ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಹೆಚ್ಚಿದ ಟೊಮೆಟೊ ಬೆಲೆ; ಇಳಿಕೆಯಾದ ಈರುಳ್ಳಿ

ಬೀನ್ಸ್‌, ನುಗ್ಗೆಕಾಯಿ ಬೆಲೆ ಇಳಿಕೆ; ಸೊಪ್ಪುಗಳ ದರ ಯಥಾಸ್ಥಿತಿ
Last Updated 11 ಸೆಪ್ಟೆಂಬರ್ 2020, 16:39 IST
ಅಕ್ಷರ ಗಾತ್ರ

ಯಾದಗಿರಿ: ಕಳೆದ ವಾರಕ್ಕಿಂತ ಈ ವಾರಟೊಮೆಟೊ ದರ ಕೇಜಿಗೆ ₹10 ಹೆಚ್ಚಳವಾಗಿದ್ದು, ಈರುಳ್ಳಿ ಬೆಲೆ ₹10 ಇಳಿಕೆಯಾಗಿದೆ.ಟೊಮೆಟೊ ಆವಕ ಮಾರುಕಟ್ಟೆಗೆ ಬಾರದಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ. ಜುಲೈ ತಿಂಗಳಲ್ಲಿ ಸುರಿದ ಮಳೆಗೆಟೊಮೆಟೊ ಕಾಯಿಗಳು ಹಾಳಾಗಿದ್ದವು. ಈಗ ಅದರ ಪರಿಣಾಮ ಕಾಣುತ್ತಿದೆ.

ದೊಣ್ಣೆಮೆಣಸಿನಕಾಯಿ ಕಳೆದ ವಾರ₹80 ಬೆಲೆ ಇದ್ದರೆ ಈ ವಾರ ₹60 ಕೇಜಿಗೆ ಮಾರಾಟವಾಗುತ್ತಿದೆ.

ಚವಳೆಕಾಯಿ ಕಳೆದ ವಾರ ₹80 ಇತ್ತು. ಈ ವಾರ ₹60 ಇದೆ. ಕಳೆದ ವಾರ ಬೀನ್ಸ್ ಕೆಜಿಗೆ ₹120 ಇತ್ತು. ಈ ವಾರ ₹80ಕ್ಕೆ ಮಾರಾಟವಾಗುತ್ತಿದೆ. ಇನ್ನುಳಿದಂತೆಹೀರೆಕಾಯಿ, ತೊಂಡೆಕಾಯಿ,ಎಲೆಕೋಸು, ಗಜ್ಜರಿ, ಬದನೆಕಾಯಿ, ಸೋರೆಕಾಯಿ, ಮೂಲಂಗಿ, ಮೆಣಸಿನಕಾಯಿ, ಸೌತೆಕಾಯಿ ದರ ಕಳೆದ ವಾರದಿಂದಸ್ಥಿರವಾಗಿದೆ.

ಸೊಪ್ಪುಗಳ ದರ: ಕಳೆದ ವಾರದಂತೆ ಈ ವಾರವೂ ಸೊಪ್ಪುಗಳ ಬೆಲೆಯಲ್ಲಿ ಹೆಚ್ಚಿನ ದರ ಏರಿಕೆಯಾಗಿಲ್ಲ.ಪಾಲಕ್ ₹20ಕ್ಕೆ ಮೂರು ಕಟ್ಟು,ಸಬ್ಬಸಿಗೆ₹10 ಒಂದು ಕಟ್ಟು,ಮೆಂತೆ ₹20ಕ್ಕೆ ಒಂದು ಕಟ್ಟು,ರಾಜಗಿರಿ ₹20ಕ್ಕೆ ಮೂರು 3 ಕಟ್ಟು,ಪುಂಡಿ ಪಲ್ಯೆ ₹20ಕ್ಕೆ4 ಕಟ್ಟು,ಕೋತಂಬರಿ ₹30ಕ್ಕೆ ಒಂದು ಕಟ್ಟು,ಪುದೀನಾ ₹25ಕ್ಕೆ ಒಂದು ಕಟ್ಟು ದರವಿದೆ. ಎರಡು ವಾರಗಳಿಂದ ಮೊಹರಂ ಹಬ್ಬದ ಅಂಗವಾಗಿ ಕೋತಂಬರಿ, ಪುದೀನಾ ಬೆಲೆ ಗಣನೀಯವಾಗಿ ಹೆಚ್ಚಳವಾಗಿತ್ತು.

ಸೌತೆಕಾಯಿ ಸಿಗುತ್ತಿಲ್ಲ: ‘ಮುಖ್ಯ ಮಾರುಕಟ್ಟೆಯಲ್ಲಿಯೇ ಕಳೆದ ಮೂರು ದಿನದಿಂದಸೌತೆಕಾಯಿ ಸಿಗುತ್ತಿಲ್ಲ.ಈರುಳ್ಳಿ ಸೊಪ್ಪು ₹120 ಕೇಜಿಇದೆ.ಬೆಳ್ಳುಳ್ಳಿ ₹120,ಶುಂಠಿ ₹120 ಕೇಜಿ ಇದೆ. ₹160ಗೆ ಕೇಜಿನುಗ್ಗೆಕಾಯಿ ಇದೆ. ಮಳೆ ಹೆಚ್ಚಾದ ಕಾರಣ ಇವುಗಳ ಬೆಲೆ ಹೆಚ್ಚಾಗಿದೆ’ ಎನ್ನುತ್ತಾರೆ ವ್ಯಾಪಾರಿ ಸಿದ್ದು ಪೂಜಾರಿ.

‘ವಾರದಿಂದ ತರಕಾರಿ ಬೆಲೆಯಲ್ಲಿ ಏರಿಳಿತವಾಗುತ್ತಿದೆ. ಆದರೆ, ಮೆಣಸಿನಕಾಯಿ, ಆಲೂಗಡ್ಡೆ, ಪಾಲಕ್‌ ಮುಂತಾದ ತರಕಾರಿಗಳ ಬೆಲೆ ಸ್ಥಿರವಾಗಿದೆ’ ಎನ್ನುತ್ತಾರೆಗ್ರಾಹಕಶ್ರವಣಕುಮಾರ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT