ಯಾದಗಿರಿ: ಹಾಸ್ಟೆಲ್ಗಳಲ್ಲಿ ಸ್ವಚ್ಛತೆ ಮರೀಚಿಕೆ, ವಿದ್ಯಾರ್ಥಿಗಳಿಗೆ ತಕ್ಕಷ್ಟು ಶೌಚಾಲಯ ಇಲ್ಲದೆ ಇರುವುದು, ಊಟ ಕೇಳಿದರೆ ಬೆದರಿಕೆ ಹಾಕುವುದು, ಒಂದೇ ಕೋಣೆಯಲ್ಲಿ 15–20 ಮಕ್ಕಳಿಗೆ ವ್ಯವಸ್ಥೆ ಮಾಡಿರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ರಾಜ್ಯ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ, ‘ಮಕ್ಕಳಿಗೆ ಅನ್ಯಾಯ ಮಾಡುವುದನ್ನು ನೋಡಿದರೆ ನನಗೆ ನಾಚಿಕೆಯಾಗುತ್ತಿದೆ. ನಿಮಗೆ ಏನಾಗುತ್ತಿದೆಯೊ ಗೊತ್ತಿಲ್ಲ. ಸಂಬಂಧಪಟ್ಟ ಪ್ರತಿಯೊಬ್ಬರ ಮೇಲೂ ಕ್ರಿಮಿನಲ್ ಕೇಸ್ ಹಾಕುತ್ತೇನೆ’ ಎಂದು ಎಚ್ಚರಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದ ಆಡಿಟೋರಿಯಂನಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. 24 ಜನ ಲೋಕಾಯುಕ್ತ ಅಧಿಕಾರಿಗಳ ತಂಡ ಮೂರು ದಿನಗಳು ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ, ಪರಿಶೀಲನೆಯಲ್ಲಿ ಕಂಡುಬಂದ ನ್ಯೂನತೆಗಳ ಪಟ್ಟಿಯನ್ನು ಅಧಿಕಾರಿಗಳ ಸಮೂಹದ ಮುಂದೆ ಇರಿಸಿದರು.

ಲೋಕಾಯುಕ್ತ ನ್ಯಾಯಾಧೀಶ ರಮಾಕಾಂತ ಚವ್ಹಾಣ್ ಅವರು, ‘ಭೇಟಿ ನೀಡಿದ 36 ಹಾಸ್ಟೆಲ್ಗಳಲ್ಲಿ ಸ್ವಚ್ಛತೆ ಇರಲಿಲ್ಲ. ನಿಗದಿತ ಸಮಯಕ್ಕೆ ಕಿಟ್ಗಳು ನೀಡಿರಿಲ್ಲ. ಊಟದ ವ್ಯವಸ್ಥೆಯೂ ಸರಿ ಇಲ್ಲ’ ಎನ್ನುತ್ತಿದ್ದಂತೆ, ಪಾಟೀಲ ಅವರು, ಸಂಬಂಧ ಪಟ್ಟ ಇಲಾಖೆಗಳ ಅಧಿಕಾರಿಗಳನ್ನು ಎದ್ದು ನಿಲ್ಲಿಸಿದರು.

‘ನಿರ್ವಹಣೆ ಮಾಡಲು ನಿಮ್ಮಿಂದ ಆಗದೆ ಇದ್ದರೆ ಹಾಸ್ಟೆಲ್ಗಳ ಬಾಗಿಲು ಮುಚ್ಚಿ ಮನೆಗೆ ಹೋಗಿ. ಸರ್ಕಾರದ ದುಡ್ಡು ನಿಮ್ಮ ಸಂಬಳಕ್ಕಾಗಿ ಕೊಡುವುದು ತಪ್ಪುತ್ತದೆ. ಅದೇ ದುಡ್ಡನ್ನು ಮಕ್ಕಳಿಗೆ ಕೊಡಬಹುದು. ಒಂದೇ ಕೋಣೆಯಲ್ಲಿ ಕೊಂಡವಾಡದಂತೆ 20 ಮಕ್ಕಳನ್ನು ಕೂಡಿ ಹಾಕುವುದು ಯಾವ ತರಹದ ಕಲ್ಯಾಣ? ಇಂತಹ ಪರಿಸ್ಥಿತಿಯಲ್ಲಿ ಮಕ್ಕಳು ಹೇಗೆ ಕಲಿಯುತ್ತಾರೆ’ ಎಂದು ಪ್ರಶ್ನಿಸಿದರು.

‘ನಿಮ್ಮ ಜೊತೆಗೆ ಮಾತನಾಡಲು ನನಗೆ ನಾಚಿಕೆ ಆಗುತ್ತಿದೆ. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕಿ ಸಾಕಷ್ಟು ಹಣ ಖರ್ಚು ಮಾಡುತ್ತಿದ್ದೇವೆ. ಇಷ್ಟೆಲ್ಲ ನಡೆಯುತ್ತಿದ್ದರೂ ಒಬ್ಬರೂ ಭೇಟಿಕೊಟ್ಟು ಪರಿಶೀಲಿಸಿಲ್ಲ. ಡಿಸಿ ಸೇರಿದಂತೆ ಎಲ್ಲರ ಮೇಲೂ ಪರ್ಸನಲ್ ಕೇಸ್ ಮಾಡಿ’ ಎಂದು ನ್ಯಾಯಾಧೀಶರಿಗೆ ಸೂಚಿಸಿದರು. ‘2 ತಿಂಗಳ ಬಳಿಕ ಮತ್ತೆ ಬರುತ್ತೇನೆ. ಸರಿಯಾಗಿ ಕೆಲಸ ಮಾಡಿ ವರದಿ ಹಾಕಿದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.

‘ಘನ ತ್ಯಾಜ್ಯ ವಿಲೇವಾರಿಗೆ ತ್ವರಿತ ಕ್ರಮ ತೆಗೆದುಕೊಳ್ಳಬೇಕು. ಹಳೇ ತರಕಾರಿ ಮಾರುಕಟ್ಟೆ ಸುಧಾರಣೆ, ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಯಲ್ಲಿ ನಿರ್ಲಕ್ಷ್ಯ, ನಗರದಲ್ಲಿ ಅಸಮರ್ಪಕ ತ್ಯಾಜ್ಯ ನಿರ್ವಹಣೆ ಸಂಬಂಧ ಪ್ರಕರಣ ದಾಖಲಿಸಲಾಗುವುದು. ಒಂದು ತಿಂಗಳ ಒಳಗೆ ವಿಚಾರಣೆಗೆ ಹಾಜರಾಗಬೇಕು’ ಎಂದು ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ್ ಅವರಿಗೆ ತಾಕೀತು ಮಾಡಿದರು.

‘ರೋಗಿಗಳಿಗೆ ತಕ್ಕಂತೆ ಸಿಬ್ಬಂದಿ ಇಲ್ಲದ ಬಗ್ಗೆ ವೈದ್ಯಕೀಯ ಇಲಾಖೆಯ ನಿರ್ದೇಶಕರು, ಕಾರ್ಯದರ್ಶಿಗಳ ಗಮನಕ್ಕೆ ತರಲಾಗುವುದು. ಸಿಬ್ಬಂದಿ ಕೊರತೆ ಕಾರಣಕ್ಕೆ ಆಸ್ಪತ್ರೆಯ ಸ್ವಚ್ಛತೆ, ಚಿಕಿತ್ಸೆಯಲ್ಲಿ ಲೋಪ ಆಗದಂತೆ ನೋಡಿಕೊಳ್ಳಬೇಕು’ ಎಂದು ‘ಯಿಮ್ಸ್’ ಮುಖ್ಯಸ್ಥರಿಗೆ ಸೂಚಿಸಿದರು.

‘ಜಿಲ್ಲೆಯ ಕುಡಿಯುವ ನೀರಿನ ಘಟಕಗಳ ಸುಧಾರಣೆಗೆ ಗಮನ ನೀಡಬೇಕು. ಫ್ಲೋರೈಡ್ ಅಂಶಯುಕ್ತ, ಮಲೀನ ನೀರು, ಅಪಾಯಕಾರಿ ನೀರು ಇರುವ ಪ್ರದೇಶಗಳನ್ನು ಗುರುತಿಸಿ, ಅಲ್ಲಿನವರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು. ದುರಸ್ತಿಗೆ ಬಂದಿರುವ ಶುದ್ಧ ಕುಡಿಯುವ ನೀರಿನ ಘಟಕಗಳತ್ತ ನಿಗ ವಹಿಸಬೇಕು’ ಎಂದು ಜಿ.ಪಂ ಸಿಇಒಗೆ ಸಲಹೆ ನೀಡಿದರು.

ಒತ್ತುವರಿಯಾಗಿ ತೆರವು ಮಾಡಿರುವ ಕೆರೆಗಳ ಮೂಲ ನಕ್ಷೆಯ ಅನುಸಾರ ಸರ್ವೆ ಮಾಡಬೇಕು. ಒತ್ತುವರಿಗೆ ಸಿಲುಕಿರುವ ಕೆರೆಗಳ ಪುನಶ್ಚೇತನಕ್ಕೆ ಆದ್ಯತೆ ಕೊಡಬೇಕು. ಮಾಜಿ ಸೈನಿಕರಿಗೆ ತ್ವರಿತವಾಗಿ ಭೂಮಿ ಇಲ್ಲವೇ ನಿವೇಶನಗಳನ್ನು ಮಂಜೂರು ಮಾಡುವಂತೆ ಡಿಸಿಗೆ ಹೇಳಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಕಲಬುರಗಿ ಲೋಕಾಯುಕ್ತ ಎಸ್ಪಿ ಸಿದ್ದರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ ಉಪಸ್ಥಿತರಿದ್ದರು.

ಜೀವಂತ ವ್ಯಕ್ತಿಗೆ ಡೆತ್ ಸರ್ಟಿಫಿಕೇಟ್ !

ಹುಣಸಗಿ ತಾಲ್ಲೂಕಿನ ತಹಶೀಲ್ದಾರ್ ಕಚೇರಿಯಲ್ಲಿ ಜೀವಂತವಾಗಿ ಇರುವ ವ್ಯಕ್ತಿಯೊಬ್ಬರಿಗೆ ಮರಣ ಪ್ರಮಾಣ ನೀಡಿದ್ದು ಕೇಳಿ ಲೊಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಅವರು ಅಚ್ಚರಿ ವ್ಯಕ್ತಪಡಿಸಿದರು. ‘ಬದುಕಿದ್ದ ವ್ಯಕ್ತಿಗೆ ಮರಣ ಮರಣ ಪ್ರಮಾಣ ಪತ್ರ ಕೊಟ್ಟಿದ್ದರಲ್ಲಿ ಗ್ರಾಮ ಆಡಳಿತಾಧಿಕಾರಿಯಿಂದ ತಹಶೀಲ್ದಾರ್ವರೆಗಿನ ನಿರ್ಲಕ್ಷ್ಯ ಎದ್ದು ಕಾಣಿಸುತ್ತದೆ' ಎಂದು ಬೇಸರ ವ್ಯಕ್ತಪಡಿಸಿದರು. ಲೋಕಾಯುಕ್ತ ನ್ಯಾಯಾಧೀಶ ತಂಡ ಕಚೇರಿ ತಪಾಸಣೆ ಮಾಡಿ ವಾಪಸ್ ಬರುವಾಗ ಮರಣ ಪ್ರಮಾಣ ಪತ್ರ ಹೊಂದಿರುವ ವ್ಯಕ್ತಿ ಎದುರಿಗೆ ಬಂದು ತನ್ನ ಅಳಲು ಕಚೇರಿಯಲ್ಲಿ ನಿರ್ಲಕ್ಷ್ಯವನ್ನು ತೆರೆದಿಟ್ಟ ಎಂದು ನ್ಯಾ.ರಮಾಕಾಂತ ಚವ್ಹಾಣ್ ಪ್ರಸ್ತಾಪಿಸಿದರು.

ಕಳಪೆ ಬಿತ್ತನೆ ಬೀಜ ಕೀಟನಾಶಕ; ಕ್ರಮಕ್ಕೆ ತಾಕೀತು

ಕಳಪೆ ಹತ್ತಿ ಬೀಜ ಹಾಗೂ ಕೀಟನಾಶಕ ಮಾರಾಟ ಸಂಬಂಧಿತ ದೂರುಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿಗಳು ಇದುವರೆಗೂ ವಿಲೇವಾರಿ ಮಾಡಿ ಕ್ರಮಕ್ಕೆ ಮುಂದಾಗದ ಬಗ್ಗೆ ಕೃಷಿ ಜಂಟಿ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡರು. ಕಾಡಮಗೇರಾ ಗ್ರಾಮದ ರೈತ ತಿಪ್ಪಣ್ಣ ಅವರು ಕಳಪೆ ಹತ್ತಿ ಬೀಜ ಬಿತ್ತಿದ್ದರಿಂದ 14 ಎಕರೆ ಜಮೀನಿನಲ್ಲಿ ಸರಿಯಾಗಿ ಬೆಳೆ ಬಂದಿಲ್ಲ ಎಂದು ದೂರು ನೀಡಿದ್ದರು. ದೂರು ಇತ್ಯರ್ಥವಾಗದೆ ಹಾಗೆಯೇ ಉಳಿದಿದ್ದಕ್ಕೆ ಬೆಂಗಳೂರಿಗೆ ಬಂದು ವಿಚಾರಣೆ ಎದುರಿಸುವಂತೆ ನಿರ್ದೇಶಕರಿಗೆ ಸೂಚಿಸಿದರು. ವಿಜ್ಞಾನಿಗಳ ವರದಿ ತರಿಸಿಕೊಂಡ ನಿರ್ದೇಶಕರು ‘ಹತ್ತಿ ಬೆಳೆಯಲು ಸೂಕ್ತವಲ್ಲಿ ಜಮೀನಿನಲ್ಲಿ ಬಿತ್ತನೆ ಮಾಡಿ ನಿಗದಿಗಿಂತ ಹೆಚ್ಚಾಗಿ ಗೊಬ್ಬರ ಬಳಸಲಾಗಿತ್ತು. ಎರಡು ಬಾರಿ ಹತ್ತಿ ಬಿಡಿಸಿರುವುದು ವರದಿಯಲ್ಲಿದೆ’ ಎಂದು ಸ್ಪಷ್ಟನೆ ನೀಡಿದರು. ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಭೇಟಿ ನೀಡಿದ ನ್ಯಾಯಮೂರ್ತಿಗಳು ವಸತಿ ನಿಲಯಗಳಿಗೆ ನಿರಂತರ ಭೇಟಿ ನೀಡಿ ನಿಲಯದ ಅಧಿಕಾರಿಗಳಿಗೆ ನೀಡಿದ ಸೂಚನೆಗಳನ್ನು ನಮೂದಿಸಬೇಕು. ಸ್ವಚ್ಛತೆ ಮೂಲಸೌಕರ್ಯಗಳಿಗೆ ಆದ್ಯತೆ ನೀಡಿ ವಿದ್ಯಾರ್ಥಿನಿಯರಿಗೆ ತೊಂದರೆ ಆಗದಂತೆ ನಿಗಾವಹಿಸಲು ಸೂಚಿಸಿದರು. ಕಾರ್ಮಿಕ ಇಲಾಖೆ ಕಚೇರಿಗೆ ತೆರಳಿ ‘ಕಾರ್ಮಿಕರನ್ನು ಮದ್ಯಪಾನದಿಂದ ದೂರ ಇರುವಂತೆ ಜಾಗೃತಿ ಮೂಡಿಸಬೇಕು. ಲೇಬರ್ ಕಾರ್ಡ್ ಆರೋಗ್ಯ ವಿಮೆ ಸೌಲಭ್ಯ ತಪ್ಪಿ ಹೋಗದಂತೆ ನೋಡಿಕೊಳ್ಳಲು ತಾಕೀತು ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.