತು.

ಶಾಸಕ ವೆಂಕಟರಡ್ಡಿಗೌಡ ಮುದ್ನಾಳ ಮಾತನಾಡಿ,‘2015ರ ಏಪ್ರಿಲ್‍ನ ಅಂಕಿ-ಅಂಶದಂತೆ ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಪಡೆದವರ ಸಂಖ್ಯೆ 10 ಕೋಟಿ ದಾಟಿದೆ. ಕಳೆದ 5 ವರ್ಷಗಳಲ್ಲಿ ಇದು ಮತ್ತಷ್ಟು ಏರಿಕೆ ಆಗಿದೆ. ಹೀಗಾಗಿ ಜಗತ್ತಿನಲ್ಲೇ ಅತಿದೊಡ್ಡ ಪಕ್ಷ ಎಂಬ ಖ್ಯಾತಿ ಪಡೆದಿದೆ. 2015ಕ್ಕೆ ಮೊದಲು ಚೀನಾದ ಕಮ್ಯೂನಿಸ್ಟ್‌ ಪಕ್ಷವೇ ಅತಿದೊಡ್ಡ ಪಕ್ಷವಾಗಿತ್ತು’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣಭೂಪಾಲರಡ್ಡಿ ಮಾತನಾಡಿ, ‘1980ರ ಏಪ್ರಿಲ್ 6 ರಂದು ಅಧಿಕೃತವಾಗಿ ಸ್ಥಾಪನೆಯಾದ ಬಿಜೆಪಿ 1951ರಲ್ಲೇ ಜನಸಂಘದ ಹೆಸರಿನಲ್ಲಿ ಜನ್ಮ ತಾಳಿತ್ತು. ಶ್ಯಾಮ್‌ ಪ್ರಸಾದ ಮುಖರ್ಜಿ ಜನಸಂಘದ ಸಂಸ್ಥಾಪಕರು. ಪ್ರಧಾನಿ ಇಂದಿರಾಗಾಂಧಿ ಅವರು ಏರಿದ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಲು 1977ರಲ್ಲಿ ಜನಸಂಘವು ಇತರ ಪಕ್ಷಗಳ ಜತೆಗೂಡಿ ಜನತಾ ಪಕ್ಷ ಸ್ಥಾಪಿಸಿತು. ಆದರೆ, ಮೂರೇ ವರ್ಷಗಳಲ್ಲಿ (1980 ರಲ್ಲಿ) ಜನತಾ ಪಕ್ಷ ವಿಸರ್ಜನೆಗೊಂಡು ಬಿಜೆಪಿ ಸ್ಥಾಪನೆಯಾಯಿತು’ ಎಂದರು.

ಮಾಜಿ ಶಾಸಕ ಡಾ.ವಿರಬಸವಂತರಡ್ಡಿ ಮುದ್ನಾಳ ಮಾತನಾಡಿ,‘ಪ್ರಬಲ ನಾಯಕ, ಸಿದ್ಧಾಂತ ಮತ್ತು ಕಾರ್ಯಕರ್ತರ ಪಡೆ ಈ ಮೂರು ಅಂಶಗಳಿಂದ ಬಿಜೆಪಿ ದೊಡ್ಡ ಮಟ್ಟದಲ್ಲಿ ಬೆಳೆದಿದೆ’ ಎಂದು ಹೇಳಿದರು.

ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದೇವೇಂದ್ರನಾಥ ನಾದ, ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ, ಜಿಲ್ಲಾ ಘಟಕದ ಉಪಾಧ್ಯಕ್ಷ ನೀಲಕಂಠರಾಯ ಎಲ್ಹೇರಿ, ರವಿ ಮಾಲಿಪಾಟೀಲ, ನಗರಸಭೆ ಸದಸ್ಯ ಹಾಗೂ ನಗರ ಮಂಡಲ ಅಧ್ಯಕ್ಷ ಸುರೇಶ ಅಂಬಿಗೇರ, ನಗರಸಭೆ ಸದಸ್ಯ ಹಣಮಂತ ಇಟಗಿ, ಶಂಕರ್ ಸೋನಾರ್, ಸುನಿತಾ ಚವಾಣ್, ಮೌನೇಶ ಬೇಳಿಗೇರ, ರಮೇಶ ದೊಡ್ಡಮನಿ, ಶರಣು ಆಶನಾಳ, ಹಣಮಂತ ವಲ್ಯಪುರೆ, ಚಂದ್ರ ಬಾಡಿಯಾಳ, ಪರವೀನ ಬೇಗಂ, ಸಿ. ಮಲ್ಲು ಕೊಲಿವಾಡ ಹಾಗೂ ಇಮಾನುವೆಲ್‌ ಜಿಮ್ಮಿ ಇದ್ದರು.

‘ಸಿದ್ಧಾಂತದ ನೆಲೆಯಲ್ಲಿ ಪಕ್ಷ ಗಟ್ಟಿಗೊಳಿಸಿ’

ಮುದನೂರು (ಕೆಂಭಾವಿ): ‘ಅಖಂಡ ಭಾರತ ನಿರ್ಮಾಣದ ಕನಸನ್ನು ಕಂಡ ಹಿರಿಯ ನೇತಾರರು 1980 ರಲ್ಲಿ ಭಾರತೀಯ ಜನತಾ ಪಕ್ಷ ಸ್ಥಾಪನೆ ಮಾಡಿದರು’ ಎಂದು ಬಿಜೆಪಿ ಯುವ ಮುಖಂಡ ಕೃಷ್ಣಾರಡ್ಡಿ ಮುದನೂರ ತಿಳಿಸಿದರು.

ಕೆಂಭಾವಿ ಸಮೀಪದ ಮುದನೂರು ಗ್ರಾಮದಲ್ಲಿ ಮಂಗಳವಾರ ನಡೆದ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಹಿರಿಯರು ಆಶಯದಿಂದ ಅಳವಡಿಸಿಕೊಂಡ ತತ್ವ ಸಿದ್ಧಾಂತಗಳನ್ನು ಉಳಿಸಿಕೊಂಡು ಪಕ್ಷವನ್ನು ಗಟ್ಟಿಗೊಳಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು. ಪಕ್ಷದ ಸಾಮಾನ್ಯ ಕಾರ್ಯಕರ್ತನೇ ಪಕ್ಷದ ಆಸ್ತಿ. ಪಕ್ಷವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ನಾವೆಲ್ಲ ಜತೆಯಾಗಿ ಸಾಗೋಣ’ ಎಂದರು.

ಮುದನೂರು ಗ್ರಾಮದ ಬಿಜೆಪಿ ಕಾರ್ಯಕರ್ತರಿದ್ದರು.

‘ಬಿಜೆಪಿ ಕೊಡುಗೆ ಅಪಾರ’

ಕೆಂಭಾವಿ: ‘ಭಾರತದ ಸರ್ವಾಂಗೀಣ ಪ್ರಗತಿಗೆ ಬಿಜೆಪಿ ಕೊಡುಗೆ ಅಪಾರ’ ಎಂದು ಬಿಜೆಪಿ ರೈತ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರ ಕರಣಗಿ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಮಂಗಳವಾರ ಬಿಜೆಪಿ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದರು.

‘ಬಿಜೆಪಿ ಉದಯಿಸಿ ನಾಲ್ಕು ದಶಕಗಳು ಗತಿಸಿವೆ. ಮಾಜಿ ಪ್ರಧಾನಿ ವಾಜಪೇಯಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ವಿಶ್ವಮಟ್ಟಕ್ಕೆ ಪರಿಚಯಿಸುವ ಅದ್ಭುತ ಕೆಲಸ ಮಾಡಿದ್ದಾರೆ. ಪಕ್ಷ ದೇಶದ ಎಲ್ಲ ವರ್ಗಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ’ ಎಂದು ಹೇಳಿದರು.

ಸಂಗಣ್ಣ ತುಂಬಗಿ, ಗುರು ಕುಂಬಾರ, ದೇವಪ್ಪ ಕೆಲಗೇರಿ, ಹಳ್ಳೆಪ್ಪ ಹವಾಲ್ದಾರ, ದೇವಿಂದ್ರಪ್ಪ ಯಾಳಗಿ ಹಾಗೂ ಗಿರೀಶ ಶಹಾಪುರ ಇದ್ದರು.

‘ಭಾಜಪ ಅತಿದೊಡ್ಡ ಪಕ್ಷ’

ಸೈದಾಪುರ: ‘ಬಿಜೆಪಿ ಜಗತ್ತಿನ ಅತಿದೊಡ್ಡ ರಾಜಕೀಯ ಪಕ್ಷ’ ಎಂದು ಬಿಜೆಪಿಯ ಗುರುಮಠಕಲ್ ಯುವ ಮೋರ್ಚಾದ ಅಧ್ಯಕ್ಷ ಬಸ್ಸುಗೌಡ ಐರೆಡ್ಡಿ ಅಭಿಪ್ರಾಯಪಟ್ಟರು.

ಪಟ್ಟಣದ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ನಡೆದ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ನಮ್ಮ ಪಕ್ಷ ಜನಪರ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಕಾರ್ಯಕರ್ತರೇ ಇಲ್ಲಿ ನಾಯಕರು. ಆದ್ದರಿಂದ ಎಲ್ಲ ಕಾರ್ಯಕರ್ತರು ಮನೆಗಳ ಮೇಲೆ ಪಕ್ಷದ ಧ್ವಜ ಹಾರಿಸಿ ಸಂಸ್ಥಾಪನಾ ದಿನವನ್ನು ನೆನಪಿಸಿಕೊಳ್ಳಬೇಕು ಎಂದರು.

ಬಿಜೆಪಿ ಯುವ ಮೊರ್ಚಾ ಪ್ರಧಾನ ಕಾರ್ಯದರ್ಶಿ ಶರಣು ಎಲ್ಹೇರಿ, ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಮರೆಪ್ಪ ಕಟ್ಟಿಮನಿ ರಾಂಪೂರ, ರಾಜ್ಯ ಅಲ್ಪಸಂಖ್ಯಾತ ಕಾರ್ಯಕಾರಣಿ ಸದಸ್ಯ ರಾಜೇಶ ಜೈನ್, ಭೀಮಣ್ಣ ಮಡಿವಾಳ, ಮಹಿಳಾ ಮೋರ್ಚಾ ಅಧ್ಯಕ್ಷೆ ಅಂಬಿಕಾ ಗುತ್ತೇದಾರ ಮಾಧ್ವಾರ, ಚಂದ್ರಶೇಖರಗೌಡ ಭೀಮನಳ್ಳಿ ಹಾಗೂ ರಾಕೇಶಗೌಡ ಕಣೇಕಲ್ ಇದ್ದರು.

***

ಮುಖಂಡರ ಮನೆಗಳ ಮೇಲೆ ಬಿಜೆಪಿ ಧ್ವಜ

ಯಾದಗಿರಿ: ಬಿಜೆಪಿ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣಭೂಪಾಲರಡ್ಡಿ ಅವರ ಮನೆಯ ಮೇಲೆ ಬಿಜೆಪಿ ಧ್ವಜಾರೋಹಣ ಮಾಡಲಾಯಿತು.

ನಂತರ ಮಾತನಾಡಿದ ಡಾ.ಶರಣಭೂಪಾಲರಡ್ಡಿ,‘ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ ಕಟೀಲ್ ಸೂಚನೆಯಂತೆ ಎಲ್ಲ ಬೂತ್ ಸಮಿತಿ ಅಧ್ಯಕ್ಷರ ಮನೆ ಮೇಲೆ ಮತ್ತು ಸಂಸದರು, ಶಾಸಕರು, ಜಿ.ಪಂ, ತಾ.ಪಂ, ಗ್ರಾ.ಪಂ ಸದಸ್ಯರು, ನಗರಸಭೆ ಸದಸ್ಯರು, ಪಕ್ಷದ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳು, ಮಂಡಲ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಪ್ರಕೋಷ್ಠದ ಪದಾಧಿಕಾರಿಗಳು ಹಾಗೂ ಬಿಜೆಪಿ ಎಲ್ಲ ಚುನಾಯಿತ ಪ್ರತಿನಿಧಿಗಳ ಮನೆ ಮೇಲೆ ಪಕ್ಷದ ಧ್ವಜಾರೋಹಣ ಮಾಡಲಾಗಿದೆ’ ಎಂದು ಹೇಳಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವೇಂದ್ರನಾಥ ನಾದ, ನಗರಸಭೆ ಸದಸ್ಯರಾದ ಸುರೇಶ್ ಅಂಬಿಗೇರ, ಚಂದ್ರಕಲಾ ಚಂದ್ರಕಾಂತ ಮಡ್ಡಿ, ಶಂಕರ್ ಸೋನಾರ್,ಸ್ನೇಹ ರಸಾಳಕರ, ಮಂಜುಳಾ, ಕವಿತಾ ಮಾಲಿಪಾಟೀಲ, ಪರವೀನ ಬೇಗಂ, ಶರಣಗೌಡ ಕನ್ಯಕೋಳೂರು, ಮನೋಹರ ಪವಾರ ಹಾಗೂ ಚಂದ್ರಶೇಖರ್ ಕಡೇಚೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT