ಹುಣಸಗಿ (ಯಾದಗಿರಿ ಜಿಲ್ಲೆ): ರಾಜಕೀಯ ವೈಷಮ್ಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆಯಾಗಿದ್ದು, ಈ ಕುರಿತಂತೆ ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಪೊಲೀಸ್ ಠಾಣೆಯಲ್ಲಿ 68 ಜನರು ವಿರುದ್ಧ ಪ್ರಕರಣ ದಾಖಲಾಗಿದೆ.

‘ಗುರುವಾರ ರಾತ್ರಿ ತಾಲ್ಲೂಕಿನ ರಾಯನಪಾಳಾ ಗ್ರಾಮದಲ್ಲಿ ಈ ಪ್ರಕರಣ ನಡೆದಿದ್ದು, ಆರು ಜನರ ಮೇಲೆ ಹಲ್ಲೆ ನಡೆದಿದೆ.

ಹಲ್ಲೆಯಾದವರಲ್ಲಿ ಒಬ್ಬ ಮಹಿಳೆಯನ್ನು ಯಾದಗಿರಿ ಆಸ್ಪತ್ರೆಗೆ ಚಿಕಿತ್ಸೆಗೆ ಕಳಿಸಿಕೊಡಲಾಗಿದೆ. ಈ ಪ್ರಕರಣದಲ್ಲಿ ಸದ್ಯ10 ಜನರನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ಪಿ ಸಂಗೀತಾ ತಿಳಿಸಿದರು.

‘ಗ್ರಾಮದಲ್ಲಿ ಸದ್ಯ ಶಾಂತಿಯುತ ವಾತಾವರಣ ಇದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ’ ಎಂದು ಡಿವೈಎಸ್ಪಿ ಜಾವೇದ್ ಇನಾಂದಾರ ತಿಳಿಸಿದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ, ‘ಬಿಜೆಪಿಯವರು ಹತಾಶರಾಗಿ ಇಂಥ ಕೆಲಸ ಮಾಡುತ್ತಿದ್ದಾರೆ. ಇಂಥವು ಮಾಡಬಾರದು. ಜನರ ಮೇಲೆ ವಿಶ್ವಾಸವಿಡಬೇಕು. ಅವರು ಯಾರಿಗೆ ಮತ ಹಾಕುತ್ತಾರೊ ಅವರು ಗೆಲ್ಲುತ್ತಾರೆ. ಯಾಕೆ ತಲೆ ಕೆಡಿಸಿಕೊಳ್ಳಬೇಕು. ಅಂಜಿಸಿ ಮತ ತೆಗೆದುಕೊಳ್ಳುವುದನ್ನು ಬಿಜೆಪಿಯವರು ಮೊದಲಿಂದಲೂ ಮಾಡಿದ್ದಾರೆ. ಈಗಲೂ ಅದೇ ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ವರ್ಷ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್–ಬಿಜೆಪಿ ಕಾರ್ಯಕರ್ತರು ಪರಸ್ಪರ ಕಲ್ಲು ತೂರಾಟ ಮಾಡಿ ಕಾರು ಜಖಂಗೊಂಡಿತ್ತು. ಹಲವರಿಗೆ ಗಾಯಗಳಾಗಿದ್ದವು. ಮತ್ತೆ ಈ ವರ್ಷವೂ ರಾಜಕೀಯ ಕಾರಣಕ್ಕಾಗಿ ಸುರಪುರ ಮತಕ್ಷೇತ್ರದಲ್ಲಿ ಹಲ್ಲೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.