ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆ ಪೀಡಿತ ಪ್ರದೇಶಕ್ಕೆ ಶಾಸಕ ನಾಗನಗೌಡ ಕಂದಕೂರ ಭೇಟಿ

Last Updated 15 ಅಕ್ಟೋಬರ್ 2020, 17:00 IST
ಅಕ್ಷರ ಗಾತ್ರ

ಯಾದಗಿರಿ: ತಾಲ್ಲೂಕಿನ ಗೂಡೂರ, ಆನೂರ (ಕೆ) ಗ್ರಾಮಗಳ ಬ್ರಿಜ್ ಕಂ ಬ್ಯಾರೇಜ್ ಸ್ಥಳಕ್ಕೆ ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಅವರು ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.

ಅಧಿಕಾರಿಗಳು ಬೆಳೆ ಹಾನಿಯ ಬಗ್ಗೆ ಶೀಘ್ರ ಸರ್ಕಾರಕ್ಕೆ ವರದಿ ನೀಡಬೇಕು. ಸೂಕ್ತ ಮುಂಜಾಗ್ರತೆ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನದಿ ಪಾತ್ರದಲ್ಲಿ ಎನ್‍ಡಿಆರ್ ಎಫ್ ತಂಡವನ್ನು ನಿಯೋಜಿಸುವಂತೆ ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ ಅವರಿಗೆ ಸೂಚನೆ ನೀಡಿದರು.ಬೆಳೆ ಹಾಳಾದ ಬಗ್ಗೆ ಸೂಕ್ತ ಪರಿಹಾರ ಒದಗಿಸಿ ಎಂದು ಶಾಸಕ ನಾಗನಗೌಡ ಕಂದಕೂರ ಅವರಿಗೆ ನದಿ ಪಾತ್ರದ ಜನತೆ ಮನವಿ ಮಾಡಿದರು.

ಈ ವೇಳೆ ಸೈದಾಪುರ ಪಿಎಸ್‍ಐ ಸುವರ್ಣ ಮಾಲಶೆಟ್ಟಿ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿ ಹಾಗೂ ಬಸವಂತರಾಗೌಡ ಸೈದಾಪುರ, ಮಲ್ಲಣ್ಣಗೌಡ ಮುನಗಾಲ, ಚಂದ್ರುಗೌಡ ಸೈದಾಪುರ, ಗುರುನಾಥರೆಡ್ಡಿಗೌಡ ರೊಟ್ನಡಗಿ, ಬನ್ನಪ್ಪ ಬೆಟ್ಟಪ್ಪನೋರ, ನರಸಪ್ಪ ಕವಡೆ, ರಾಜೇಶ ಉಡುಪಿ, ರುದ್ರಪ್ಪಗೌಡ ಚಿಗಾನೂರು, ದೇವು ಘಂಟಿ ಬಾಡಿಯಾಳ, ಲಕ್ಷ್ಮಣ ನಾಯಕ ಕೂಡ್ಲೂರು, ಬಂದುಗೌಡ ಚಿಗಾನೂರ, ಸಿದ್ದುಗೌಡ ಗೊಂದಡಗಿ, ಚಾಂದ ಪಟೇಲ್ ಗೂಡೂರು, ಬಸ್ಸುಗೌಡ ಬೇಲಿಮೆಂಚಿ ಬೆಳಗುಂದಿ, ಬಂದುಗೌಡ ಭೀಮನಹಳ್ಳಿ, ಶಿವುಗೌಡ ಸೈದಾಪುರ, ಅಲ್ಲಾವುದ್ದಿನ್ ನೀಲಹಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT