ಯಾದಗಿರಿಯಲ್ಲಿ ಭಾನುವಾರ ಭಕ್ತರು ವಿಸರ್ಜನೆಗಾಗಿ ಹೊತ್ತು ತಂದಿದ್ದ ಗಣೇಶ ಮೂರ್ತಿಗಳು
ಯಾದಗಿರಿ ನಗರದ ಸಣ್ಣ ಕೆರೆ ಸಮೀಪದ ಪುಷ್ಕರಣಿಗೆ ಭಾನುವಾರ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಭೇಟಿ ನೀಡಿ ಮೂರ್ತಿಗಳ ವಿಸರ್ಜನೆ ಪರಿಶೀಲಿಸಿದರು
ಯಾದಗಿರಿಯ ಲಕ್ಷ್ಮಿ ನಗರದಲ್ಲಿ ವೀರಕೇಸರಿ ಗಜಾನನ ಉತ್ಸವ ಸಮಿತಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಯ ದರ್ಶನವನ್ನು ಭಾನುವಾರ ಮಹಿಳೆಯರು ಮಕ್ಕಳು ಪಡೆದರು
ಬಿಗಿ ಪೊಲೀಸ್ ಬಂದೋಬಸ್ತ್
ಗಣೇಶ ಮೂರ್ತಿ ವಿಸರ್ಜನೆ ವೇಳೆ ಅಹಿತಕರ ಘಟನೆಗಳು ನಡೆಯುದಂತೆ ತಡೆಲು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸಾರ್ವಜನಿಕವಾಗಿ ಪ್ರತಿಷ್ಠಾಪನೆ ಮಾಡಲಾದ ಮೂರ್ತಿಗಳ ಮೆರವಣಿಗೆಯಲ್ಲಿ ಪೊಲೀಸ್ ಸಿಬ್ಬಂದಿ ಭದ್ರತೆ ನಿಯೋಜನೆ ಮಾಡಲಾಯಿತು. ಸಣ್ಣ ಕೆರೆಯ ಹೊಸಳ್ಳಿ ಮತ್ತು ಗಾಂಧಿ ಚೌಕ್ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಕೆ ಮಾಡಲಾಯಿತು. ಮೂರ್ತಿ ವಿಸರ್ಜನೆಯ ವಾಹನಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಯಿತು.
ಯಾದಗಿರಿಯ ಬಸವೇಶ್ವರ ನಗರದಲ್ಲಿ ಬಾಲ ಗಣೇಶ ಮಂಡಳಿ ವತಿಯಿಂದ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು
15ಕ್ಕೂ ಹೆಚ್ಚು ಪೌರಕಾರ್ಮಿಕರ ನಿಯೋಜನೆ
ಪುಷ್ಕರಣಿಯಲ್ಲಿ ಮೂರ್ತಿ ವಿಸರ್ಜನೆಗಾಗಿ ನಗರಸಭೆಯ 15ಕ್ಕೂ ಹೆಚ್ಚು ಪೌರಕಾರ್ಮಿಕರನ್ನು ನಿಯೋಜನೆ ಮಾಡಲಾಗಿತ್ತು. ಪುಷ್ಕರಣಿ ಬದಿಯಲ್ಲಿ ಭಕ್ತರ ತಂದಿದ್ದ ಮೂರ್ತಿಗಳನ್ನು ಪಡೆದು ಹೂವುಗಳನ್ನು ತೆಗೆದು ನೀರಿನಲ್ಲಿ ವಿಸರ್ಜನೆ ಮಾಡಿದರು. ಪುಷ್ಕರಣಿಗೆ ಭೇಟಿ ನೀಡಿ ಮಾತನಾಡಿದ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ‘ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ನಗರಸಭೆಯಿಂದ ಸಕಲ ವ್ಯವಸ್ಥೆವನ್ನು ಮಾಡಲಾಗಿದೆ. ಎಲ್‍ಇಡಿ ಲೈಟ್ ಮಾಡಿ ದೊಡ್ಡ ಕ್ರೇನ್‍ಗಳ ವ್ಯವಸ್ಥೆ ಮಾಡಲಾಗಿದೆ. 15ಕ್ಕೂ ಹೆಚ್ಚು ಪೌರಕಾರ್ಮಿಕರು ಆರೋಗ್ಯ ನಿರೀಕ್ಷಕರ ನಿಯೋಜನೆ ಮಾಡಲಾಗಿದೆ. ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ’ ಎಂದರು. ಈ ವೇಳೆ ಪರಿಸರ ಎಂಜಿನಿಯರ್ ಪ್ರಶಾಂತ್ ಪ್ರಮುಖರಾದ ಭೀಮಣ್ಣ ಕೆ.ವೈದ್ಯ ಎಸ್.ಐ ಶಿವಪುತ್ರ ಮಂಜುನಾಥ ಸೇರಿದಂತೆ ಹಲವರು ಉಪಸ್ಥಿತರಿದ್ದರು.