ಅಲ್ಲಿಪುರ (ಯರಗೋಳ): ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಜೊತೆ ಕಲಿಕಾ ಪೂರಕ ಪರಿಸರ ನಿರ್ಮಿಸಿರುವ ಅಲ್ಲಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು, ಶಿಕ್ಷಣ ಇಲಾಖೆಗೆ ಮಾದರಿಯಾಗಿದ್ದಾರೆ.

ಪ್ರಭಾರ ಮುಖ್ಯ ಶಿಕ್ಷಕ ವೀರಣ್ಣ ಭಜಂತ್ರಿ ಸಹ ಶಿಕ್ಷಕರ ಶ್ರಮ, ದಾನಿಗಳ ಆರ್ಥಿಕ ನೆರವಿನಿಂದ, ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಮೀರಿಸುವಂತಹ ವಾತಾವರಣ ನಿರ್ಮಿಸಿದ್ದಾರೆ.

ಎಲ್.ಕೆ.ಜಿಯಿಂದ ಏಳನೇ ತರಗತಿವರೆಗೆ 248 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, ಏಳು ಜನ ಪೂರ್ಣಕಾಲಿಕ, ನಾಲ್ಕು ಜನ ಅತಿಥಿ ಶಿಕ್ಷಕರಿದ್ದಾರೆ. ಶಾಲೆಗೆ ಪ್ರವೇಶ ಪಡೆಯುವ ಮಗು ಒಂದು ಗಿಡವನ್ನು ತರುವುದು ಕಡ್ಡಾಯ.

ಶಾಲೆ ಸುತ್ತಲೂ ಗೋಡೆ, ಶೌಚಾಲಯ, ಶುದ್ಧ ನೀರು ಘಟಕ, ವಿದ್ಯುತ್ ಸಂಪರ್ಕ, ಇನ್ವೆರ್ಟರ್, ಕಂಪ್ಯೂಟರ್ ಸೇರಿದಂತೆ ಸಕಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಟಾಟಾ ಕಲಿಕಾ ಸಂಸ್ಥೆಯು ಶಾಲೆಯಲ್ಲಿ ಮಾದರಿ ಗ್ರಂಥಾಲಯ ನಿರ್ಮಿಸಿದೆ. ಶಾಲೆಯ ಸ್ಕೌಟ್ಸ್ ಗೈಡ್ಸ್ ತಂಡದ 25 ವಿದ್ಯಾರ್ಥಿಗಳು ರಾಜ್ಯಪಾಲರ ಪ್ರಶಂಸನಾ ಪತ್ರ ಪಡೆದಿದ್ದಾರೆ.

ಶಾಲೆಯ ವೀಕ್ಷಣೆಗೆ ದಾವಣಗೆರೆ, ಕೊಪ್ಪಳ ಜಿಲ್ಲೆಗಳಿಂದ ಶಿಕ್ಷಣಾಧಿಕಾರಿಗಳು, ಶಾಲಾ ಅಭಿವೃದ್ಧಿ ಮಂಡಳಿ ಅಧ್ಯಕ್ಷರು, ಸದಸ್ಯರು ಆಗಮಿಸಿದ್ದಾರೆ. ಹೊರ ರಾಜ್ಯಗಳಾದ ಕೇರಳ, ಚೆನೈ, ತೆಲಂಗಾಣ, ರಾಜಸ್ಥಾನ್, ದೆಹಲಿಯಿಂದ ಖಾಸಗಿ ಸಂಸ್ಥೆಯ ಸದಸ್ಯರು ಆಗಮಿಸಿ ವೀಕ್ಷಿಸಿದ್ದಾರೆ.

‘ಸಾರ್ವಜನಿಕ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ರಶ್ಮಿ, ಶಿಕ್ಷಣ ಇಲಾಖೆ ಕಲಬುರಗಿ ವಿಭಾಗದ ಹೆಚ್ಚುವರಿ ಆಯುಕ್ತರಾಗಿದ್ದ ಆಕಾಶ್, ಕೆಕೆಆರ್ಡಿಬಿ ಕಾರ್ಯದರ್ಶಿ ನಳಿನ್ ಅತುಲ್, ಜಿ.ಪಂ ಸಿಇಒ ಗರಿಮಾ ಪಂವಾರ್, ಲವೀಶ್ ಒರಡಿಯಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಂಗಾರಪ್ಪ ಕುಂಬಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಸಮುದಾಯದ ಜೊತೆ ಬೆರೆತು ಮಾದರಿ ಶಿಕ್ಷಣ ಸಂಸ್ಥೆಗಳು ಕಟ್ಟುವುದು ಹೇಗೆ ಅನ್ನೋದಕ್ಕೆ ಅಲ್ಲಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಮತ್ತು ಗ್ರಾಮದ ಜನರೇ ಉದಾಹರಣೆ.
ಸಿ.ಎಸ್ ಮುಧೋಳ ಉಪನಿರ್ದೇಶಕ ಸಾರ್ವಜನಿಕ ಶಿಕ್ಷಣ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.