ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀರ್ತನಾ ಸಾಹಿತ್ಯದ ಅದಮ್ಯ ಚೇತನ ಸಂತ ಕನಕದಾಸರು: ಶಾಸಕ ಚೆನ್ನಾರೆಡ್ಡಿ ಪಾಟೀಲ

Published 1 ಡಿಸೆಂಬರ್ 2023, 6:19 IST
Last Updated 1 ಡಿಸೆಂಬರ್ 2023, 6:19 IST
ಅಕ್ಷರ ಗಾತ್ರ

ಯಾದಗಿರಿ: ಮಹಾಸಂತರಾದ ಕನಕದಾಸರು ದಾಸ ಸಾಹಿತ್ಯಕ್ಕೆ ಅಗಣಿತ ಕೊಡುಗೆ ನೀಡಿದ ತತ್ವಜ್ಞಾನಿಯಾಗಿದ್ದಾರೆ. ಕರುನಾಡಿನ ಕೀರ್ತನಾ ಸಾಹಿತ್ಯದ ಅದಮ್ಯ ಚೇತನವಾಗಿದ್ದಾರೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರ ಅಭಿಪ್ರಾಯಪಟ್ಟರು.

ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಗುರುವಾರ ಜಿಲ್ಲಾಡಳಿತ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಕೆ ಹಾಗೂ ಕನಕದಾಸ ಜಯಂತ್ಯೋತ್ಸವ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ಕನಕದಾಸರ 536ನೇ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದ ಅವರು, ಸಮಾನತೆ, ಸೌಹಾರ್ಧತೆ, ಆದ್ಯಾತ್ಮಿಕ ಸಾಧನೆಗಳ ಕುರಿತು ಅವರು ಉಪದೇಶಿಸಿದ ತತ್ವಗಳನ್ನು ಚಿರಂತನವಾಗಿವೆ. ಸಂತರು ಲೋಕಕ್ಕೆ ಆದ್ಯಾತ್ಮ ಪರಿಮಳವನ್ನು ಪಸರಿಸಿ ದೈವತ್ವ ಪಡೆದವರು. ಅಂತಹ ಮಹಾತ್ಮರಲ್ಲಿ ಕನಕದಾಸರದು ವಿಶಿಷ್ಟವಾದ ಸ್ಥಾನ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಹಾಗೂ ವಿಶೇಷ ಉಪನ್ಯಾಸಕ ಶ್ರೀಶೈಲ ಎನ್.ಪೂಜಾರಿ ಮಾತನಾಡಿ, ಶ್ರೀಮಂತ ಕುಟುಂಬದಲ್ಲಿ ಜನಿಸಿದ ಕನಕದಾಸರು ನಾಡನ್ನಾಳುವ ಅವಕಾಶವನ್ನೂ ತೊರೆದು, ಸರ್ವವನ್ನೂ ತ್ಯಾಗ ಮಾಡಿ, ಮನುಕುಲದ ಉದ್ಧಾರಕ್ಕೆ ಜೀವನವನ್ನು ಮುಡುಪಾಗಿಸಿದ ಮಹಾಸಂತರಾಗಿದ್ದಾರೆ. ಮೌಢ್ಯಗಳನ್ನು ವಿರೋಧಿಸಿದ ಅವರು ಸಮಾಜ ಸುಧಾರಣೆಗೆ ದೀಪದಂತೆ ಬೆಳಕಾದವರು. ಅವರು ಬೋದಿಸಿದ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಕರೆ ನೀಡಿದರು.

ಉಪವಿಭಾಗಾಧಿಕಾರಿ ಹಂಪಣ್ಣ ಸಜ್ಜನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ, ಸಮಾಜದ ಜಿಲ್ಲಾಧ್ಯಕ್ಷ ಮಲ್ಲಣ್ಣ ಐಕೂರು, ಮುಖಂಡರಾದ ವಿಶ್ವನಾಥ ನೀಲಹಳ್ಳಿ, ಹೊನ್ನಪ್ಪ ಮುಸ್ಟೂರ, ಚಂದ್ರಶೇಖರ ವಾರದ, ಆದೆಪ್ಪ ಮಾಸ್ತರ, ಸಾಬಣ್ಣ ಕೆಂಗುರಿ, ಚಂದ್ರಶೇಖರ ಅಲ್ಲಿಪುರ, ಮಲ್ಲಿಕಾರ್ಜುನ ಕರಿಕಲ್, ಸುರೇಶ ಅಲ್ಲಿಪುರ, ಚೆನ್ನಕೇಶ್ವರ ವಿಭೂತಳ್ಳಿ, ಮಲ್ಲಯ್ಯ ಕಸಿಬಿ, ವೆಂಕೋಬ, ಮಲ್ಲು ತೋರಣದಿಪ್ಪಿ, ಸಿದ್ದು ಪೂಜಾರಿ, ಈಶ್ವರಪ್ಪ ಮಾಸ್ತರ, ಬೀರೇಶ ಚಿರತನೊರ್, ಬೀರಲಿಂಗ ಪೂಜಾರಿ, ನರಸಪ್ಪ ಕವಡೆ, ಮರೆಪ್ಪ ಬಿಳ್ಹಾರ, ವೆಂಕಟೇಶ ಕೊಂಕಲ್ ಇದ್ದರು.

ನಗರದ ಕನಕವೃತ್ತದಿಂದ ಕನಕದಾಸರ ಭಾವಚಿತ್ರವನ್ನು ಮೆರವಣಿಗೆ ಮೂಲಕ ವಿದ್ಯಾಮಂಗಲ ಕಾರ್ಯಾಲಯಕ್ಕೆ ತರಲಾಯಿತು. ಮೆರವಣಿಗೆ ಯುದ್ದಕ್ಕೂ ಡೊಳ್ಳು ಕುಣಿತ, ಡಿಜೆ ಸಂಗೀತಕ್ಕೆ ನೃತ್ಯ, ಲಮಾಣಿ ನೃತ್ಯಗಳು ಗಮನಸೆಳೆದವು.

ರಾಮಸಮುದ್ರ: ಯಾದಗಿರಿ ತಾಲ್ಲೂಕಿನ ರಾಮಸಮುದ್ರಾ ಗ್ರಾಮದಲ್ಲಿ ಗುರುವಾರ ಕನಕದಾಸರ ಜಯಂತಿ ಕಾರ್ಯಕ್ರಮ ಜರುಗಿತು.

ಯಾದಗಿರಿ ನಗರದ ಕನಕ ವೃತ್ತದಲ್ಲಿ ಕನಕದಾಸರ ಮೂರ್ತಿಗೆ ಮಾಲಾರ್ಪಣೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದ ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರ. ಮುಖಂಡರಾಧ ಭೀಮಣ್ಣ ಮೇಟಿ ಸಿದ್ದಣಗೌಡ ಕಾರಂನೋರ ಚನ್ನಕೇಶವ ಬಾಣತಿಹಾಳ ಹೊನ್ನಪ್ಪ ಮುಷ್ಟೂರ ಇದ್ದರು.
ಯಾದಗಿರಿ ನಗರದ ಕನಕ ವೃತ್ತದಲ್ಲಿ ಕನಕದಾಸರ ಮೂರ್ತಿಗೆ ಮಾಲಾರ್ಪಣೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದ ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರ. ಮುಖಂಡರಾಧ ಭೀಮಣ್ಣ ಮೇಟಿ ಸಿದ್ದಣಗೌಡ ಕಾರಂನೋರ ಚನ್ನಕೇಶವ ಬಾಣತಿಹಾಳ ಹೊನ್ನಪ್ಪ ಮುಷ್ಟೂರ ಇದ್ದರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯಬಸವರಾಜಪ್ಪ ಬಾಗ್ಲಿ, ಮುಖಮಡರಾದ ಈಶ್ವರ ಪೂಜಾರಿ, ತಾಯಪ್ಪ ಗುನಿಕಿ, ಬಸವಲಿಂಗ ಮೇಸ್ತ್ರಿ, ತಾಯಪ್ಪ ರಾಯಪನೋರ ಸೇರಿದಂತೆ ಗ್ರಾಮಸ್ಥರು ಇದ್ದರು.

ಯಾದಗಿರಿ ತಾಲ್ಲೂಕಿನ ರಾಮಸಮುದ್ರಾ ಗ್ರಾಮದಲ್ಲಿ ಗುರುವಾರ ಕನಕ ಜಯಂತಿ ಆಚರಿಸಲಾಯಿತು.
ಯಾದಗಿರಿ ತಾಲ್ಲೂಕಿನ ರಾಮಸಮುದ್ರಾ ಗ್ರಾಮದಲ್ಲಿ ಗುರುವಾರ ಕನಕ ಜಯಂತಿ ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT