ಶಹಾಪುರ: ದಾಖಲೆಯಿಲ್ಲದ ಹಾಗೂ ವಿವಿಧ ಅಪರಾಧ ಪ್ರಕರಣಗಳಲ್ಲಿ ಇಲ್ಲಿನ ಕೋರ್ಟ್ ವಶದಲ್ಲಿದ್ದ 14 ದ್ವಿಚಕ್ರ ವಾಹನಗಳನ್ನು ಹರಾಜು ನಡೆಸಲಾಗಿದ್ದು,₹ 1.85 ಲಕ್ಷ ಹಣ ಸಂಗ್ರಹವಾಗಿದೆ.
ಕೋರ್ಟ್ ಆವರಣದಲ್ಲಿ ಸೋಮವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದ ಜನ ಪಾಲ್ಗೊಂಡಿದ್ದರು. ಸರ್ಕಾರಿ ಸವಾಲು ಮೊದಲು ಆರಂಭಿಸಿ ನಂತರ ಹೆಚ್ಚಿನ ಬೆಲೆಗೆ ಪಡೆದುಕೊಂಡ ವ್ಯಕ್ತಿ ಹಣ ಸಂದಾಯ ಮಾಡಿದ ಬಳಿಕ ವಾಹನ ಹಸ್ತಾಂತರ ಮಾಡಲಾಯಿತು.
‘ಪ್ರಕರಣವೂ ವಿಲೇವಾರಿಯಾಗಿದ್ದು, ಹರಾಜಿನಲ್ಲಿ ಭಾಗವಹಿಸಿ ವಾಹನ ಪಡೆದವರ ಹೆಸರಿನಲ್ಲಿ ವಾಹನ ನೋಂದಣಿ ಮಾಡಿಸಿಕೊಳ್ಳಲು ಅವಕಾಶವಿದೆ’ ಎಂದು ಶಿರಸ್ತೆದಾರ ಪ್ರಕಾಶ ಪಾಟೀಲ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.