ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿ ಜನ್ಮದಿನದ ಪ್ರಯುಕ್ತ ಸೇವಾ ಸಪ್ತಾಹ ಅಭಿಯಾನ

ಪ್ರಧಾನಿ ಜನ್ಮ ದಿನ, ವಿಭಿನ್ನ ಕಾರ್ಯಕ್ರಮ ಆಯೋಜನೆ: ಡಾ.ಶರಣಭೂಪಾಲರೆಡ್ಡಿ
Last Updated 15 ಸೆಪ್ಟೆಂಬರ್ 2020, 16:22 IST
ಅಕ್ಷರ ಗಾತ್ರ

ಯಾದಗಿರಿ: ಸೆ.17ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ 70ನೇ ಜನ್ಮದಿನ ಅಂಗವಾಗಿ ಸೇವಾ ಸಪ್ತಾಹ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಡಾ. ಶರಣಭೂಪಾಲರೆಡ್ಡಿ ಹೇಳಿದರು.

ಸೆ.14ರಿಂದ 20ರ ವರೆಗೆ ನಡೆಯುವ ಸಪ್ತಾಹದಲ್ಲಿ ವಿವಿಧ, ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯುವ ಮೋರ್ಚಾ ವತಿಯಿಂದ 70 ಯುವಕರಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. 70 ರೋಗಿಗಳ ಆರೈಕೆ ಮಾಡುವ ಕಾರ್ಯಕ್ರಮ, 70 ಸಾಧಕರಿಗೆ ಸನ್ಮಾನ, ಅಲ್ಲದೆ ಮಹಿಳಾ ಮೋರ್ಚಾ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸೆಪ್ಟೆಂಬರ್‌ನಿಂದ ಅಕ್ಟೋಬರ್‌ ವರೆಗೆ ವಿವಿಧ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ದೀನ್‌ ದಯಾಳ ಉಪಾಧ್ಯಾಯ ಜನ್ಮದಿನ, ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಸಮಗ್ರ ಅಧ್ಯಯನ ಸಪ್ತಾಹ, ಡ್ರಗ್ಸ್‌ ಮುಕ್ತಕಾರ್ಯಕ್ರಮಹಮ್ಮಿಕೊಳ್ಳಲಾಗಿದೆ ಎಂದರು.

ಡ್ರಗ್ಸ್ ನಿರ್ಮೂಲನೆಗೆ ಪಣ: ಯಾವ ಸರ್ಕಾರವೂ ಕೈ ಹಾಕದ ಕೆಲಸಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕೈಹಾಕಿದೆ. ಡ್ರಗ್ಸ್‌ ಜಾಲ ನಿರ್ಮೂಲನೆಗೆ ಪಣ ತೊಟ್ಟಿದೆ. ಇದರಲ್ಲಿ ಯಾರೇ ಭಾಗಿಯಾಗಿದ್ದರೂ ಅವರಿಗೆ ಶಿಕ್ಷೆ ಆಗಲಿದೆ ಎಂದರು.

ಈ ವೇಳೆ ಮಾಜಿ ಶಾಸಕ ವೀರಬಸವಂತ ರೆಡ್ಡಿ ಮುದ್ನಾಳ, ರಾಜ್ಯ ಮಾಜಿ ಉಪಾಧ್ಯಕ್ಷೆ ನಾಗರತ್ನ ಕುಪ್ಪಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವೇಂದ್ರನಾಥ್ ನಾದ, ಜಿಲ್ಲಾ ಉಪಾಧ್ಯಕ್ಷ ಚೆನ್ನಾರೆಡ್ಡಿ ಬಿಳ್ಹಾರ್, ರವಿ ಮಾಲಿಪಾಟೀಲ, ದೇವದಾಸ ಗುರಮಠಕಲ್, ವಿವಿಧ ಮೋರ್ಚಾಗಳ ಅಧ್ಯಕ್ಷರಾದ ಶೇಖರ ದೋರೆ, ಭೀಮಾಶಂಕರ ಬಿಲ್ಲವ್, ವೀಣಾ ಮೋದಿ, ದೇವಿಂದ್ರಪ್ಪ ಖಾನಾಪುರ, ರಿಯಾಜ್ ಕೊಲ್ಲೂರ, ಮೌನೇಶ ಬೆಳಗೇರ, ಜಿಲ್ಲಾ ಮಧ್ಯಮ ಪ್ರಮುಖ ವಿರುಪಾಕ್ಷಯ್ಯ ಸ್ವಾಮಿ ಹೆಡಗಿಮದ್ರ, ನಗರಸಭೆ ಸದಸ್ಯ ಹನುಮಂತ ಇಟಗಿ, ರಮೇಶ್ ದೊಡ್ಡಮನಿ, ಮಲ್ಲು ಕೋಲಿವಾಡ, ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT