ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆರ್ಯ ವೈಶ್ಯ ನಿಗಮದಿಂದ ಉತ್ತಮ ಕೆಲಸ’

ಸಾಲ ಮಂಜೂರಾತಿ ಪ್ರಮಾಣಪತ್ರ ವಿತರಿಸಿದ ಅಧ್ಯಕ್ಷ ಅರುಣ
Last Updated 9 ಜುಲೈ 2020, 16:44 IST
ಅಕ್ಷರ ಗಾತ್ರ

ಯಾದಗಿರಿ: ಆರ್ಯ ವೈಶ್ಯ ಸಮುದಾಯದಲ್ಲಿ ಬಡ, ಸಣ್ಣ ವಾಪ್ಯಾರಸ್ಥರನ್ನು ಉತ್ತಮವಾಗಿ ಬೆಳೆಸುವ ನಿಟ್ಟಿನಲ್ಲಿ ನಿಗಮ ಕೆಲಸ ಮಾಡುತ್ತಿದೆ ಎಂದು ಕರ್ನಾಟಕ ಆರ್ಯ ವೈಶ್ಯ ಸಮುದಾಯದ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ ಹೇಳಿದರು.

ನಗರದ ಸರ್ಕೀಟ್ ಹೌಸ್‍ನಲ್ಲಿ ಮಾತನಾಡಿದ ಅವರು, ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಎಂಜಿನಿಯರಿಂಗ್, ವೈದ್ಯಕೀಯ, ಪಿಎಚ್‌.ಡಿ ಇತ್ಯಾದಿ ವೃತ್ತಿಪರ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸುಗಳಲ್ಲಿ ಆರ್ಯ ವೈಶ್ಯ ಸಮುದಾಯದ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಾರ್ಷಿಕ ಶೇ 2ರ ಬಡ್ಡಿದರದಲ್ಲಿ ಗರಿಷ್ಠ ₹1 ಲಕ್ಷ ನೀಡಲಾಗುತ್ತದೆ ಎಂದರು.

ಇನ್ನು ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿಯಲ್ಲಿ ಸ್ವಯಂ ಉದ್ಯೋಗ ಸಾಂಪ್ರದಾಯಕ ವೃತ್ತಿಗಳಲ್ಲದೆ ಇತರೆ ವೃತ್ತಿಗಳಾದ ಹಸು ಸಾಕಾಣಿಕೆ, ವ್ಯಾಪಾರ, ಸೇವಾ ಚಟುವಟಿಕೆಗಳು ಹಾಗೂ ಕೈಗಾರಿಕಾ ಚಟುವಟಿಕೆಗಳಿಗೆ ನಿಗಮದಿಂದ ಗರಿಷ್ಠ ₹ 1 ಲಕ್ಷ ಆರ್ಥಿಕ ನೆರವು ನೀಡಲಾಗುತ್ತಿದ್ದು, ಈ ಎರಡು ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಈ ವೇಳೆ ಜಿಲ್ಲೆಯ ಫಲಾನುಭವಿಗಳಿಗೆ ಸಾಲ ಮಂಜೂರಾತಿ ಪ್ರಮಾಣಪತ್ರವನ್ನು ನಿಗಮದ ಅಧ್ಯಕ್ಷರು ವಿತರಿಸಿದರು.

ನಿಗಮದ ಜಿಲ್ಲಾ ವ್ಯವಸ್ಥಾಪಕ ಜಗದೇವಪ್ಪ, ಸಹಾಯಕ ಪ್ರಧಾನ ವ್ಯವಸ್ಥಾಪಕ ನಾರಾಯಣ, ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ ಓಬಳಶೆಟ್ಟಿ, ರಾಮಯ್ಯ ಕಕ್ಕೇರಾ, ಮಹಾಸಭಾ ಕಾರ್ಯಕಾರಿ ಸದಸ್ಯ ಕಾಸುಲ ವೆಂಕಟಯ್ಯ, ಹನುಮಂತಯ್ಯ ಕಲ್ಯಾಣಿ, ವಿಜಯಕುಮಾರ ಕಲ್ಯಾಣಿ, ನರಸಯ್ಯ ಕಲಕೊಂಡ, ನರಸಿಂಹ ಓಬಳಶೆಟ್ಟಿ, ರಾಜಕುಮಾರ ಓಬಳಶೆಟ್ಟಿ, ಸುದರ್ಶನ ಚಿತ್ರಾಲ್, ಆರ್ಯ ವೈಶ್ಯ ಸಮಾಜದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT