ಯಾದಗಿರಿ: ಗುರುಮಠಕಲ್ ಪಟ್ಟಣದ 23 ವಾರ್ಡ್‌ಗಳಲ್ಲಿ ಪಕ್ಷಬೇಧ ಮರೆತು ಎಲ್ಲಾ ಸಿ.ಸಿ.ರಸ್ತೆ, ಚರಂಡಿ ಹಾಗೂ ಇತರೆ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ ಎಂದು ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಹೇಳಿದರು.

ಗುರುಮಠಕಲ್ ಪಟ್ಟಣದಲ್ಲಿ ಅಮೃತ ನಗರೋತ್ಥಾನ (ಪುರಸಭೆ) ಹಂತ-4ರ ಯೋಜನೆಯಡಿಯಲ್ಲಿ ₹5.40 ಕೋಟಿ ಮತ್ತು 2018-19ನೇ ಸಾಲಿನ ಎಸ್.ಎಫ್.ಸಿ ವಿಶೇಷ ಅನುದಾನದಡಿಯಲ್ಲಿ ಬಿಡುಗಡೆಯಾದ ₹4 ಕೋಟಿ ವಿವಿಧ ವಾರ್ಡ್‌ಗಳ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಮನುಷ್ಯ ನಡೆಯುವಾಗ ಎಡುವುದು ಸಹಜ. ಅದರಂತೆ ನಾನು ತಪ್ಪು ಮಾಡಿರಬಹುದು. ಆದರೆ, ವಿರೋಧಕ್ಕೆ ವಿರೋಧ ಮಾಡದೇ ಎಚ್ಚರಿಸಿದರೆ ತಿದ್ದುಕೊಳ್ಳುತ್ತೇನೆಂದು ಹೇಳಿದ್ದೆ. ಆದರೆ, ಅಂತಹ ಸಂದರ್ಭ ಬಂದಿಲ್ಲ. ಶುದ್ಧ ಹಸ್ತದವನು ಎನ್ನುವುದು ಇಲ್ಲಿನ ಜನರಿಗೆ ಗೊತ್ತಿದೆ ಎಂದು ಹೇಳಿದರು.

ನಾನು ಚುನಾವಣೆ ರಾಜಕೀಯದಿಂದ ಹಿಂದೆ ಸರಿದಿದ್ದೇನೆ. ಮುಂದಿನ ದಿನಗಳಲ್ಲಿ ನಮ್ಮ ಪಕ್ಷದ ನಿಯೋಜಿತ ಅಭ್ಯರ್ಥಿ ಶರಣಗೌಡ ಕಂದಕೂರ ಅವರಿಗೆ ಪ್ರಚಂಡ ಬಹುಮತಗಳಿಂದ ಆಯ್ಕೆ ಮಾಡಿ ವಿಧಾನಸೌಧಕ್ಕೆ ಕಳುಹಿಸಬೇಕೆಂದು ಮನವಿ ಮಾಡಿದರು.

ಪುರಸಭೆಯ ಅಧ್ಯಕ್ಷ ಪಾಪಣ್ಣ ಮನ್ನೆ ಪ್ರಾಸ್ತಾವಿಕ ಮಾತನಾಡಿದರು.

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ, ನರಸಿಂಹಸ್ವಾಮಿ ಉಪತಹಶೀಲ್ದಾರ್, ಭೀಮವ್ವ ಮುಕಡಿ, ಬಾಲಪ್ಪ ನೀರೆಟ್ಟಿ, ಪ್ರಕಾಶ ನೀರೆಟ್ಟಿ, ಜಿ.ತಮ್ಮಣ್ಣ, ಕಿಷ್ಟಾರೆಡ್ಡಿ ಪಾಟೀಲ, ಭೀಮಶಪ್ಪ ಗುಡಿಸಿ, ದೀಪಕ್ ಬೆಳ್ಳಿ, ಬಸಣ್ಣ ದೇವರಹಳ್ಳಿ, ಶರಣು ಆವಂಟಿ, ಸಿರಾಜ್ ಚಿಂತಗುಂಟಾ, ಆಶಣ್ಣ ಬುದ್ಧ, ಅಶೋಕ ಕಲಾಲ್, ಅಂಬಾದಾಸ ಜೀತ್ರಿ, ಬಾಲು ದಾಸರಿ, ನವಾಜರೆಡ್ಡಿ ಪಾಟೀಲ, ವೆಂಕಟಪ್ಪ ಮನ್ನೆ, ಶಾರದ ಕಡೇಚೂರು, ಪವಿತ್ರಮ್ಮ ಲಕ್ಕಿ, ನರ್ಮದಾ ಆವಂಗಪುರ, ಆವಂತಿಕಾ ಆವುಟಿ ಅಹ್ಮದಬಾಯಿ, ದಾವಲ್ ಸಾಬ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.