ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಜಿಲ್ಲೆಯ ವಿವಿಧೆಡೆ ಮಳೆ

Last Updated 28 ಜುಲೈ 2022, 4:32 IST
ಅಕ್ಷರ ಗಾತ್ರ

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುರುವಾರ ಜಿಟಿಜಿಟಿ ಮಳೆ ಸುರಿಯುತ್ತಿದೆ.

ನಗರದಲ್ಲಿ ಬೆಳಿಗ್ಗೆ 8:30 ರಿಂದ ಜಿಟಿಜಿಟಿ ಮಳೆ ಸುರಿಯುತ್ತಿದೆ‌. ಇನ್ನೂ ಜಿಲ್ಲೆಯ ವಿವಿಧೆಡೆ ಮಳೆ ಸುರಿಯುತ್ತಿದೆ.

ತಾಲ್ಲೂಕಿನ ಸೈದಾಪುರ ವಲಯದಲ್ಲಿ ಧಾರಾಕಾರ ಮಳೆಯಾಗಿದೆ. ನಾರಾಯಣಪುರ, ಹುಣಸಗಿ, ಶಹಾಪುರ, ಸುರಪುರ, ಗುರುಮಠಕಲ್ ಕಡೆ ಮಳೆಯಾಗುತ್ತಿದೆ.‌

ಜನಜೀವನ ಅಸ್ತವ್ಯಸ್ತ: ಜಿಟಿಜಿಟಿ ಮಳೆಯಿಂದ ಜನಜೀವನ ಅಸ್ತವಸ್ತವಾಗಿದೆ. ಬಡಾವಣೆಯ ರಸ್ತೆಗಳು ಕೆಸರುಮಯವಾಗಿವೆ.

ಭೀಮಾ ನದಿಗೆ ನೀರು:
ನಗರದ ಹೊರವಲಯದ ಗುರುಸುಣಗಿ ಬ್ರಿಜ್ ಕಂ ಬ್ಯಾರೇಜ್ ನಿಂದ ಭೀಮಾ ನದಿಗೆ 9 ಗೇಟುಗಳ ಮೂಲಕ ನೀರು ಹರಿಸಲಾಗುತ್ತಿದೆ. 20,000 ಕ್ಯುಸೆಕ್ ಒಳಹರಿವಿದ್ದರೆ, 25,000 ಕ್ಯುಸೆಕ್ ಹೊರಹರಿವಿದೆ. ಇದರಿಂದ ಭೀಮಾ ಸೇತುವೆ ಬಳಿ ಇರುವ ಕಂಗಳೇಶ್ವರ ದೇವಸ್ಥಾನ, ವೀರಾಂಜನೇಯ ದೇವಸ್ಥಾನ ಮುಳುಗಡೆಯಾಗಿವೆ.

ಇನ್ನೂ ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ 20,000 ಸಾವಿರ ಕ್ಯುಸೆಕ್ ಒಳಹರಿವು ಇದ್ದು, ಕೃಷ್ಣಾ ನದಿಗೆ 17,480 ಕ್ಯುಸೆಕ್ ನೀರು ಹರಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT