ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | 5,300 ರೈತರಿಗೆ ₹14.16 ಕೋಟಿ ವಿತರಣೆ

ಕಳೆ ವರ್ ಷಕೃಷ್ಣಾ ನದಿ ಪ್ರವಾಹದಿಂದ ಬೆಳೆ ಹಾನಿ
Last Updated 8 ಆಗಸ್ಟ್ 2020, 16:53 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ 2019ರಲ್ಲಿ ಭೀಕರ ಪ್ರವಾಹ ಬಂದಾಗ ಹೊಲ–ಗದ್ದೆಗಳಿಗೆ ನೀರು ನುಗ್ಗಿ ಆಪಾರ ಹಾನಿಯಾಗಿತ್ತು. ಅಂದಾಜು 100 ಹೆಕ್ಟೇರ್‌ಗಿಂತ ಹೆಚ್ಚು ಬೆಳೆ ನಾಶವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಕಂದಾಯ, ಕೃಷಿ ಇಲಾಖೆ ವತಿಯಿಂದ ಸಮೀಕ್ಷೆ ನಡೆದಿತ್ತು.5,300 ರೈತರಿಗೆ ಪರಿಹಾರವಾಗಿ ₹14.16 ಕೋಟಿ ವಿತರಣೆಮಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ ಇದು ಎಲ್ಲ ರೈತರಿಗೆ ಸಿಕ್ಕಿಲ್ಲ ಎನ್ನುವ ಆರೋಪವೂ ರೈತರಿಂದ ಕೇಳಿ ಬರುತ್ತಿದೆ.

2009ರ ನಂತರ ಹತ್ತು ವರ್ಷದ ನಂತರ ಜಿಲ್ಲೆಯಲ್ಲಿ ಭೀಕರ ಪ್ರವಾಹ ಬಂದಿತ್ತು. 6 ಲಕ್ಷ ಕ್ಯುಸೆಕ್‌ಗೂ ಹೆಚ್ಚು ನೀರು ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಬಿಡಲಾಗಿತ್ತು. ಆಗ ಹೊಲಗಳು ಮೂಲ ಸ್ವರೂಪವನ್ನೇ ಕಳೆದುಕೊಂಡಿದ್ದವು. ಆದರಲ್ಲಿ ಹಲವಾರು ರೈತರಿಗೆ ಹೆಸರು ಬದಲಿಯಾಗಿ ಒಬ್ಬರಿಗೆ ಕೊಡಬೇಕಾಗಿದ್ದನ್ನು ಜಮೀನು ಹಾಳಾಗದವರ ಹೆಸರು ಸೇರಿಸಿ ವಿತರಿಸಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಯಡವಟ್ಟು ಮಾಡಿಕೊಂಡಿದ್ದರು.

442ಮನೆಗಳಿಗೆ ಪರಿಹಾರ:‘ಪ್ರವಾಹದಿಂದ ಹಾನಿಗೊಳಗಾದ 442 ಮನೆಗಳಿಗೆ ತಲಾ ₹10 ಸಾವಿರದಂತೆ ಪರಿಹಾರ ಧನ ವಿತರಿಸಲಾಗಿದೆ. ಇದರಲ್ಲಿ ಮೂರು ಮನೆಗಳು ಪೂರ್ಣ ಹಾನಿಯಾಗಿದ್ದವು. ಇದರಲ್ಲಿ ಇಬ್ಬರು ಮನೆಗಳು ನಿರ್ಮಿಸಿಕೊಂಡಿದ್ದು, ಪರಿಹಾರ ನೀಡಲಾಗಿದೆ. ಇನ್ನು ಒಬ್ಬರು ಮನೆ ನಿರ್ಮಿಸಿಕೊಳ್ಳಿದಿದ್ದರಿಂದ ಪರಿಹಾರ ಅವರಿಗೆ ಸಿಕ್ಕಿಲ್ಲ’ ಎಂದು ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ ಅವರು ಮಾಹಿತಿ ನೀಡಿದರು.

ಪ್ರವಾಹದ ನೀರು ನದಿ ಪಾತ್ರದ ಗ್ರಾಮಗಳ ಮನೆಗಳಿಗೆ ನುಗ್ಗಿತ್ತು. ಆಗ 12 ಮನೆಗಳು ಭಾಗಶಃ ಹಾನಿಯಾಗಿದ್ದವು. 88 ಮನೆಗಳು ಅಲ್ಪ ಸ್ವಲ್ಪ ಹಾನಿಯಾಗಿತ್ತು ಎಂದು ಅಧಿಕಾರಿಗಳು ನೀಡುವ ಮಾಹಿತಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT