ಯಾದಗಿರಿ: ನಗರದ ಶಾಸ್ತ್ರಿ ವೃತ್ತದಿಂದ ರೈಲ್ವೆ ನಿಲ್ದಾಣದವರೆಗೆ 2019-20 ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿ ಮ್ಯಾಕ್ರೋ ಯೋಜನೆಯಡಿಯಲ್ಲಿ ₹1.25 ಕೋಟಿ ವೆಚ್ಚದ ರಸ್ತೆ ಮತ್ತು ಚರಂಡಿ ಹಾಗೂ ಫುಟ್‌ಪಾತ್ ನಿರ್ಮಾಣ ಕಾಮಗಾರಿಗೆ ಶಾಸಕ ವೆಂಕಟರೆಡ್ಡಿ ಮುದ್ನಾಳ ಶುಕ್ರವಾರ ಪೂಜೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಶಾಸಕ ಮುದ್ನಾಳ, ಈ ರಸ್ತೆ ಜನನಿಬಿಡದಿಂದ ಕೂಡಿದೆ. ಮೊದಲು ರಸ್ತೆ ಅಗಲೀಕರಣ ಪೂರ್ಣಗೊಳಿಸಬೇಕು. ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಆ ಕೆಲಸ ಪೂರ್ಣಗೊಂಡ ಬಳಿಕ ಗುತ್ತಿಗೆದಾರರು ಗುಣಮಟ್ಟದಿಂದ ಈ ಕಾಮಗಾರಿ ಕೈಗೊಳ್ಳಬೇಕು ಎಂದು ಸೂಚಿಸಿದರು.

ಗಾಂಧಿ ವೃತ್ತದಲ್ಲಿ ವರ್ತುಲ ರಸ್ತೆಗೆ ಅಡಿಗಲ್ಲು: ನಗರದ ಕೇಂದ್ರ ಬಿಂದು ಗಾಂಧಿವೃತ್ತದಲ್ಲಿ 2019-20 ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿ ಮ್ಯಾಕ್ರೋ ಯೋಜನೆ ಅಡಿಯಲ್ಲಿ ₹21 ಲಕ್ಷ ವೆಚ್ಚದಲ್ಲಿ ವರ್ತುಲ ರಸ್ತೆ ಅಭಿವೃದ್ಧಿ, ಸಂಚಾರ ವ್ಯವಸ್ಥೆ ಹಾಗೂ ಫುಟ್‌ಪಾತ್ ನಿರ್ಮಾಣ ಕಾಮಗಾರಿಗೆ ಶಾಸಕ ವೆಂಕಟರೆಡ್ಡಿ ಮುದ್ನಾಳ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು.

ನಗರದಲ್ಲಿಯೇ ಗಾಂಧಿವೃತ್ತ ಪ್ರಮುಖ ವ್ಯಾಪಾರ ವಹಿವಾಟುಗಳ ಕೇಂದ್ರ ಸ್ಥಳವಾಗಿದೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಯನ್ನು ಪ್ರಾಮಾಣಿಕವಾಗಿ ಕೈಗೊಳ್ಳಬೇಕು ಆಗ ಮಾತ್ರ ಜನರಿಗೆ ಉಪಯೋಗವಾಗುತ್ತದೆ ಎಂದು ಹೇಳಿದರು.

ಈ ವೇಳೆ ನಗರಸಭೆ ಸದಸ್ಯರಾದ ಲಲಿತಾ ಅನಪುರ, ಸುರೇಶ ಮಡ್ಡಿ, ವಿಲಾಸ ಪಾಟೀಲ, ಸ್ವಾಮಿದೇವ ದಾಸನಕೇರಿ, ಚಂದ್ರಕಾಂತ ಮಡ್ಡಿ, ಹಣಮಂತ ಇಟಗಿ, ಅಯ್ಯಣ್ಣ ಹುಂಡೇಕಾರ್, ಗುಂಡೇರಾವ ಪಂಚೆಂದ್ರಿ, ಮಂಜು ದಾಸನಕೇರಿ, ಬಸವರಾಜ ಚಂಡ್ರಕಿ, ರಮೇಶ ದೊಡ್ಮನಿ, ಮಶಪ್ಪ, ಸುರೇಶ ಅಂಬಿಗೇರ, ಬಸವರಾಜಪ್ಪಗೌಡ ಮುಷ್ಟೂರ, ಸೂಗಪ್ಪ ಬೆಳಗೇರಿ, ಅಧಿಕಾರಿಗಳಾದ ಸಿ.ಎಂ.ಪಾಟೀಲ, ವಿಶ್ವನಾಥರೆಡ್ಡಿ ನಾಯ್ಕಲ್, ಬಕ್ಕಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.