ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಾಂಧೀಜಿ, ಶಾಸ್ತ್ರೀಜಿ ಜಯಂತಿ ಆಚರಣೆ

Published : 2 ಅಕ್ಟೋಬರ್ 2024, 14:53 IST
Last Updated : 2 ಅಕ್ಟೋಬರ್ 2024, 14:53 IST
ಫಾಲೋ ಮಾಡಿ
Comments

ನಾರಾಯಣಪುರ: ಇಲ್ಲಿನ ಕೆಬಿಜೆಎನ್ಎಲ್ ಮುಖ್ಯ ಎಂಜನಿಯರ್ ಕಚೇರಿ, ವೃತ್ತ ಕಚೇರಿ, ಅಣೆಕಟ್ಟು ವಿಭಾಗ ಸೇರಿ ಉಪವಿಭಾಗ ಕಚೇರಿಗಳಲ್ಲಿ ಬುಧವಾರ ಮಹಾತ್ಮ ಗಾಂಧೀಜಿ ಜಯಂತಿ ಹಾಗೂ ಲಾಲ್ ಬಹದ್ದೂರ್‌ ಶಾಸ್ತ್ರಿ ಜಯಂತಿಯನ್ನು ಆಚರಿಸಲಾಯಿತು.

ಗಾಂಧೀಜಿ, ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಪೂಜೆ ನೆರವೇರಿಸಿದ ಅಧೀಕ್ಷಕ ಎಂಜಿನಿಯರ್ ರಮೇಶ ರಾಠೋಡ,‘ಮೇರು ವ್ಯಕ್ತಿತ್ವವನ್ನು ಹೊಂದಿರುವ  ಗಾಂಧೀಜಿ ಅವರ ಸತ್ಯ, ಶಾಂತಿ, ಅಹಿಂಸೆ, ಶಿಸ್ತು, ಸ್ವಚ್ಛತೆಗೆ ಪ್ರಾಶಸ್ತ್ಯ ನೀಡದರು. ಲಾಲ್ ಬಹುದ್ದೂರ್‌ ಶಾಸ್ತ್ರಿಯವರ ಸರಳತೆ, ಪ್ರಾಮಾಣಿಕತೆ, ಧೈರ್ಯದಂತಹ ಆದರ್ಶ ಗುಣಗಳು ನಮ್ಮೆಲ್ಲರಿಗೂ ಪ್ರೇರಣೆ ಇದ್ದಂತೆ’ ಎಂದು ಹೇಳಿದರು.

ಇಇ ಹಣಮಂತ ಕೊಣ್ಣೂರ, ಟಿಎ ರಮೇಶ ಜಾಧವ, ಎಎಒ ಆದಂಶಫಿ, ಎಂ.ಕೆ ಪತ್ತಾರ, ವಿಜಯಕುಮಾರ ಅರಳಿ, ಬಾಲಸುಭ್ರಮಣ್ಯ, ಆದಪ್ಪ ಕುಂಬಾರ, ಅಮರೇಶ ರಾಠೋಡ, ಪರಶುರಾಮ ಇತರ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT