ಭಾನುವಾರ, ಸೆಪ್ಟೆಂಬರ್ 19, 2021
26 °C

ರಾಜುಗೌಡರಗೆ ಸಚಿವ ಸ್ಥಾನ ನೀಡಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೈದಾಪುರ: ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ನರಸಿಂಹ ನಾಯಕ(ರಾಜುಗೌಡ)ಅವರಿಗೆ ಸಚಿವ ಸ್ಥಾನ ನೀಡಿ ಎಂದು ವಾಲ್ಮೀಕಿ ಸಮುದಾಯದ ಹಿರಿಯ ಮುಖಂಡ ಆಂಜನೇಯ ಮೇಸ್ತ್ರಿ ಮಲ್ಹಾರ ಹೇಳಿದರು.

ಈಚೆಗೆ ಪಟ್ಟಣದಲ್ಲಿ ವಾಲ್ಮೀಕಿ ಸಮುದಾಯದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ರಾಜುಗೌಡ ಮೂರು ಬಾರಿ ಶಾಸಕರಾಗಿದ್ದಾರೆ. ಜಗದೀಶ ಶೆಟ್ಟರ್ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದರು. ನಮ್ಮ ಜಿಲ್ಲೆಯನ್ನು ಸಮಗ್ರ ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗುವ ಅನುಭವ ರಾಜುಗೌಡ ಅವರಿಗಿದ್ದು ಸಚಿವ ಸ್ಥಾನ ನೀಡುವುದರಿಂದ ಬಿಜೆಪಿ ಪಕ್ಷವನ್ನು ಮತ್ತಷ್ಟು ಬಲಗೊಳಿಸುತ್ತಾರೆ. ರಾಜುಗೌಡರನ್ನ ಸಚಿವ ಸಂಪುಟದಿಂದ ಹೊರಗಿಡುವುದರಿಂದ ಪಕ್ಷ ನಿಷ್ಠಾವಂತರನ್ನ ಕಡೆಗಣಿಸಿದಂತಾಗುತ್ತದೆ. ಹೀಗಾಗಿ ಶಾಸಕರಿಗೆ ಮಂತ್ರಿಸ್ಥಾನ ನೀಡಬೇಕೆಂದು ಆಗ್ರಹಿಸಿದರು.

‌ರಾಜು ದೊರೆ, ಬಸವರಾಜ ನಾಯಕ ಸೈದಾಪುರ, ಅಮರೇಶ ನಾಯಕ, ಮಲ್ಲೇಶ ನಾಯಕ ಕೂಡಲೂರು, ನಂದಗೋಪಾಲ, ಹಣಮಂತ್ರಾಯ ನಾಯಕ ಇಂದಿರಾನಗರ, ರೆಡ್ಡಿ ನಾಯಕ ನೀಲಹಳ್ಳಿ, ಮಲ್ಲಪ್ಪ, ಮರೆಪ್ಪ ಕೂಡಲೂರು, ರೆಡ್ಡಿ ನಾಯಕ, ವಿಜಯ ಕುಮಾರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು