ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎರಡು ತಾಸು ಮಳೆಗೆ ₹60 ಲಕ್ಷ ಹಾನಿ!

ಹಾರಿದ ಟಿನ್‌ ಶೆಡ್‌ಗಳು, ಅಶುದ್ಧ ನೀರು ಪೂರೈಕೆ
Published 25 ಮೇ 2024, 16:11 IST
Last Updated 25 ಮೇ 2024, 16:11 IST
ಅಕ್ಷರ ಗಾತ್ರ

ಯಾದಗಿರಿ: ಗುರುವಾರ ಸಂಜೆ ಸುರಿದ ಎರಡು ಗಂಟೆ ಆಲಿಕಲ್ಲು ಸಹಿತ ಬಿರುಗಾಳಿ ಮಳೆಗೆ ಜಿಲ್ಲೆಯಲ್ಲಿ ಅಪಾರ ಹಾನಿಯುಂಟಾಗಿದೆ. ಕೇವಲ ಜೆಸ್ಕಾಂ ಇಲಾಖೆಗೆ ವಿದ್ಯುತ್‌ ಕಂಬ ನೆಲಕ್ಕುರಳಿ, ಪರಿವರ್ತಕ ಹಾಳಾಗಿ ₹60 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ.

ಮೇ 23ರಂದು ಸಂಜೆ 5 ಗಂಟೆಗೆ ಶುರುವಾದ ಮಳೆ ಬರೋಬ್ಬರಿ ಎರಡು ಗಂಟೆಕಾಲ ಸತತವಾಗಿ ಸುರಿಯಿತು. ಇದರಿಂದ ನೂರಾರು ಮರಗಳು, ವಿದ್ಯುತ್‌ ಕಂಬಗಳು, ವಿದ್ಯುತ್ ಪರಿವರ್ತಕಗಳು, ಆವರಣಗೋಡೆಗಳು ಕುಸಿದು ಬಿದ್ದಿವೆ. ಇದರಿಂದ ನಗರ ನಾಗರಿಕರಿಗೆ ಅಲ್ಲದೇ ಸರ್ಕಾರಕ್ಕೂ ಭಾರಿ ನಷ್ಟ ಉಂಟಾಗಿದೆ.

ಹಾರಿದ ಟಿನ್‌ ಶೆಡ್‌ಗಳು: ಭಾರಿ ಬಿರುಗಾಳಿ ಸಹಿತ ಮಳೆಗೆ ನಗರದ ಹಲವೆಡೆ ಟಿನ್‌ ಶೆಡ್‌ಗಳು ಹಾರಿ ಹೋಗಿವೆ. ಇದರಿಂದ ಸೂರು ಕಟ್ಟಿಕೊಳ್ಳಲು ನಿವಾಸಿಗಳು ಪರದಾಡಿದರು.

ಅಶುದ್ಧ ನೀರು ಪೂರೈಕೆ: ನಗರದಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾದ ‍ಪರಿಣಾಮ ಅಶುದ್ಧ ನೀರು ಪೂರೈಕೆಯಾಗುತ್ತಿದೆ. ಅಂಬೇಡ್ಕರ್‌ ನಗರದಲ್ಲಿ ಕಳೆದ 15 ದಿನದಿಂದ ಮಲಿನ ನೀರು ಪೂರೈಕೆಯಾಗುತ್ತಿದೆ. ಶುದ್ಧ ನೀರು ಪೂರೈಕೆ ಮಾಡಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ. 

ಗಿರಿ ನಗರದಲ್ಲಿ ಭಾರಿ ಹಾನಿ: ನಗರದ ಹೊಸಳ್ಳಿ ಕ್ರಾಸ್ ಹತ್ತಿರ ಇರುವ ಗಿರಿನಗರ ಬುಡ್ಗ ಜಂಗಮ ಕಾಲೊನಿಯಲ್ಲಿ ತಡಪಾತ್ರಿ ಕಟ್ಟಿಕೊಂಡು ವಾಸವಾಗಿರುವ ಮನೆಗಳು ಗಾಳಿ ಮಳೆಗೆ ಹಾರಿಹೋಗಿದ್ದು, ಅಪಾರ ನಷ್ಟ ಉಂಟಾಗಿದೆ. ಕಟ್ಟಿಗೆಗಳಿಂದ ಮನೆ ನಿರ್ಮಿಸಿಕೊಂಡಿದ್ದು, ನೆಲಕ್ಕುರಳಿವೆ.

ಅಡುಗೆ ಸಾಮಗ್ರಿ ಎಲ್ಲ ಚೆಲ್ಲಾಪಿಲ್ಲಿಯಾಗಿದ್ದು, ಪರದಾಡುವುದು ಸಾಮಾನ್ಯವಾಗಿದೆ. ಬಯಲೇ ಆಶ್ರಯ ಸ್ಥಾನವಾಗಿದ್ದು, ಮತ್ತೆ ಮಳೆ ಬಂದರೆ ಹೇಗೆ ಎಂದು ಚಿಂತೆಗೀಡಾಗುವಂತೆ ಆಗಿದೆ ಎಂದು ನಿವಾಸಿಗಳು ಆವಲತ್ತುಕೊಂಡಿದ್ದಾರೆ.

ಮಳೆಗೆ ವಿದ್ಯುತ್‌ ಕಂಬ ಉರುಳಿ ಬಿದ್ದಿರುವುದು
ಮಳೆಗೆ ವಿದ್ಯುತ್‌ ಕಂಬ ಉರುಳಿ ಬಿದ್ದಿರುವುದು
ಜೆಸ್ಕಾಂನಿಂದ ವಿದ್ಯುತ್‌ ತಂತಿ ಸರಿಪಡಿಸಲಾಯಿತು
ಜೆಸ್ಕಾಂನಿಂದ ವಿದ್ಯುತ್‌ ತಂತಿ ಸರಿಪಡಿಸಲಾಯಿತು
ಯಾದಗಿರಿಯ ಅಂಬೇಡ್ಕರ್‌ ನಗರದಲ್ಲಿ ಕಲುಷಿತ ನೀರು ಪೂರೈಕೆಯಾಗಿರುವುದು
ಯಾದಗಿರಿಯ ಅಂಬೇಡ್ಕರ್‌ ನಗರದಲ್ಲಿ ಕಲುಷಿತ ನೀರು ಪೂರೈಕೆಯಾಗಿರುವುದು
ರಾಘವೇಂದ್ರ ಡಿ.
ರಾಘವೇಂದ್ರ ಡಿ.
ಹೊನ್ನಮ್ಮ
ಹೊನ್ನಮ್ಮ
ಅಂಜನೇಯ
ಅಂಜನೇಯ

- ವಿವಿಧ ವಾರ್ಡ್‌ಗಳಿಗೆ ಶಾಸಕ ತುನ್ನೂರು ಭೇಟಿ

ಯಾದಗಿರಿ: ಗುರುವಾರ ಸಂಜೆ ಭಾರಿ ಬಿರುಗಾಳಿ ಸಹಿತ ಮಳೆಯಿಂದಾಗಿ ಹಾನಿಗೊಳಗಾದ ನಗರದ ವಿವಿಧ ವಾರ್ಡ್‌ಗಳಿಗೆ ಶುಕ್ರವಾರ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಭೇಟಿ ನೀಡಿ ಪರಿಶೀಲನೆ ಮಾಡಿದರು. ಈ ವೇಳೆ ತಮ್ಮೊಂದಿಗೆ ಇದ್ದ ಅಧಿಕಾರಿಗಳಿಗೆ ತ್ವರಿತವಾಗಿ ಪರಿಹಾರ ಕಾರ್ಯಗಳನ್ನು ಮಾಡುವಂತೆ ಖಡಕ್ ಸೂಚನೆ ನೀಡಿದರು. ನಗರದ ಲಕ್ಷ್ಮೀನಗರ ಬಸವೇಶ್ವರ ನಗರ ಹೊಸಳ್ಳಿ ಕ್ರಾಸ್ ಫಿಲ್ಟರ್ ಬೆಡ್ ಏರಿಯಾ ಅಜೀಜ್ ಕಾಲೊನಿ ಗಂಜ್ ಏರಿಯಾ ಶಶಿಧರ ಕಾಲೊನಿ ಹೊಸ ಬಸ್‌ನಿಲ್ದಾಣ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಹಾನಿಗೊಳಗಾದ ರಸ್ತೆ ಚರಂಡಿ ವಿದ್ಯುತ್ ಕಂಬ ನಳದ ಸಂಪರ್ಕ ಇವೆಲ್ಲವೂಗಳನ್ನು ತ್ವರಿತವಾಗಿ ಸರಿಪಡಿಸಿ ಜನತೆಗೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರಸಭೆ ಹಾಗೂ ಜೆಸ್ಕಾಂ ಸಿಬ್ಬಂದಿ ಹಾನಿಯಾದ ಪ್ರದೇಶಗಳಲ್ಲಿ ಅಗತ್ಯ ಪರಿಹಾರ ಕಾರ್ಯವನ್ನು ಚುರುಕಿನಿಂದ ಮಾಡಬೇಕು. ಜನತೆಯಿಂದ ಯಾವುದೇ ಕುಂದು ಕೊರತೆಗಳು ಬಂದಲ್ಲಿ ತಕ್ಷಣವೇ ಅವುಗಳನ್ನು ನಿವಾರಿಸಲು ಅಧಿಕಾರಿಗಳು ಮುಂದಾಗಬೇಕು. ಮುಂದೆ ಬರುವ ಮಳೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಜನತೆಯೊಂದಿಗೆ ಸಹಕರಿಸಬೇಕೆಂದು ಸೂಚಿಸಿದರು. ನಗರಸಭೆ ಸದಸ್ಯರಾದ ಗಣೇಶ ದುಪ್ಪಲ್ಲಿ ಚನ್ನಕೇಶವಗೌಡ ಶರಣಗೌಡ ಮಾಲಿಪಾಟೀಲ ಆರ್‌ಎಫ್ ಲಕ್ಷ್ಮೀಕಾಂತ ಜೆಇ ಚಂದ್ರಕಾಂತ ಎಇಇ ರಜನಿಕಾಂತ ಅಂಬರೀಶ ಜಾಕಾ ಪ್ರಭಾಕರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT