ಶನಿವಾರ, ಅಕ್ಟೋಬರ್ 19, 2019
27 °C

ಯಾದಗಿರಿಯ ಕಣ್ವಮಠ ಸ್ವಾಮೀಜಿಯ ಅನೈತಿಕ ಸಂಬಂಧ: ಆಡಿಯೊ, ವಿಡಿಯೊ ವೈರಲ್‌

Published:
Updated:

ಯಾದಗಿರಿ: ಜಿಲ್ಲೆಯ ಸುರಪುರ ತಾಲ್ಲೂಕಿನ ಪ್ರಸಿದ್ಧ ಕಣ್ವಮಠ ಪೀಠಾಧಿಪತಿ ವಿದ್ಯಾವಾರೀಧಿತೀರ್ಥರು ಅನೈತಿಕ ಸಂಬಂಧ ಇಟ್ಟಿಕೊಂಡಿದ್ದಾರೆ ಎನ್ನಲಾದ ಅಡಿಯೊ ಮತ್ತು ವಿಡಿಯೊ ಬಿಡುಗಡೆಯಾಗಿದ್ದು, ಎಲ್ಲೆಡೆ ವೈರಲ್ ಆಗಿದೆ.

ಸ್ವಾಮೀಜಿ ಮೈಸೂರು ಮೂಲದ ಮಹಿಳೆ ಜೊತೆ ಅಸಭ್ಯಕರವಾಗಿ ವಾಟ್ಸ್ಆ್ಯಪ್ ನಲ್ಲಿ ಚಾಟಿಂಗ್ ಮಾಡಿದ್ದಾರೆ ಎನ್ನಲಾಗಿದ್ದು, ಮಹಿಳೆ ಜೊತೆ ಸ್ವಾಮೀಜಿ ನಡೆಸಿರುವ ಚಾಟಿಂಗ್ ನ ಫೋಟೋಗಳು, ವಿಡಿಯೊಗಳು ಮತ್ತು ಕಾಲ್ ರೆಕಾರ್ಡ್ ಅನಾಮಧೇಯ ವ್ಯಕ್ತಿಯಿಂದ ಹೊರ ಬಂದಿವೆ.

ಅಲ್ಲದೆ ಈ ಸ್ವಾಮೀಜಿಗೆ ಈಗಾಗಲೇ ಎರಡು ಮದುವೆ ಆಗಿದ್ದು, ಮಕ್ಕಳು ಸಹ ಇದ್ದಾರೆಂದು ಹೇಳಲಾಗುತ್ತಿದೆ. ಅಲ್ಲದೆ ಹಲವು ಜಿಲ್ಲೆಗಳಲ್ಲಿರುವ ಕಣ್ವ ಮಠದ ಆಸ್ತಿಯನ್ನು ಅಕ್ರಮವಾಗಿ ಮಾರಾಟ ಮಾಡಿರುವ ಆರೋಪ ಸಹ ಇವರ ಮೇಲಿದೆ. ವಿರೋಧದ ಮಧ್ಯೆಯೂ 2014 ರಲ್ಲಿ ಪೀಠವನ್ನು ಅಲಂಕರಿಸಿದ್ದರು. 

ಪೂಜೆ ನೆಪದಲ್ಲಿ ಬೆಂಗಳೂರಿನ ಯಲಹಂಕ ಶಾಖಾ ಮಠಕ್ಕೆ ಬರುವಂತೆ ಮಹಿಳೆಗೆ ಆಹ್ವಾನಿಸಿರುವುದು ಆಡಿಯೊದಲ್ಲಿದೆ.

ಹನಿ ಟ್ರ್ಯಾಪ್ ಶಂಕೆ?
ಸ್ವಾಮೀಜಿ ಮಹಿಳೆ ಜೊತೆ ಮಾತನಾಡಿದ ಆಡಿಯೊ ಇಟ್ಟುಕೊಂಡು ಮಹಿಳೆಯ ಪತಿ ಹನಿಟ್ರ್ಯಾಪ್ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಇದು ಇನ್ನಷ್ಟೆ ಬೆಳಕಿಗೆ ಬರಬೇಕಿದೆ‌.

ಪೀಠ ತ್ಯಜಿಸುವೇ ಎಂದ ಸ್ವಾಮೀಜಿ: ಮಠದ ಅಭಿವೃದ್ಧಿ ಸಹಿಸದ ಕೆಲವರು ಈ ರೀತಿ ಮಾನಹರಣ ಮಾಡುತ್ತಿದ್ದಾರೆ. ನಮ್ಮ ಮೇಲೆ ಆರೋಪ ಬಂದಿದ್ದರಿಂದ ಪೀಠ ತ್ಯಜಿಸುತ್ತೇನೆ ಎಂದು ಸ್ವಾಮೀಜಿ ಹೇಳಿದ್ದಾರೆ.

ನಮ್ಮ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು. ನಮ್ಮ ಗುರುಗಳಿಗೂ ಇದೇ ರೀತಿ ಪತ್ರ ವ್ಯವಹಾರ ಮಾಡಿ ಪೀಠದಿಂದ ಇಳಿಸಲು ಪ್ರಯತ್ನಿಸಲಾಗಿತ್ತು ಎಂದು ದೂರಿದ್ದಾರೆ.

Post Comments (+)