ಭಾನುವಾರ, ಜನವರಿ 17, 2021
29 °C

ವಡಗೇರಾ: ಕ್ವಾರಿಯಲ್ಲಿ ಯುವಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಡಗೇರಾ: ಮಣ್ಣಿನ ಕ್ವಾರಿಯಲ್ಲಿನ ನೀರಿನಲ್ಲಿ ಎತ್ತು ಮೈತೊಳೆಯಲು ಹೋಗಿ ಯುವಕ ಮೃತಪಟ್ಟ ಘಟನೆ ತಾಲ್ಲೂಕಿನ ಹುಲ್ಕಲ್ ಜೆ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಗ್ರಾಮದ ಶಂಬುಲಿಂಗಪ್ಪ ನಾಟೇಕಾರ್ ಅವರ ಪುತ್ರ ಮಲ್ಲಪ್ಪ (22) ಮೃತರು.

ಬೆಳಿಗ್ಗೆ 10ಗಂಟೆ ಸುಮಾರಿಗೆ ಎತ್ತುಗಳ ಮೈತೊಳೆಯಲು ಹೋದಾಗ ಎತ್ತು ಕೆಸರಿನಲ್ಲಿ ಸಿಕ್ಕಿಹಾಕಿಕೊಂಡಿದೆ. ಎತ್ತನ್ನು ರಕ್ಷಿಸಲು ಮುಂದಾದಾಗ ಈಜು ಬಾರದೆ ಮಲ್ಲಪ್ಪ
ಮೃತಪಟ್ಟಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಮತ್ತು ಈಜು ಪರಿಣತರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಹೊರತೆಗೆದಿದ್ದಾರೆ. ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.