ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ನಗರಸಭೆಯ ಈ ಸೊಳ್ಳೆ ನಿಯಂತ್ರಣ ಪ್ರಯೋಗ ನೀವೂ ಮಾಡಬಹುದು

Last Updated 5 ಅಕ್ಟೋಬರ್ 2019, 7:49 IST
ಅಕ್ಷರ ಗಾತ್ರ

ಯಾದಗಿರಿ: ನಗರಸಭೆಯ ಪರಿಸರ ಅಧಿಕಾರಿಗಳು ಸೊಳ್ಳೆಗಳ ಉತ್ಪತ್ತಿ ಜಾಗದಲ್ಲಿ ತಕ್ಕನಾದ ಮದ್ದು ಬಳಸಿ ಸೊಳ್ಳೆಗಳನ್ನು ಅಂಡಾಣು, ಲಾರ್ವಾ ಹಂತದಲ್ಲೇ ನಾಶ ಪಡಿಸುವ ಕಾರ್ಯವನ್ನು ಈಗಾಗಲೇ ಪ್ರಾರಂಭಿಸಿದ್ದಾರೆ.

ಒಂದು ಹತ್ತಿ ಬಟ್ಟೆಯಲ್ಲಿ ಸಾಮಿಲ್‌ಗಳಲ್ಲಿ ಸಿಗುವ ಕಟ್ಟಿಗೆ ಪುಡಿಯನ್ನು ಬಟ್ಟೆಯಲ್ಲಿಉಂಡೆ ಕಟ್ಟಬೇಕು. ನಂತರ ಅದನ್ನು ಸುಟ್ಟ ಆಯಿಲ್‌ (ಬೈಕ್, ಕಾರು ಆಯಿಲ್ ಸರ್ವಿಸ್ ಮಾಡಿದ ನಂತರ ಉಳಿದ ಎಣ್ಣೆ) ನಲ್ಲಿ ಅರ್ಧ ಗಂಟೆ ನೆನೆಸಿಡಬೇಕು. ನಂತರ ಲಾರ್ವಾ ಉತ್ಪತ್ತಿಯಾಗುವ ಜಾಗದಲ್ಲಿ ಅದನ್ನು ಮುಳುಗಿಸಿದರೆ ಸಾಕು ಲಾರ್ವಾ ಅಂಡಾಣು ಸತ್ತು ಹೋಗುತ್ತದೆ. ಹೀಗಾಗಿ ಸೊಳ್ಳೆಗಳು ಉತ್ಪತ್ತಿ ಕಡಿಮೆಯಾಗುತ್ತದೆ. ಹೀಗಾಗಿ ನಗರದಲ್ಲಿ ಈ ಪ್ರಯೋಗಕ್ಕೆ ಮುನ್ನಡಿ ಇಡಲಾಗಿದೆ.

ಚರಂಡಿಗಳಲ್ಲಿ 15 ಅಡಿಗೆ ಒಂದರಂತೆ ಇದನ್ನು ಇಡಬೇಕು. ಇದರ ಮೂಲಕ ಸೊಳ್ಳೆಗಳ ಉತ್ಪತ್ತಿಗೆ ಕಡಿವಾಣ ಹಾಕಿದಂತೆ ಆಗುತ್ತದೆ ಎಂದು ನಗರಸಭೆ ಪರಿಸರ ಅಧಿಕಾರಿಗಳು ಹೇಳುತ್ತಾರೆ.

ಆಂಧ್ರ ಪ್ರದೇಶದಲ್ಲಿ ಮೊದಲು ಇದನ್ನು ಪ್ರಯೋಗಕ್ಕೆ ತರಲಾಗಿದೆ. ಅಲ್ಲಿ ಇದು ಶೇಕಡ 100 ರಷ್ಟು ಯಶಸ್ವಿಯಾಗಿದೆ. ಹೀಗಾಗಿ ಈಗಾಗಲೇ ರಾಜ್ಯದಲ್ಲಿ ಎಲ್ಲೆಡೆ ಇದನ್ನು ಪ್ರಯೋಗಿಸಲಾಗುತ್ತಿದೆ.

ಎಲ್ಲೆಲ್ಲಿ ಪ್ರಯೋಗ?:

ವಾರ್ಡ್‌ ಸಂಖ್ಯೆ 1ರ ಹತ್ತಿಕುಣಿ ರಸ್ತೆ, 24 ನೇ ವಾರ್ಡ್‌ನ ಚಟ್ಟಾನ್ ಮಸೀದಿ, ಚಟ್ಟಾನ್ ಏರಿಯಾ, 8 ನೇ ವಾರ್ಡ್‌ ಹತ್ತಿ ಕಡ್ಡ ಏರಿಯಾ, 16ನೇ ವಾರ್ಡ್‌ನ ಹಳ್ಳಿಕಟ್ಟಿ ಹತ್ತಿರ, ವಾರ್ಡ್‌ ಸಂಖ್ಯೆ 15ರ ತಾಯಪ್ಪ ಮನೆ ಹತ್ತಿರ, ವಾರ್ಡ್‌ ನಂಬರ್ 2ರ ಭಾವಿಕಟ್ಟಿ ಮುನಿಯಪ್ಪ, ಫಕೀರವಾಡ ಆಶರ ಖಾನ್ ಮನೆ ಹತ್ತಿರ, ಫಕೀರವಾಡ ರಸ್ತೆ, ವಾರ್ಡ್‌ ಸಂಖ್ಯೆ 19ರ ಸ್ವಪ್ನಾ ಚಿತ್ರ ಮಂದಿರ ಹತ್ತಿರ, ವಾರ್ಡ್‌ ಸಂಖ್ಯೆ 17ರ ಅಂಬೇಡ್ಕರ್‌ ನಗರ, ವಾರ್ಡ್‌ ಸಂಖ್ಯೆ 10ರ ಕೋಲಿವಾಡ ವರಪೇಟ್, ಮೈಲಾಪುರ ಆಗಸಿ ಹತ್ತಿರ, ವಾರ್ಡ್‌ ಸಂಖ್ಯೆ 6ರ ಮೈಲಾಪುರ ಆಗಸಿ, ಮಹೆಬೂಬ ಸುಭಾನಿ ದರ್ಗಾದ ಹತ್ತಿರ ಮುಂತಾದ ಸ್ಥಳಗಳಲ್ಲಿ ನಗರಸಭೆ ಅಧಿಕಾರಿಗಳು ಸೊಳ್ಳೆ ನಿಯಂತ್ರಣಕ್ಕೆ ಸುಟ್ಟ ಆಯಿಲ್‌ ಉಂಡೆ ಬಿಟ್ಟಿದ್ದಾರೆ.

*‌
ನಗರದಲ್ಲಿ ಚಿಕುನ್ ಗುನ್ಯಾ, ಡೆಂಗಿ ಹೆಚ್ಚು ಹರಡುವ ಪ್ರದೇಶಗಳಲ್ಲಿ ಇದನ್ನು ಅನುಷ್ಠಾನ ಮಾಡಲಾಗಿದೆ.
– ಸಂಗಮೇಶ ಪನಿಶೆಟ್ಟಿ, ಪರಿಸರ ಎಂಜಿನಿಯರ್‌, ನಗರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT