ಗುರುವಾರ , ಫೆಬ್ರವರಿ 27, 2020
19 °C

ಬಾಲಕಿ ಮೇಲೆ ಅತ್ಯಾಚಾರ: ವ್ಯಕ್ತಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಜಿಲ್ಲೆಯ ಸುರಪುರ ತಾಲ್ಲೂಕಿನ ಗ್ರಾಮವೊಂದರಲ್ಲಿ ಮೂರು ವರ್ಷದ ಬಾಲಕಿಯ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ ಕೃತ್ಯ ಶನಿವಾರ ಬೆಳಕಿಗೆ ಬಂದಿದೆ.

ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿಯನ್ನು ಹೊತ್ತೊಯ್ದು ಅತ್ಯಾಚಾರ ಎಸಗಿದ ಆರೋಪದ ಮೇಲೆ ನಿಂಗಪ್ಪ ಮರೆಪ್ಪ ಬಿಲ್ಲವ (25) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಮೇಲೆ ಪೋಕ್ಸೊ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈತನ ಮದುವೆಯಾಗಿದ್ದು, ಪತ್ನಿ ಜಗಳವಾಡಿ ತವರಿಗೆ ಹೋಗಿದ್ದಾರೆ ಎನ್ನಲಾಗಿದೆ.

ಬೆಳಕಿಗೆ ಬಂದಿದ್ದು ಹೇಗೆ?: ಬಾಲಕಿಯ ತಂದೆ ಕೆಲಸದ ಕಾರಣ ಸುರಪುರಕ್ಕೆ ತೆರಳಿದ್ದರು. ತಾಯಿ ಮನೆಯಲ್ಲಿ ಮಲಗಿಕೊಂಡಿದ್ದರು. ಬಾಲಕಿ ಮನೆ ಬಳಿ ಆಟವಾಡುತ್ತಿರುವುದನ್ನು ಗಮನಿಸಿದ ಈತ ಅವರಳನ್ನು ಎತ್ತಿಕೊಂಡು ಹೋಗಿದ್ದ. ಬಾಲಕಿಯೊಂದಿಗೆ ಆಟವಾಡುತ್ತಿದ್ದ ಇನ್ನೊಬ್ಬ ಬಾಲಕ ಇದನ್ನು ನೋಡಿದ್ದ.

ಸುರಪುರದಿಂದ ಮನೆಗೆ ಬಂದ ತಂದೆ, ಮಗಳು ಕಾಣದಿರುವುದನ್ನು ನೋಡಿ ಹುಡುಕಾಡಿದ್ದಾರೆ. ಆಗ ಆಟವಾಡುತ್ತಿದ್ದ ಬಾಲಕ ನಡೆದ ವಿಷಯ ತಿಳಿಸಿದ. ಸ್ಥಳಕ್ಕೆ ಹೋಗಿ ನೋಡಿದಾಗ ಬಾಲಕಿ ತೀವ್ರ ರಕ್ತಸ್ರಾವದಿಂದ ಬಳಲುತ್ತಿರುವುದು ಕಂಡುಬಂತು. ತಕ್ಷಣ ಸುರಪುರ ಆಸ್ಪತ್ರೆಯಲ್ಲಿ ದಾಖಲು ಮಾಡಲಾಯಿತು. ಆದರೆ, ಹೆಚ್ಚಿನ ಚಿಕಿತ್ಸೆಗಾಗಿ ಯಾದಗಿರಿಗೆ ಕರೆದೊಯ್ಯುವಂತೆ ವೈದ್ಯರು ಸಲಹೆ ನೀಡಿದ್ದರಿಂದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು