ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ಮಕ್ಕಳಲ್ಲೂ ವಕ್ಕರಿಸಿದ ಕೊರೊನಾ

10 ಬಾಲಕಿಯರು, 5 ಬಾಲಕರಲ್ಲಿ ಕಾಣಿಸಿಕೊಂಡ ಕೋವಿಡ್‌–19
Last Updated 23 ಮೇ 2020, 20:00 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಶನಿವಾರ ಪತ್ತೆಯಾದ 72 ಕೊರೊನಾ ಸೋಂಕು ಪ್ರಕರಣಗಳಲ್ಲಿ 15 ಮಕ್ಕಳಲ್ಲಿ ಕೋವಿಡ್‌–19 ಪತ್ತೆಯಾಗಿದೆ.

ಮಹಾರಾಷ್ಟ್ರದಿಂದ ಬಂದ ವಲಸೆ ಕಾರ್ಮಿಕರಲ್ಲಿ ಮಕ್ಕಳು ಇದ್ದಾರೆ. ಅವರನ್ನು ಜಿಲ್ಲೆಯ ವಿವಿಧ ಕ್ವಾರಂಟೈನ್‌ ಕೇಂದ್ರಗಳಲ್ಲಿ ಇರಿಸಲಾಗಿದೆ. ಅಲ್ಲಿಯೇ ಕೊರೊನಾ ಸೋಂಕು ವಕ್ಕರಿಸಿದೆ.1 ವರ್ಷದ ಬಾಲಕಿಯಿಂದ ಹಿಡಿದು 14 ವರ್ಷದ ಬಾಲಕನವರೆಗೆ ಕೊರೊನಾ ಸೋಂಕು ಪತ್ತೆಯಾಗಿದೆ.

ಬಾಲಕಿಯರ ವಿವರ:10 ವರ್ಷದ ಬಾಲಕಿ (ಪಿ-1751),6 ವರ್ಷದ ಬಾಲಕಿ (ಪಿ-1755), 1 ವರ್ಷದ ಬಾಲಕಿ (ಪಿ-1756), 8 ವರ್ಷದ ಬಾಲಕಿ (ಪಿ-1762), 7 ವರ್ಷದ ಬಾಲಕಿ (ಪಿ-1870), 2 ವರ್ಷದ ಬಾಲಕಿ (ಪಿ-1874), 8 ವರ್ಷದ ಬಾಲಕಿ (ಪಿ-1880), 6 ವರ್ಷದ ಬಾಲಕಿ (ಪಿ-1881), 10 ವರ್ಷದ ಬಾಲಕಿ (ಪಿ-1885), 9 ವರ್ಷದ ಬಾಲಕಿ (ಪಿ-1903)ಯರಲ್ಲಿ ಕೊರೊನಾ ದೃಢಪಟ್ಟಿದೆ.

ಬಾಲಕರ ವಿವರ:8 ವರ್ಷದ ಬಾಲಕ (ಪಿ-1750), 11 ವರ್ಷದ ಬಾಲಕ (ಪಿ-1753),2 ವರ್ಷದ ಬಾಲಕ (ಪಿ-1855), 14 ವರ್ಷದ ಬಾಲಕ (ಪಿ-1863), 7 ವರ್ಷದ ಬಾಲಕ (ಪಿ-1904) ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ.

ದುಖಾನ್‌ವಾಡಿ ಸೀಲ್‌ಡೌನ್:ನಗರದದುಖಾನ್‌ವಾಡಿಯಲ್ಲಿ ಸೀಲ್‌ಡೌನ್ ಮಾಡಲಾಗಿದ್ದು, ಜನರು ಹೊರ ಬರದಂತೆ ಪೊಲೀಸರು ಮನವಿ ಮಾಡುತ್ತಿದ್ದಾರೆ. ಇಲ್ಲಿರುವ ಇಬ್ಬರಿಗೆ ಸೋಂಕು ತಗುಲಿದೆ. ಹೀಗಾಗಿ ಸೀಲ್‌ಡೌನ್‌ ಮಾಡಲಾಗಿದೆಎನ್ನಲಾಗುತ್ತಿದೆ.

ಮಾಹಿತಿ ನೀಡದ ಜಿಲ್ಲಾಡಳಿತ:72 ಪ್ರಕರಣಗಳು ಪತ್ತೆಯಾಗಿರುವ ವಿಷಯವನ್ನು ಮಾತ್ರ ಜಿಲ್ಲಾಡಳಿತ ಪ್ರಕಟಿಸಿದ್ದು, ಯಾವ ಕ್ವಾರಂಟೈನ್‌ ಕೇಂದ್ರದಲ್ಲಿ ಸೋಂಕು ಪತ್ತೆಯಾಗಿದೆ ಎನ್ನುವುದನ್ನು ತಿಳಿಯಪಡಿಸಿಲ್ಲ. ಆದರೆ, ಈ ಕುರಿತುವಾಟ್ಸ್‌ ಆ್ಯಪ್‌ಗಳಲ್ಲಿ ಸಂದೇಶಗಳು ವೈರಲ್‌ ಆಗಿವೆ. ಕನ್ಯಾಕೊಳ್ಳುರಿನ ಬಿಸಿಎಂ ಹಾಸ್ಟೆಲ್‌ನಲ್ಲಿ55, 5 ಕಂದಕೂರ, 8 ಯಾದಗಿರಿ ನಗರ, 1 ಮಗ್ದಮಪುರ ತಾಂಡಾ, 3 ಅರಕೇರಾದಲ್ಲಿ ಸೋಂಕು ಹರಡಿದೆ ಎಂದು ಸಂದೇಶಗಳು ಹರಿದಾಡುತ್ತಿವೆ.

ಮೊದಲಿನಿಂದಲೂ ಕೊರೊನಾ ಪೀಡಿತರ ಪ್ರಾಥಮಿಕ, ದ್ವಿತೀಯ ಸಂಪರ್ಕ ತಿಳಿಯಪಡಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಇಂಥ ವಿಷಯಗಳನ್ನು ಮುಚ್ಚಿಡುವುದರಿಂದ ಮತ್ತಷ್ಟು ಸೋಂಕು ಹರಡುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

***
ಮುಂಜಾಗ್ರತಾ ಕ್ರಮವಾಗಿ ‌ಕ್ವಾರಂಟೈನ್‌ ಕೇಂದ್ರಗಳಲ್ಲಿರುವ ಗರ್ಭಿಣಿ, ಬಾಣಂತಿ, ಮಕ್ಕಳ ಗಂಟಲಿನ ದ್ರವ ಮಾದರಿ ತೆಗೆದುಕೊಳ್ಳಲಾಗುತ್ತಿದೆ. ಹೀಗಾಗಿ ಮಕ್ಕಳಲ್ಲಿ ಸೋಂಕು ಇರುವುದು ದೃಢಪಟ್ಟಿದೆ.
-ಡಾ.ಎಂ.ಎಸ್‌.ಪಾಟೀಲ, ಡಿಎಚ್‌ಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT