ಜಿಲ್ಲೆಯಲ್ಲಿ 15 ವರ್ಷ ಮೇಲ್ಪಟ್ಟ ವಾಹನಗಳನ್ನು ಕೇಂದ್ರ ಸರ್ಕಾರ ಬಳಕೆ ಮಾಡಬಾರದು ಎಂದು ಆದೇಶಿಸಿದ್ದು ಸದ್ಯ ಮೂರು ತಾಲ್ಲೂಕುಗಳಲ್ಲಿ ತಲಾ ಒಂದೊಂದು ವಾಹನ ಕಾರ್ಯಾಚರಣೆ ಮಾಡುತ್ತಿದೆ
ವೀರೇಶ ಉಕ್ಕಡಕ, ಜಿಲ್ಲಾ ಅಗ್ನಿ ಶಾಮಕದಳ ಠಾಣಾಧಿಕಾರಿ
ವಡಗೇರಾ ತಾಲ್ಲೂಕು ಕೇಂದ್ರವಾಗಿ ಅನೇಕ ವರ್ಷಗಳೇ ಗತಿಸಿದರೂ ಇಲ್ಲಿಯವರೆಗೂ ಅಗ್ನಿಶಾಮಕ ದಳ ಮಂಜೂರು ಆಗಿಲ್ಲ. ಇದರಿಂದ ಬೇಸಿಗೆ ಕಾಲದಲ್ಲಿ ಸಾಕಷ್ಟು ಸಮಸ್ಯೆಯಾಗುತ್ತಿದೆ. ಈ ಭಾಗದಲ್ಲಿ ಅಗ್ನಿ ಶಾಮಕದಳದ ಅವಶ್ಯಕತೆ ಇದೆ.
ಮೈಲಾರಪ್ಪ, ಹಯ್ಯಾಳ(ಬಿ) ಗ್ರಾಮಸ್ಥ
ವಡಗೇರಾ ತಾಲ್ಲೂಕು ಕೇಂದ್ರದಲ್ಲಿ ಅಗ್ನಿಶಾಮಕ ದಳವಿಲ್ಲದಿರುವುದು ಜನಪ್ರತಿನಿಧಿಗಳ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಕೂಡಲೇ ತಾಲ್ಲೂಕು ಕೇಂದ್ರದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಶಾಸಕರು ಕ್ರಮ ಕೈಗೊಳ್ಳಬೇಕು.
ಶರಣು ಇಟಗಿ, ಕರವೇ ಸಂಚಾಲಕ ವಡಗೇರಾ
ಅಗ್ನಿಶಾಮಕ ವಾಹನ ತಲುಪುವ ವೇಳೆಗೆ ತಾನಾಗಿಯೇ ಬೆಂಕಿ ನಂದಿದ ಹಲವು ಘಟನೆಗಳಿವೆ. ಆಗುವ ನಷ್ಟ ಹಾನಿಗಳನ್ನು ತಪ್ಪಿಸುವುದಕ್ಕೆ ನಮ್ಮಲ್ಲೇ ಅಗ್ನಿಶಾಮಕ ಠಾಣೆ ಸ್ಥಾಪಿಸಬೇಕು.
ಸಂಜು ಅಳೆಗಾರ, ಸಾಮಾಜಿಕ ಕಾರ್ಯಕರ್ತ ಗುರುಮಠಕಲ್
ಅಗ್ನಿಶಾಮಕ ಠಾಣೆಗೆ ಈಗಾಗಲೇ ಸ್ಥಳ ಗುರುತಿಸಲಾಗಿದೆ. ಸರ್ಕಾರದ ಹಂತದಲ್ಲಿ ಅನುದಾನ ಸಿಗುತ್ತಲೇ ಅವಶ್ಯಕ ಕೆಲಸಗಳು ನಡೆಯಲಿವೆ.
ಶಾಂತಗೌಡ ಬಿರಾದರ್, ತಹಶೀಲ್ದಾರ್ ಗುರುಮಠಕಲ್
ಯಾದಗಿರಿ ನಗರದ ಅಗ್ನಿ ಶಾಮಕ ಠಾಣೆಯಲ್ಲಿ ಕಾರ್ಯಾಚಣೆಯಲ್ಲಿರುವ ವಾಹನ
ಪ್ರಜಾವಾಣಿ ಚಿತ್ರಗಳು: ರಾಜಕುಮಾರ ನಳ್ಳಿಕರ್