ಕೆಂಭಾವಿ: ಪಟ್ಟಣದ ಹಲವು ರಸ್ತೆಗಳಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ತೊಂದರೆ ಅನುಭವಿಸುವಂತಾಗಿದೆ.

ರಸ್ತೆಯುದ್ದಕ್ಕೂ ಓಡಾಡುವ ಬಿಡಾಡಿ ದನಗಳು ವಾಹನ ಸಂಚಾರಿಗಳ ಪ್ರಾಣಕ್ಕೆ ಸಂಚಕಾರ ತಂದೊಡ್ಡಿದ್ದು, ರಸ್ತೆ ಅಪಘಾತಗಳಿಗೂ ಕಾರಣವಾಗುತ್ತಿವೆ. ಪುರಸಭೆ ಅಧಿಕಾರಿಗಳು ಮಾತ್ರ ಇದುವರೆಗೂ ಕ್ರಮ ಜರುಗಿಸಿಲ್ಲ ಎಂದು ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಪಟ್ಟಣದ ಹಳೆ ಬಸ್ ನಿಲ್ದಾಣದ ಹತ್ತಿರ ರಾಜ್ಯ ಹೆದ್ದಾರಿ ಇದ್ದು, ದಿನವಿಡೀ ಸಾವಿರಾರು ವಾಹನಗಳು ಸಂಚರಿಸುತ್ತವೆ. ಬಿಡಾಡಿ ದನಗಳು ಹಗಲು ರಾತ್ರಿಯನ್ನದೇ ರಸ್ತೆಯ ಮೇಲೆ ಮಲಗಿಕೊಳ್ಳುತ್ತಿರುವುದರಿಂದ ಅಪಘಾತಗಳು ಸಂಭವಿಸಿ ಸವಾರರು ಗಾಯಗೊಂಡ ಉದಾಹರಣೆಗಳು ಇವೆ. ಬೀಡಾಡಿ ದನಗಳ ಜೊತೆಗೆ ಹೆಚ್ಚಾಗಿ ಜನರು ತಮ್ಮ ಮನೆಯಲ್ಲಿರುವ ದನಗಳನ್ನೂ ರಸ್ತೆಗೆ ಬಿಡುತ್ತಾರೆ. ಇದರಿಂದ ರಸ್ತೆ ತುಂಬೆಲ್ಲ ದನಗಳ ಹಾವಳಿ ಹೆಚ್ಚಿದೆ.

ಉತ್ತರಾಧಿ ಮಠದ ಬೀದಿ, ಟಿಪ್ಪು ಸುಲ್ತಾನ್ ವೃತ್ತ, ಜೈ ಹನುಮಾನ ಚೌಕ್, ಮುಖ್ಯ ಬಜಾರ ಪ್ರದೇಶ, ಹಳೆ ಬಸ್ ನಿಲ್ದಾಣ, ಸಂಜೀವನಗರ, ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗ ಸೇರಿದಂತೆ ಹಲವು ಕಡೆಗಳಲ್ಲಿ ರಾತ್ರಿ ಸಮಯದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರಿಗೆ ತಲೆನೋವಾಗಿ ಪರಿಣಮಿಸಿದೆ.

ಬಿಡಾಡಿ ದನಗಳ ಹಾವಳಿ ತಡೆಗೆ ಹಲವು ಬಾರಿ ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಇದುವರೆಗೂ ಕ್ರಮ ಜರುಗಿಸಿಲ್ಲ
ಶ್ರೀಶೈಲ ಕಾಚಾಪುರ

ರಸ್ತೆ ದನಗಳ ಬಿಟ್ಟರೆ ಗೋಶಾಲೆ ಕಳಿಸುವ ಎಚ್ಚರಿಕೆ

‘ಪಟ್ಟಣದ ಸಾಕು ದನಗಳ ಮಾಲೀಕರು ಅನಾವಶ್ಯಕವಾಗಿ ಜಾನುವಾರಗಳನ್ನು ರಸ್ತೆಗೆ ಬಿಡದೆ ಮನೆಯಲ್ಲಿ ಕಟ್ಟಬೇಕು. ಒಂದು ವೇಳೆ ರಸ್ತೆಯಲ್ಲಿ ಜಾನುವಾರಗಳು ಕಂಡು ಬಂದರೆ ಪುರಸಭೆಯ ವಾಹನಗಳಲ್ಲಿ ಅವುಗಳನ್ನು ಸಮೀಪದ ಗೋಶಾಲೆಗೆ ಕಳಿಸಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ಮಹ್ಮದ್ ಯುಸೂಫ್ ತಿಳಿಸಿದ್ದಾರೆ. ‘ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು ಆದಷ್ಟು ಜಾನುವಾರುಗಳ ಮಾಲೀಕರು ತಮ್ಮ ಮನೆಗಳಲ್ಲಿಯೆ ಕಟ್ಟಬೇಕು’ ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.