ಕೂಲಿ ಕಾರ್ಮಿಕನ ಮಗಳಿಗೆ ಶೇ 93ರಷ್ಟು ಅಂಕ
ಯಾದಗಿರಿ: ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಗಂಗಿಮಾಳಮ್ಮ ಬುಗ್ಗಪ್ಪ ಅನಕ್ಷರಸ್ಥ ಕುಟುಂಬದ ಕೂಲಿ ಕಾರ್ಮಿಕನ ಮಗಳಾಗಿದ್ದು ಬಡತನದಲ್ಲಿಯೂ ಹೆಚ್ಚಿನ ಶ್ರಮ ಹಾಗೂ ಸತತ ಅಭ್ಯಾಸದ ಬಲದಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 561 (ಶೇ 93) ಅಂಕಗಳನ್ನು ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ. ಈ ಕಾರಣ ಕಾಲೇಜಿನ ಪ್ರಾಚಾರ್ಯೆ ನಿರ್ಮಲಾ ಸಿನ್ನೂರು ವಿದ್ಯಾರ್ಥಿನಿಯನ್ನು ಸನ್ಮಾನಿಸಿದರು. ವಿದ್ಯಾರ್ಥಿನಿಯರಾದ ಸುಮಂಗಲಾ 521(ಶೇ 86.83) ವಿಜಯಲಕ್ಷ್ಮೀ 521 (ಶೇ 83.83) ಶೃತಿ 512 (ಶೇ 85.33) ಶ್ರೀದೇವಿ 512 (ಶೇ 85.33) ಮಹೇಶ್ವರಿ 494 (ಶೇ 82.33) ವಾಣಿಜ್ಯ ವಿಭಾಗದಲ್ಲಿ ಕಾವೇರಿ 505 (ಶೇ 84.14) ವಿಜ್ಞಾನ ವಿಭಾಗದಲ್ಲಿ ತಾಯಮ್ಮ 439 (ಶೇ 73.16) ಅಂಕಗಳನ್ನು ಪಡೆದಿದ್ದಾರೆ. ಕಾಲೇಜಿನ ಸರಾಸರಿ ಫಲಿತಾಂಶ ಶೇ 46.6 ಲಭಿಸಿದ್ದು ವಿದ್ಯಾರ್ಥಿನಿಯರ ಸಾಧನೆಗೆ ಕಾಲೇಜಿನ ಪ್ರಾಚಾರ್ಯೆ ನಿರ್ಮಲಾ ಸಿನ್ನೂರು ಹಾಗೂ ಉಪನ್ಯಾಸಕ ಸಾಬಣ್ಣ ಜುಬೇರ್ ದಶರಥ ಕವಡಿ ಶಂಕರಲಿಂಗಪ್ಪ ಗೂಳಿ ಮರೆಪ್ಪ ನಾಯ್ಕೋಡಿ ಅಶೋಕ ಮಡಿವಾಳ ಬಸವರಾಜ ಮಾನೇಗಾರ ಸತೀಶ ಲತಾ ಪಂಕಜಾ ಸವಿತಾ ಹಾಗೂ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.