ಕೆಂಭಾವಿ: ಕೆಂಭಾವಿ-ನಗನೂರ ರಸ್ತೆಯಲ್ಲಿರುವ ಪಟ್ಟಣದ ಸಮೀಪದಲ್ಲಿರುವ ದಶಕಗಳ ಹಿಂದೆ ನಿರ್ಮಿಸಲಾಗಿದ್ದ ಸೇತುವೆ ಶಿಥಿಲಾವಸ್ಥೆ ತಲುಪಿದ್ದು, ಸೋಮವಾರ ಪುರಸಭೆ ಅಧ್ಯಕ್ಷ ರಹೆಮಾನ್ ಪಟೇಲ್ ಯಲಗೋಡ ಸೇತುವೆ ಸ್ಥಳ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಸೇತುವೆಯಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ಮಳೆ ನೀರು ನಿಲ್ಲುತ್ತಿದೆ. ನೀರು ಸೋರಿಕೆಯಿಂದ ಸೇತುವೆಯ ಶಕ್ತಿ ಕಳೆದುಕೊಂಡಿದೆ. ಡಾಂಬರ್ ಕಿತ್ತು ಹೊಗಿದ್ದು, ಗುಂಡಿಗಳಲ್ಲಿ ನೀರು ನಿಂತು ಮಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಕುರಿತು ಲೋಕೋಪಯೋಗಿ ಅಧಿಕಾರಿಗಳಿಗೆ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ’ ಎಂದು ಆರೋಪಿಸಿದರು.

ಸೇತುವೆ ಪುರಸಭೆ ವ್ಯಾಪ್ತಿಗೆ ಬರುವುದಿಲ್ಲ, ಲೋಕೋಪಯೋಗಿ ಇಲಾಖೆಗೆ ಒಳಪಡುತ್ತದೆ. ಈ ಮಾರ್ಗದಲ್ಲಿ ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತವೆ. ಸೇತುವೆಯಲ್ಲಿ ದೊಡ್ಡ ರಂದ್ರ ನಿರ್ಮಾಣವಾಗಿದೆ. ಮಳೆಯಿಂದ ಸೇತುವೆ ಕುಸಿದು ಬೀಳುವ ಭೀತಿ ಎದುರಾಗಿದೆ ಎಂದರು.

ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ, ಇನ್ನೂ ಸಾಮಾನ್ಯ ಜನರ ಗತಿಯೇನು? ಎಂದು ಪ್ರಶ್ನಿಸಿದರು. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆಯಲಾಗುವುದು ಎಂದು ಹೇಳಿದರು.

ಕಳೆದ ವಾರ ‘ಪ್ರಜಾವಾಣಿ’ಯಲ್ಲಿ ಕೆಂಭಾವಿ-ನಗನೂರ ರಸ್ತೆ ಕುರಿತು ಲೇಖನ ಪ್ರಕಟವಾಗಿದ್ದನ್ನು ಗಮನಿಸಿ ಭೇಟಿ ನೀಡಿ ಪರಿಶೀಲಿಸಿದ್ದೇನೆ.
ರಹೆಮಾನ ಪಟೇಲ್ ಯಲಗೋಡ ಪುರಸಭೆ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.