ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಡಗೇರಾ: ನಾಲ್ಕನೂರು ಮುಟ್ಟಿದ ಬೆಳ್ಳುಳ್ಳಿ

ವಾಟ್ಕರ್ ನಾಮದೇವ
Published 13 ಫೆಬ್ರುವರಿ 2024, 5:54 IST
Last Updated 13 ಫೆಬ್ರುವರಿ 2024, 5:54 IST
ಅಕ್ಷರ ಗಾತ್ರ

ವಡಗೇರಾ: ಈರುಳ್ಳಿ ಕತ್ತರಿಸಿದರೆ ಕಣ್ಣೀರು ಬರುವುದು ಸಹಜ. ಆದರೆ ಈಗ ಬೆಳ್ಳುಳ್ಳಿ ಸುಲಿಯುವಾಗ ಕಣ್ಣೀರು ಬರುವಂತಾಗಿದೆ.

ಪಟ್ಟಣದ ತರಕಾರಿ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿಯ ಬೆಲೆ ಗಗನಕ್ಕೇರಿದೆ. ಈ ಹಿಂದೆ ಟೊಮೆಟೊ ಬೆಲೆ ಗಗನಕ್ಕೇರಿದಾಗ ಜನಸಾಮಾನ್ಯರು ತತ್ತರಿಸುವಂತಾಗಿತ್ತು. ಈಗ ಅದೇ ಪರಿಸ್ಥಿತಿ ಬೆಳ್ಳಳ್ಳಿ ಖರೀದಿಗೆ ಬಂದಿದೆ.

ಗೃಹಣಿಯರು ಸಾಂಬಾರ್‌ ಹಾಗೂ ಇನ್ನಿತರ ಅಡಿಗೆಗೆ ಬೆಳ್ಳುಳ್ಳಿ ಹಾಕುವ ಬಗ್ಗೆ ಯೋಚಿಸುವಂತಾಗಿದೆ. ಬೆಳ್ಳುಳ್ಳಿ ದರ ಕೆಜಿಗೆ ₹400 ಮುಟ್ಟಿದ್ದು, ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ. ಸಾಂಬಾರ್‌ ಹಾಗೂ ಕೆಲ ಪಲ್ಯಗಳಿಗೆ ಬೆಳ್ಳುಳ್ಳಿ ಹಾಕದೆ ಇದ್ದರೆ ಅದು ಅಪೂರ್ಣವಾಗುತ್ತದೆ. ಬೆಳ್ಳುಳ್ಳಿ ಸ್ವಾದ ಇಲ್ಲದ ಸಾಂಬಾರ್‌ ಊಹಿಸುವುದು ಕಷ್ಟವಾಗಿದೆ. ನೆಗಡಿ, ಕೆಮ್ಮು, ಜ್ವರ ಹೀಗೆ ಕೆಲ ಕಾಯಿಲೆಗಳಿಗೆ ಮನೆಮದ್ದಾಗಿರುವ ಬೆಳ್ಳುಳ್ಳಿ ಬೆಲೆ ಏರಿಕೆಯಾಗಿದ್ದು, ಜನಸಾಮಾನ್ಯರಿಗೆ ತಲೆನೋವಾಗಿ ಪರಿಣಮಿಸಿದೆ.

ತರಕಾರಿ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಏರಿಕೆಯಿಂದಾಗಿ ಗೃಹಣಿಯರು ಅಡುಗೆಯಲ್ಲಿ ಬೆಳ್ಳುಳ್ಳಿ ಬಳಕೆ ಇಲ್ಲದೆ ಸಾಂಬಾರ್, ಪಲ್ಯ ಮಾಡುವಂತಾಗಿದೆ. 

‘ಸಾಮಾನ್ಯವಾಗಿ ಬೆಳ್ಳುಳ್ಳಿ ಕೆ.ಜಿ.ಗೆ ₹100 ಇರುತ್ತಿದ್ದರೆ ಈಗ ಕೆಜಿಗೆ ₹400 ಆಗಿದೆ. ಕೆಜಿಗೆ ₹300 ಬೆಲೆ ಏರಿಕೆಯಾಗಿದೆ’ ಎಂದು ಗೃಹಣಿಯೊಬ್ಬರು ಅಲವತ್ತುಕೊಂಡರು. ಕಳೆದ ಕೆಲ ತಿಂಗಳ ಹಿಂದೆ ಟೊಮೆಟೊ ಬೆಲೆ ಗಗನಕ್ಕೇರಿತ್ತು. ಈಗ ಬೆಳ್ಳುಳ್ಳಿ ಕಾಲ ಬಂದಿದೆ. ಮುಂದೆ ಯಾವ ತರಕಾರಿ ಬೆಲೆ ಏರುತ್ತದೆ’ ಎಂಬ ಚಿಂತೆಯಲ್ಲಿ ಜನತೆ ಇದ್ದಾರೆ. 

ಬೆಳ್ಳುಳ್ಳಿ ಇಲ್ಲದೆ ಸಾಂಬಾರು ಮಾಡಲು ಸಾಧ್ಯವಿಲ್ಲ. ಕೆಲ ಪಲ್ಯಗಳಿಗೆ ಬೆಳ್ಳುಳ್ಳಿ ಬೇಕೇ ಬೇಕು. ಈಗ ಅಡುಗೆಯಲ್ಲಿ ಬೆಳ್ಳುಳ್ಳಿ ಬಳಸುವ ಮುಂಚೆ ನೂರು ಬಾರಿ ಯೋಚಿಸುವಂತಾಗಿದೆ
ಅನಸೂಯಾ, ಗೃಹಿಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT