ಶುಕ್ರವಾರ, ಜನವರಿ 28, 2022
25 °C

ನೆಲ, ಜಲ ರಕ್ಷಣೆಗೆ ಪಣ ತೊಡಿ: ಖಾಸಾ ಮಠದ ಮುರುಘರಾಜೇಂದ್ರ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಕನ್ನಡ ಉಳಿಯಬೇಕಾದರೆ ಪ್ರತಿಯೊಬ್ಬರು ನಾಡು, ನುಡಿ ನೆಲ, ಜಲ ರಕ್ಷಣೆಗೆ ಮುಂದಾಗಬೇಕು. ಹಾಗಾದಲ್ಲಿ ಮಾತ್ರ ಉಳಿಸಲು ಸಾಧ್ಯ. ಇಲ್ಲವಾದರೆ ಈ ತಾಯಿ ಭಾಷೆ ಉಳಿವಿಗೆ ಕಷ್ಟವಾಗುತ್ತದೆ ಎಂದು ಗುರುಮಠಕಲ್ ಖಾಸಾ ಮಠದ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ನಗರದದಲ್ಲಿ ನಮ್ಮ ಕರುನಾಡ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ರಾಜ್ಯೋತ್ಸವ ಸಮಾರಂಭ ಹಾಗೂ ಜಿಲ್ಲೆಯ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿಜೆಪಿ ಯುವ ಮುಖಂಡ ಮಹೇಶರೆಡ್ಡಿ ಮುದ್ನಾಳ, ಸಂಘಟನೆಗಳು ಸಮಾಜ ಸೇವೆ ಮಾಡುತ್ತಾ ಬಂದಿದ್ದು, ಕೋವಿಡ್ ಸಂದರ್ಭದಲ್ಲಿಯೂ ಉತ್ತಮ ಸೇವೆ ಮಾಡಿ ಜನರಿಗೆ ನೆರವಾಗಿವೆ
ಎಂದು ಹೇಳಿದರು.

ನಮ್ಮ ಕರುನಾಡು ರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಟಿ.ಎ.ಶಂಕರೇಗೌಡ ಮಾತನಾಡಿ, ಕನ್ನಡ ಉಳಿಸಿ ಬೆಳೆಸಲು ಎಲ್ಲರೂ ಪಣ ತೊಡಬೇಕು. ಜಿಲ್ಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಉಳಿಸಿಬೆಳೆಸುವ ನಿಟ್ಟಿನಲ್ಲಿ ನಮ್ಮ ಕರುನಾಡು ರಕ್ಷಣಾ ವೇದಿಕೆ ಸದಾ ಮುಂಚೂಣಿಯಲ್ಲಿದೆ ಎಂದರು.

ಝೀ ಟಿವಿ ಸರಿಗಮಪ ಕೋಗಿಲೆ ಖ್ಯಾತಿಯ ಹಣಮಂತ ಲಮಾಣಿ ಮಾತನಾಡಿ, ಜಿಲ್ಲೆಯಲ್ಲಿ ಕಲಾವಿದರಿಗೆ ವೇದಿಕೆ ಒದಗಿಸಿಕೊಟ್ಟ ನಮ್ಮ ಕರುನಾಡು ರಕ್ಷಣಾ ವೇದಿಕೆ ನೊಂದವರಿಗೆ ಸಾಂತ್ವನ ನೀಡುವ ಸಂಘಟನೆಯಾಗಿದ್ದು, ಇವರ ಮಾದರಿ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.

ಯುಡಾ ಅಧ್ಯಕ್ಷ ಬಸವರಾಜ ಚಂಡ್ರಕಿ ಮಾತನಾಡಿ, ಕನ್ನಡ ಪರ ಸಂಘಟನೆಗಳ ಪೈಕಿ ನಮ್ಮ ಕರುನಾಡು ರಕ್ಷಣಾ ವೇದಿಕೆ ವಿಭಿನ್ನವಾಗಿ ಕನ್ನಡ ಕಟ್ಟುವ ಕೆಲಸ ಮಾಡುತ್ತಿದೆ ಎಂದರು.

‘ನಮ್ಮ ಕರುನಾಡು ರಕ್ಷಣಾ ವೇದಿಕೆ’ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕೆ. ಮುದ್ನಾಳ ಅಧ್ಯಕ್ಷತೆ ವಹಿಸಿದ್ದರು. ಶಿವ ಪಾರ್ವತಿ ಮಠದ ಭೀಮಾ ಸ್ವಾಮಿ, ಡಾ.ವಿನಿತಾ, ನಮ್ಮ ಕರವೇ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ರಾಜ ಸಿಕೆ, ರಾಜ್ಯ ಉಪಾಧ್ಯಕ್ಷ ಗಂಗಾಧರ ಕುಂಬಾರ, ಜಿಪಂ ಸದಸ್ಯೆ ಅನಿತಾ ಸುರೇಶ ರಾಠೋಡ, ನಗರಸಭೆ ಉಪಾಧ್ಯಕ್ಷೆ ಪ್ರಭಾವತಿ ಕಲಾಲ್, ನಾಮನಿರ್ದೇಶನ ಸದಸ್ಯೆ ಸುನಿತಾ ಚವಾಣ್‌, ಪರಶುರಾಮ ಚವಾಣ್‌, ವಿದ್ಯಾರ್ಥಿ ಘಟಕದ ಅಧ್ಯಕ್ಷ ಗೋವಿಂದ ಚವಾಣ್‌, ಶಂಕರ ಚವಾಣ್‌, ನಿರಂಜನ ಎಸ್.ಕೆ., ಮಶೇಪ್ಪ ನಾಯಕ, ಆಕಾಶ ರಾಠೋಡ, ನಾಗು ರಾಠೋಡ ಶಹಾಪುರ ಪಾಲ್ಗೊಂಡಿದ್ದರು.

ಶಿಕ್ಷಣ ಕ್ಷೇತ್ರದ ಸಿ.ಎಂ.ಪಟ್ಟೇದಾರ, ಮಹಿಳಾ ಸಾಹಿತಿ ಭಾಗ್ಯವಂತಿ ಕೆಂಭಾವಿ, ಕೋವಿಡ್ ವಾರಿಯರ್ ಪ್ರಿಯಾಂಕಾ ಸಜ್ಜನ್, ಶಾಸಕ ವೆಂಕಟರೆಡ್ಡಿ ಮದ್ನಾಳರ ಆಪ್ತ ಕಾರ್ಯದರ್ಶಿ ಸುಧೀರ್ ಪಾಟೀಲ, ವಿಠ್ಠಲ್ ಭಾಸ್ಕರ್ ವರುಣ, ಸಂಗೀತಗಾರ ಗೋಗಿ, ವಸತಿ ನಿಲಯ ಮೇಲ್ವಿಚಾರಕ ದೇವೇಂದ್ರಪ್ಪ ರುದ್ರವಾರ, ಶಿಕ್ಷಕ ದೇವಿಂದ್ರಪ್ಪ ನಾಟೇಕರ್, ವಿದ್ಯಾರ್ಥಿ ಮುಖಂಡ ಸತೀಶ ದುಪ್ಪಲ್ಲಿ ಮಾಧ್ಯಮ ಕ್ಷೇತ್ರದ ಅಮರೇಶ ಬಿಳ್ಹಾರ, ರಾಜಕುಮಾರ ನಳ್ಳಿಕರ, ಸೈಯದ್ ಮನ್ಸೂರ್‌ ಅವರನ್ನು ಸನ್ಮಾನಿಸಲಾಯಿತು.

ಗುರುಪ್ರಸಾದ ವೈದ್ಯ ನಿರೂಪಿಸಿದರು. ನಿರಂಜನ ವಂದಿಸಿದರು. ಭಕ್ತ ಕುಂಬಾರ, ಕವಿತಾ ಬಿಜಾಸ್ಪೂರ, ಸವಿತಾ, ಗೀತಾ ಸಂಗೀತ ಸುಧೆ ಹರಿಸಿದರು..

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು