15288 ಹೆಕ್ಟೇರ್ ಪ್ರದೇಶಕ್ಕೆ ನೀರು
240 ಕೆರಗಳಲ್ಲಿ 7727 ಎಂಸಿಎಫ್‌ಟಿ (ಮಿಲಿಯನ್ ಕ್ಯೂಬಿಕ್ ಫೀಟ್) ನೀರು ಸಂಗ್ರಹ ಸಾಮರ್ಥ್ಯವಿದ್ದು 35562 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸಲಿವೆ. ಪ್ರಸ್ತುತ ಭರ್ತಿಯಾಗಿರುವ 91 ಕೆರೆಗಳಲ್ಲಿ 2651 ಎಂಸಿಎಫ್‌ಟಿ ನೀರು ಸಂಗ್ರಹವಾಗಿದೆ. ಕೆರೆ ಅಚ್ಚುಕಟ್ಟಿನ 15288 ಹೆಕ್ಟೇರ್ ಪ್ರದೇಶದ ಜಮೀನುಗಳಿಗೆ ನೀರಾವರಿ ಲಭ್ಯವಾಗಲಿದೆ. ಬಹುತೇಕ ಕೆರೆಗಳ ವ್ಯಾಪ್ತಿಯಲ್ಲಿ ಭತ್ತವನ್ನೇ ಪ್ರಧಾನವಾಗಿ ನಾಟಿ ಮಾಡಲಾಗುತ್ತದೆ. ಶೇ 37.91ರಷ್ಟು ಕೆರೆಗಳು ಭರ್ತಿಯಾಗಿದ್ದು ಶೇ 55ರಷ್ಟು ಕೆರೆಗಳು ಭರ್ತಿಯತ್ತ ಸಾಗುತ್ತಿವೆ. ಸುರಿಯುತ್ತಿರುವ ಮಳೆಯು ಇನ್ನಷ್ಟು ದಿನ ಮುಂದುವರಿದರೆ ನೀರಿನ ಹರಿವು ಏರಿಕೆಯಾಗಿ ಬಹುತೇಕ ಕೆರೆಗಳ ಒಡಲು ಸಹ ಭರ್ತಿಯಾಗುವ ಸಾಧ್ಯತೆ ಇದೆ.