ಮಂಗಳವಾರ, ಆಗಸ್ಟ್ 3, 2021
28 °C
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 581ಕ್ಕೆ ಏರಿಕೆ

66 ಜನರಲ್ಲಿ ಕೋವಿಡ್‌ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯಲ್ಲಿ ಸೋಮವಾರ 10 ವರ್ಷದೊಳಗಿನ 11 ಮಕ್ಕಳು ಸೇರಿದಂತೆ 66 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 

ಯಾದಗಿರಿ ತಾಲ್ಲೂಕಿನ ತವರು ನಾಯಕ ತಾಂಡಾದ 20 ವರ್ಷದ ಪುರುಷ, 19 ವರ್ಷದ ಯುವತಿ, 24 ವರ್ಷದ ಪುರುಷ, 3 ವರ್ಷದ ಬಾಲಕಿ, 8 ವರ್ಷದ ಬಾಲಕಿ, 40 ವರ್ಷದ ಮಹಿಳೆ, ಗುರುಮಠಕಲ್ ತಾಲ್ಲೂಕಿನ ಚಿಂತನಳ್ಳಿ ತಾಂಡಾದ 30 ವರ್ಷದ ಪುರುಷ, 25 ವರ್ಷದ ಮಹಿಳೆ, 3 ವರ್ಷದ ಬಾಲಕಿ, 25 ವರ್ಷದ ಮಹಿಳೆ, 43 ವರ್ಷದ ಮಹಿಳೆ, 28 ವರ್ಷದ ಪುರುಷ, 6 ವರ್ಷದ ಬಾಲಕ, 47 ವರ್ಷದ ಮಹಿಳೆ, 38 ವರ್ಷದ ಪುರುಷ, 5 ವರ್ಷದ ಬಾಲಕಿ, 33 ವರ್ಷದ ಪುರುಷ, 6 ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದೆ.

ಯಾದಗಿರಿ ನಗರದ 15 ವರ್ಷದ ಯುವಕ, 48 ವರ್ಷದ ಮಹಿಳೆ, ಅರಿಕೇರಾ ಬಸವನ ತಾಂಡಾದ 40 ವರ್ಷದ ಮಹಿಳೆ, 20 ವರ್ಷದ ಪುರುಷ, ಗೋಪಾಲಪುರದ 40 ವರ್ಷದ ಮಹಿಳೆ, ವೆಂಕಟೇಶ ನಗರದ 42 ವರ್ಷದ ಪುರುಷ ಸೇರಿದಂತೆ 66 ಮಂದಿಗೆ ಕೋವಿಡ್‌–19 ತಗುಲಿದೆ.

66 ಜನ ಸೋಂಕಿತರಲ್ಲಿ 33 ಮಹಿಳೆಯರು, 33 ಪುರುಷರಿದ್ದಾರೆ. ಸೋಂಕಿತರೆಲ್ಲರೂ ಅಂತರರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಮಹಾರಾಷ್ಟ್ರದ ಮುಂಬೈಯಿಂದ ಜಿಲ್ಲೆಗೆ ಹಿಂದಿರುಗಿದವರು. ಜಿಲ್ಲೆಯಲ್ಲಿ ಮೂರು ದಿನಗಳಿಂದ ಕೋವಿಡ್‌ ಪ್ರಕರಣಗಳು ಏರಿಕೆಯಾಗುತ್ತಿವೆ. 

ಜಿಲ್ಲೆಯಲ್ಲಿ ಕೋವಿಡ್-19 ಖಚಿತಪಟ್ಟ 581 ವ್ಯಕ್ತಿಗಳ ಪೈಕಿ 104 ಜನ ಗುಣಮುಖರಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಉಳಿದ 476 ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 993 ಜನ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 2,360 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೊಸ ಜಿಲ್ಲಾಸ್ಪತ್ರೆಯಲ್ಲಿ 129 ಜನರನ್ನು ಪತ್ಯೇಕವಾಗಿರಿಸಲಾಗಿದೆ. ಶಹಾಪುರ ಕೊರೊನಾ ಕೇರ್ ಸೆಂಟರ್‌ನಲ್ಲಿ 40 ಜನರನ್ನು, ಸುರಪುರ ಕೊರೊನಾ ಕೇರ್ ಸೆಂಟರ್‌ನಲ್ಲಿ 71 ಮತ್ತು ಏಕಲವ್ಯ ಕೊರೊನಾ ಕೇರ್ ಸೆಂಟರ್‌ನಲ್ಲಿ 179 ಜನರನ್ನು ಅವಲೋಕನೆಗಾಗಿ ಇರಿಸಲಾಗಿದೆ. ಜಿಲ್ಲೆಯ 32 ಇನ್‍ಸ್ಟಿಟ್ಯೂಶನಲ್ ಕ್ವಾರಂಟೈನ್ ಸೆಂಟರ್‌ಗಳಲ್ಲಿ 1,382 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು